ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ವಶಕ್ಕೆ ಪಡೆದಿರುವ ಜಾರಿ ನಿರ್ದೇಶನಾಲಯ, ಶುಕ್ರವಾರ ಡಿಕೆಶಿಯವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದೆ. ಈ ವೇಳೆ ಆರೋಪಿ ಪರ ವಕೀಲರು ಜಾಮೀನು ಬೇಕು ಅಂದ್ರೆ, ಇಡಿ ವಕೀಲರು ಶಿವಕುಮಾರ್ ಅವರನ್ನು ಮತ್ತಷ್ಟು ತನಿಖೆಗೆ ಒಳಪಡಿಸಬೇಕಾಗಿದೆ, ಹೀಗಾಗಿ 5 ದಿನಗಳ ಕಾಲ ನಮ್ಮ ವಶಕ್ಕೆ ಕೊಡಿ ಅಂದಿದ್ದಾರೆ.
ಆರೋಪಿ ದೇಶ ಸೇರಿದಂತೆ ವಿದೇಶಗಳಲ್ಲೂ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. 317 ಬ್ಯಾಂಕ್ ಗಳ ಖಾತೆಯ ಹಣದ ಮೂಲ ಪತ್ತೆಯಾಗಬೇಕಾಗಿದೆ. ಆರೋಪಿ ಬಹಳ ಮೊತ್ತದ ಠೇವಣಿ ಇಟ್ಟಿದ್ದಾರೆ. ಜೊತೆಗೆ 200 ಕೋಟಿ ಹಣದ ಮೂಲ ಇನ್ನೂ ಪತ್ತೆಯಾಗಿಲ್ಲ. ಹೀಗಾಗಿ ಅವೆಲ್ಲದರ ಮಾಹಿತಿಯನ್ನು ಪಡೆಯಬೇಕಾಗಿದೆ.
ಇನ್ನು ಆರೋಪಿ ಬೇನಾಮಿ ಆಸ್ತಿ ಮಾಡಿರುವುದು ಇಡಿ ಗಮನಕ್ಕೆ ಬಂದಿದೆ. ಬೇನಾಮಿ ಹೂಡಿಕೆಯ ಸುಳಿವು ಕೂಡಾ ಸಿಕ್ಕಿದೆ. 22 ವರ್ಷದ ಮಗಳು 108 ಕೋಟಿ ವ್ಯವಹಾರ ಮಾಡಿದ್ದಾಳೆ ಅದು ಹೇಗೆ ಸಾಧ್ಯ. ಇದು ರಾಷ್ಟ್ರದ ಆರ್ಥಿಕ ವ್ಯವಸ್ಥೆಗೆ ಆತಂಕವುಂಟು ಮಾಡುವಂತಿದೆ ಎಂದು ASG ಕೆ.ಎಂ. ನಟರಾಜ್ ವಾದ ಮಂಡಿಸಿದರು.
ಇನ್ನು ಮುಂದುವರಿದ ಅವರು ಡಿಕೆಶಿ 800 ಕೋಟಿ ರೂ ವ್ಯವಹಾರವನ್ನು ನಡೆಸಿದ್ದಾರೆ.ಜೊತೆಗೆ ಅಕ್ರಮ ಹಣದ ವರ್ಗಾವಣೆಯನ್ನು ನಡೆಸಿದ್ದಾರೆ ಹೀಗಾಗಿ ಸುದೀರ್ಘ ತನಿಖೆಯ ಅಗತ್ಯವಿದೆ. ಈ ಕಾರಣದಿಂದ ಆರೋಪಿಯನ್ನು 5 ದಿನಗಳ ಇಡಿ ವಶಕ್ಕೆ ಒಪ್ಪಿಸಿದೆ ಎಂದು ಮನವಿ ಮಾಡಿದರು.
Discussion about this post