ಅಕ್ರಮ ಹಣ ಸಂಪಾದನೆ ಕುರಿತಂತೆ ಇಡಿ ವಶದಲ್ಲಿರುವ ಡಿಕೆ ಶಿವಕುಮಾರ್ ಅವರಿಗೆ ಜಾಮೀನು ನೀಡಬಾರದೆಂಬ ಇಡಿ ಪರ ವಕೀಲರ ವಾದವನ್ನು ಶಿವಕುಮಾರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಖಂಡಿಸಿದ್ದಾರೆ.
Get upto 45% off on Energy Drinks & Juices
ಅನಾರೋಗ್ಯದ ನಡುವೆಯೂ ಡಿಕೆಶಿ ವಿಚಾರಣೆಗೆ ಸಹಕರಿಸಿದ್ದಾರೆ. ಕಾನೂನಿನಲ್ಲಿ ಅವಕಾಶ ಇದೆ ಅನ್ನುವ ಕಾರಣಕ್ಕೆ ಕಾಲಾವಕಾಶ ಕೇಳುತ್ತಿದ್ದಾರೆ. ಕಾಲಾವಕಾಶ ಕೇಳುವುದರಲ್ಲಿ ಅರ್ಥವೇ ಇಲ್ಲ. 100 ರೂ. ಕದ್ದಿದ್ದರೆ 100 ರೂಪಾಯಿ ಬಗ್ಗೆ ತನಿಖೆ ಮಾಡಲಿ. ಅದನ್ನು ಬಿಟ್ಟು ಅವರ ಒಟ್ಟಾರೆ ಆಸ್ತಿಯ ಬಗ್ಗೆ ತನಿಖೆ ಏಕೆ? ಅನಾವಶ್ಯಕವಾಗಿ ಬೇರೆ ಬೇರೆ ಪ್ರಕರಣಗಳನ್ನು ತಳುಕು ಹಾಕಲಾಗುತ್ತಿದೆ.
Get upto 60% off on Whey Protein
ಇವರು ಈ ರೀತಿ ತನಿಖೆ ಮಾಡಿದರೆ ಅದು ಮುಗಿಯದ ಕತೆಯಾಗಲಿದೆ. ದೆಹಲಿಯಲ್ಲಿ ಸಿಕ್ಕ ಹಣಕ್ಕೆ ಐಟಿ ರಿಟರ್ನ್ಸ್, ಸೇಲ್ ಡೀಡ್ಸ್ ಮತ್ತಿತರ ದಾಖಲೆಗಳು ಲಭ್ಯವಾಗಿವೆ. ಆದರೆ, ತನಿಖಾ ಸಂಸ್ಥೆ ಆ ದಾಖಲೆಗಳನ್ನು ಪರಿಗಣಿಸುತ್ತಿಲ್ಲ ಎಂದು ಆಪಾದಿಸಿದರು.
ಇದಕ್ಕೂ ಮುನ್ನ ವಾದ ಮಂಡಿಸಿದ್ದ ಇಡಿ ಪರ ವಕೀಲರು ಡಿಕೆ ಶಿವಕುಮಾರ್ 317 ಬ್ಯಾಂಕ್ ಖಾತೆ ಹೊಂದಿದ್ದಾರೆ. ಅಕ್ರಮವಾಗಿ ಹಣ ಹೂಡಿಕೆ ಮಾಡಿದ್ದಾರೆ. ವಿದೇಶದಲ್ಲೂ ಬ್ಯಾಂಕ್ ಖಾತೆಗಳಿವೆ. ಬೇನಾಮಿಯಾಗಿ ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿದ್ದರು.
Discussion about this post