ಅಕ್ರಮ ಆಸ್ತಿ ಸಂಪಾದನೆ ಆರೋಪ ಎದುರಿಸುತ್ತಿರುವ ಕನಕಪುರ ಬಂಡೆ ಖ್ಯಾತಿಯ ಡಿಕೆ ಶಿವಕುಮಾರ್ ಅವರಿಗೆ ಇಂದು ಜಾಮೀನು ಭಾಗ್ಯ ಸಿಗಲೇ ಇಲ್ಲ.
ಆರೋಗ್ಯಗ ಕಾರಣವೊಡ್ಡಿ ಜಾಮೀನು ಅರ್ಜಿ ಸಲ್ಲಿಸಿದ್ದ ಡಿಕೆಶಿ ಪರ ವಕೀಲರು ಇಂದು ವಾದ ಮಂಡಿಸಲು ಅವಕಾಶ ಸಿಗದ ಪರಿಸ್ಥಿತಿ ನಿರ್ಮಾಣವಾಯ್ತು.
ಇಂದು ಜಾಮೀನು ಅರ್ಜಿಯ ವಿಚಾರಣೆ ಪ್ರಾರಂಭವಾಗುತ್ತಿದ್ದಂತೆ ಬುಧವಾರ ತಡವಾಗಿ ಆಗಮಿಸಿರುವುದಕ್ಕೆ ಕ್ಷಮೆ ಕೋರಿದ ಇಡಿ ಪರ ವಕೀಲರ ನಟರಾಜ್ ವಾದ ಪ್ರಾರಂಭಿಸಿದರು.
ಡಿಕೆಶಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅನುಪಸ್ಥಿತಿಯಲ್ಲಿ ವಾದ ಮಂಡನೆ ಪ್ರಾರಂಭಿಸಿದ ನಟರಾಜ್ ಬ್ರೇಕ್ ಇಲ್ಲದೆ 2 ಗಂಟೆ ಕಾಲ ವಾದ ಮಂಡಿಸಿದರು.
ಡಿಕೆಶಿ ಅಕ್ರಮ ವ್ಯವಹಾರಗಳ ಕುರಿತಂತೆ ನ್ಯಾಯಾಧೀಶರಿಗೆ ಮನವರಿಕೆ ಮಾಡಲು ಮುಂದಾದ ನಟರಾಜ್ ಡಿಕೆಶಿ ಪರ ವಕೀಲರ ನಿನ್ನೆಯ ವಾದಕ್ಕೆ ಕೌಂಟರ್ ಕೊಡುವುದನ್ನು ಮರೆಯಲಿಲ್ಲ. ಮಾತ್ರವಲ್ಲದೆ ತನಿಖೆಯ ಹಲವು ದಾಖಲೆಗಳನ್ನು ನ್ಯಾಯಾಧೀಶರಿಗೆ ಸಲ್ಲಿಸಿದರು.
ವಿದೇಶಿ ಬ್ಯಾಂಕ್ಗಳಲ್ಲೂ ಡಿಕೆ ಶಿವಕುಮಾರ್ ಖಾತೆ ಹೊಂದಿರುವುದು ಪತ್ತೆಯಾಗಿದೆ. ಈ ಬ್ಯಾಂಕ್ಗಳಿಂದಲೂ ಮಾಹಿತಿ ಪಡೆಯಬೇಕಾಗಿದೆ ಎಂದು ತಿಳಿಸಿದರು.
317 ಬ್ಯಾಂಕ್ ಖಾತೆಗಳ ಕುರಿತಂತೆ ತನಿಖೆ ನಡೆಸಬೇಕಾಗಿದೆ.ಹೀಗಾಗಿ ಆರೋಪಿಗೆ ಜಾಮೀನು ಕೊಡಬಾರದು. ತಾನು ಆರೋಪಿಯಲ್ಲ ಅನ್ನುವುದನ್ನು ಆರೋಪಿಯೇ ಸಾಬೀತುಪಡಿಸಬೇಕು ಅನ್ನುವ ಕುರಿತಂತೆ ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲೇಖೀಸಿದ ನಟರಾಜ್ ಒಂದು ಹಂತದಲ್ಲಿ ನನಗೆ ವಾದ ಮಂಡಿಸಲು ಇನ್ನೂ ಸಮಯ ಬೇಕು ಎಂದು ನ್ಯಾಯಾಧೀಶರನ್ನು ಮನವಿ ಮಾಡಿದರು.
ಇದನ್ನು ಪುರಸ್ಕರಿಸಿದ ನ್ಯಾಯಾಧೀಶರು ಶನಿವಾರ 11 ಗಂಟೆಗೆ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿದರು.
Discussion about this post