ಜಮೀರ್ ಮತ್ತು ಡಿಕೆ ಶಿವಕುಮಾರ್ (DK Shivakumar) ನಡುವಿನ ಕಿತ್ತಾಟ ನಿಲ್ಲುವ ಲಕ್ಷಣವಿಲ್ಲ. ಈ ನಡುವೆ ಇಬ್ಬರ ನಡುವೆ ಸಂಧಾನ ನಡೆಸಲು ಬಂದಿದ್ದ ಚಲುವರಾಯ ಸ್ವಾಮಿಗೆ ನಿರಾಶೆಯಾಗಿದೆ.
ಬೆಂಗಳೂರು : ಕಾಂಗ್ರೆಸ್ ನಲ್ಲಿ ಇದೀಗ ಚುನಾವಣೆ ಗೆಲ್ಲುವ ರಣತಂತ್ರಕ್ಕಿಂತಲೂ, ಸಿಎಂ ಕುರ್ಚಿ ಪಡೆಯುವುದು ಹೇಗೆ ಅನ್ನುವ ರಣತಂತ್ರವೇ ಸದ್ದು ಮಾಡುತ್ತಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿ (DK Shivakumar) ಮಾತ್ರವಲ್ಲದೆ ಇನ್ನೂ ನಾಲ್ಕೈದು ಜನ ಸಿಎಂ ಕುರ್ಚಿಯ ರೇಸ್ ನಲ್ಲಿದ್ದಾರೆ.
ಈ ನಡುವೆ ಡಿಕೆಶಿ ವಿರುದ್ಧ ತೊಡೆತಟ್ಟಿರುವ ಸಿದ್ದರಾಮಯ್ಯ ಶಿಷ್ಯ ಜಮೀರ್ ಆಹಮ್ಮದ್ ( zameer ahmed khan) ತಲೆನೋವಾಗಿ ಪರಿಣಮಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಕಾಂಗ್ರೆಸ್ ಗೆ ಬಂದ ಜಮೀರ್ 40 ವರ್ಷಗಳ ಕಾಲ ಕಾಂಗ್ರೆಸ್ ನಲ್ಲಿರುವ ಡಿಕೆಶಿಗೆ (DK Shivakumar) ಕಾಡುತ್ತಿದ್ದಾರೆ ಅಂದ್ರೆ ಜಮೀರ್ ತಾಕತ್ತು ಊಹಿಸಿ. ಈಗಾಗಲೇ ಕರ್ನಾಟಕದ ಮುಸ್ಲಿಂ ನಾಯಕನಾಗಿ ಹೊರ ಹೊಮ್ಮಿರುವ ಜಮೀರ್ ಕೈ ನಾಯಕರಿಗೆ ಬಿಸಿ ತುಪ್ಪವಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ವಿರುದ್ಧವೇ ಜಮೀರ್ ಸಿಡಿದೇಳುತ್ತಿದ್ರೆ ಒಂದು ಶೋಕಾಸ್ ನೊಟೀಸ್ ಕೊಡಲು ಕಾಂಗ್ರೆಸ್ ಭಯಪಡುತ್ತಿದೆ. ಹಾಗಾದ್ರೆ ಜಮೀರ್, ಡಿಕೆಶಿ ವಿರುದ್ಧ ತೊಡೆ ತಟ್ಟಿದ್ಯಾಕೆ, ಅವರಿಗೆ ಪಕ್ಷದಲ್ಲೊಂದು ಹುದ್ದೆ ಸಿಕ್ಕಿಲ್ಲ. ಇದಕ್ಕೆ ಅಡ್ಡಿ ಡಿಕೆಶಿ ಅನ್ನುವುದು ಜಮೀರ್ ಆರೋಪವಂತೆ.
ಇದನ್ನೂ ಓದಿ : Joe Biden : ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಗೆ ಕ್ಯಾನ್ಸರ್ : ಶ್ವೇತ ಭವನ ಹೇಳಿದಿಷ್ಟು
ಇದೀಗ ಜಮೀರ್ ಮತ್ತು ಡಿಕೆಶಿ (DK Shivakumar) ನಡುವೆ ಸಂಧಾನ ನಡೆಸಲು ಮಾಜಿ ಶಾಸಕ ಚಲುವರಾಯ ಸ್ವಾಮಿ ಎಂಟ್ರಿಯಾಗಿದ್ದಾರೆ. ಶುಕ್ರವಾರ ರಾತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿರುವ ಚಲುವರಾಯಸ್ವಾಮಿ ಪಕ್ಷ ಸಂಘಟನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಆದರೆ ಜಮೀರ್ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಅದೊಂದು ವಿಚಾರ ಬಿಟ್ಟು ಬೇರೆ ಯಾವುದಾದರೂ ವಿಷಯವಿದ್ರೆ ಹೇಳಿ ಎಂದು ಡಿಕೆಶಿ ಹೇಳಿದ್ದಾರಂತೆ.
ಇನ್ನು ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಡಿಕೆ ಶಿವಕುಮಾರ್, ಚಲುವರಾಯ ಸ್ವಾಮಿ ಬಂದಿದ್ದು ಹೌದು, ಮಾತನಾಡಿದ್ದೂ ಹೌದು, ಪಕ್ಷ ಸಂಘಟನೆ ಕುರಿತಂತೆ ಮಾತನಾಡಿದ್ದಾರೆ. ಉಳಿದಂತೆ ಬೇರೆ ವಿಚಾರಗಳು ಚರ್ಚೆಯಾಗಿಲ್ಲ. ನಾನು ಅದಕ್ಕೆ ಅವಕಾಶವನ್ನೂ ಕೊಡೋದಿಲ್ಲ ಅಂದಿದ್ದಾರೆ.
ಇದನ್ನೂ ಓದಿ : Cops cannot stop vehicle Praveen sood : ಡಿಜಿಪಿ ಆದೇಶಕ್ಕೆ ಕಿಮ್ಮತಿಲ್ವ : ಎರಡನೇ ಬಾರಿ ಆದೇಶ ಹೊರಡಿಸಿದ ಪ್ರವೀಣ್ ಸೂದ್
ಎರಡನೇ ಮದುವೆಯಾದ್ರ ವಿಜಯಾನಂದ ಕಾಶಪ್ಪನವರ : ಮಗುವಿನ ಜನನ ಪ್ರಮಾಣ ಪತ್ರ ವೈರಲ್
ವೀಣಾ ಕಾಶಪ್ಪನವರ್ ಜೊತೆ ಸಂಬಂಧ ಹದಗೆಟ್ಟಿದೆ. ವಿಜಯಾನಂದ ಕಾಶಪ್ಪನವರ್ ಎರಡನೇ ಮದುವೆಯಾಗಿದ್ದಾರೆ ಅನ್ನುವ ಸುದ್ದಿ ಹಿಂದೆ ಹರಡಿತ್ತು, ಇದೀಗ ಮತ್ತೆ ಅದಕ್ಕೆ ರೆಕ್ಕೆ ಪುಕ್ಕ ಬಂದಿದೆ
ಬಾಗಲಕೋಟೆ : ಮೊದಲ ಪತ್ನಿ ವೀಣಾ ಕಾಶಪ್ಪನವರ್ ಅವರಿಗೆ ಡಿವೋರ್ಸ್ ಕೊಡುವ ಮುನ್ನವೇ ಹುನಗುಂದ ಕಾಂಗ್ರೆಸ್ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಎರಡನೇ ಮದುವೆಯಾಗಿದ್ರೆ ಅನ್ನುವ ಸುದ್ದಿ ಹಿಂದೊಮ್ಮೆ ಹರಡಿತ್ತು. ಆದರೆ ಅದಕ್ಕೆ ಯಾವುದೇ ಸಾಕ್ಷಿಗಳು ಇರಲಿಲ್ಲ.
ಆದರೆ ಇದೀಗ ಮಗುವೊಂದರ ಜನನ ಪ್ರಮಾಣ ಪತ್ರ ವೈರಲ್ ಆಗಿದ್ದು, ತಂದೆ ಕಾಲಂನಲ್ಲಿ ವಿಜಯಾನಂದ ಕಾಶಪ್ಪನವರ ಎಂದು ಉಲ್ಲೇಖಿಸಲಾಗಿದೆ. ತಾಯಿಯ ಹೆಸರು ಪೂಜಾಶ್ರೀ ಎಂದು ನಮೂದಾಗಿದೆ. ಈ ಮೂಲಕ ಈ ಹಿಂದೆ ಹರಡಿದ್ದ ನಟಿ ಪೂಜಾಶ್ರೀ ಮತ್ತು ವಿಜಯಾನಂದ ಮದುವೆ ಸುದ್ದಿಗೆ ಜೀವ ಬಂದಿದೆ. ಅಷ್ಟು ಮಾತ್ರವಲ್ಲದೆ ವಿಜಯಾನಂದ ಕಾಶಪ್ಪನವರ ಎರಡನೇ ಮದುವೆಯಾಗಿದ್ದು ಹೌದು ಅನ್ನುತ್ತಿದೆ ಮೂಲಗಳು.
ಇದನ್ನೂ ಓದಿ : flipkart bounce scooter : ಪ್ಲಿಪ್ ಕಾರ್ಟ್ ನಲ್ಲಿ ಬೌನ್ಸ್ ಇಲೆಕ್ಟ್ರಿಕ್ ಸ್ಕೂಟರ್ : ಕೇವಲ 60 ಸಾವಿರ ರೂಪಾಯಿ
ಇನ್ನು ವರ್ಷದ ಹಿಂದೆಯೇ ವಿಜಯಾನಂದ ಕಾಶಪ್ಪನವರ ಹಾಗೂ ವೀಣಾ ಕಾಶಪ್ಪನವರ್ ಸಂಬಂಧ ಹದಗೆಟ್ಟಿದೆ ಅನ್ನಲಾಗಿದೆ. ಆದರೆ ಈ ಬಗ್ಗೆ ವೀಣಾ ಅವರಾಗಲಿ ಪೂಜಾಶ್ರೀಯವರಾಗಲಿ ಪ್ರತಿಕ್ರಿಯೆ ನೀಡಿಲ್ಲ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಜಯಾನಂದ ಕಾಶಪ್ಪನವರ, ನನಗೆ ಈ ಬಗ್ಗೆ ಏನೂ ಗೊತ್ತಿಲ್ಲ. ಮಾಹಿತಿ ಇಲ್ಲದೆ ಏನು ಮಾತನಾಡಲಿ, ಫೋಟೋ ವೈರಲ್ ಬಗ್ಗೆ ನನಗೆ ಗೊತ್ತಿಲ್ಲ. ದಾಖಲೆ ಕೊಡಿ, ದಾಖಲೆ ಕೊಟ್ಟರೆ ಮಾತನಾಡುತ್ತೇನೆ ಅಂದಿದ್ದಾರೆ. ವೈಯುಕ್ತಿಕ ಜೀವನವೇ ಬೇರೆ, ರಾಜಕೀಯವೇ ಬೇರೆ, ವಿರೋಧಿಗಳೇ ಹೀಗೆ ಮಾಡುತ್ತಿದ್ದಾರೆ ಅಂದಿದ್ದಾರೆ.
Discussion about this post