ಅಕ್ರಮ ಆಸ್ತಿ ಸಂಪಾದನೆ ಆರೋಪಕ್ಕೆ ಸಿಲುಕಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿಯ ಪಾಲಿಗೆ ಇಡಿ ವಕೀಲರೇ ಬಂಡೆಯಾಗಿ ಪರಿಣಮಿಸಿದ್ದಾರೆ.
Buy Best Selling Smartphones starting from Rs.5290
ದೆಹಲಿಯಲ್ಲಿ ಸಿಕ್ಕ ಹಣದ ಬಗ್ಗೆ ಮಾತ್ರ ತನಿಖೆ ನಡೆಯುತ್ತದೆ ಅಂದುಕೊಂಡರೆ, ಇದೀಗ ಇಡಿ ತನಿಖೆಯ ಸ್ವರೂಪವನ್ನೇ ಬದಲಾಯಿಸಿದೆ. ಮಗಳು ಐಶ್ವರ್ಯ ಸೇರಿದಂತೆ ಡಿಕೆಶಿ ಕುಟುಂಬ ಸದಸ್ಯರ ವ್ಯವಹಾರದ ಬಗ್ಗೆ ಇಡಿ ದೃಷ್ಟಿ ನೆಟ್ಟಿದೆ.
ಹೀಗಾಗಿಯೇ ಡಿಕೆಶಿ 317 ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ ಅನ್ನುವ ಹೊಸ ಬಾಂಬ್ ಒಂದನ್ನು ಇಡಿ ವಕೀಲರು ಕೋರ್ಟ್ ನಲ್ಲಿ ಸಿಡಿಸಿದ್ದಾರೆ. ಆದರೆ ಅದು ಅವರ ಹೆಸರಿನಲ್ಲೇ ಇದೆಯೇ ಅಥವಾ ಅದು ಬೇನಾಮಿ ಹೆಸರಿನಲ್ಲಿ ಇದೆಯೇ ಅನ್ನುವುದನ್ನು ಇಡಿ ವಕೀಲರು ಸ್ಪಷ್ಟಪಡಿಸಿಲ್ಲ.
Get upto 50% off on 3 Doors Wardrobe
ಈ ಕುರಿತಂತೆ ವಿಚಾರಣೆಯ ಬ್ರೇಕ್ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆಶಿ, ಇಡಿ ನನ್ನ ಬಳಿ 317 ಖಾತೆ ಇದೆ ಎಂದು ಆರೋಪಿಸುತ್ತಿದೆ. ನನ್ನ ಬಳಿ ಇರುವ ಎಲ್ಲಾ ಖಾತೆಯ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದೇನೆ. 317 ಖಾತೆ ಇದ್ದರೆ ಎಲ್ಲವನ್ನೂ ಜಾರಿ ನಿರ್ದೇಶನಾಲಯಕ್ಕೆ ಬರೆದು ಕೊಡುತ್ತೇನೆ ಎಂದು ತಿಳಿಸಿದರು.
Discussion about this post