ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳ ವಿರುದ್ಧ ಮಾನಹಾನಿ ಮಾಡುವ ಕೆಲಸ ಕೆಲ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ. ಇದೊಂದು ದುರಂತ ಅನ್ನದೆ ವಿಧಿಯಿಲ್ಲ. ಸ್ಪರ್ಧಿಗಳ ಖಾಸಗಿ ಫೋಟೋಗಳನ್ನು ಲೀಕ್ ಮಾಡಿರುವ ದುಷ್ಟ ಶಕ್ತಿಗಳಿಗೆ ಖಂಡಿತಾ ಶಿಕ್ಷೆಯಾಗಲೇಬೇಕು.
ಈಗಾಗಲೇ ಕೆಲವೊಂದು ಟ್ರೋಲ್ ಪೇಜ್ ಗಳಲ್ಲಿ ಅರವಿಂದ್, ದಿವ್ಯಾ, ಶಮಂತ್ ಅವರದ್ದು ಎನ್ನಲಾದ ಫೋಟೋ ವಿಡಿಯೋಗಳು ಓಡಾಡುತ್ತಿದೆ. ( ವೈಯುಕ್ತಿಕ ದ್ವೇಷದ ಹಿನ್ನಲೆಯಲ್ಲಿ ಗ್ರಾಫಿಕ್ಸ್ ಎಡಿಟ್ ಮಾಡಿರುವ ಸಾಧ್ಯತೆಗಳು ಕೂಡಾ ಇದೆ )
ಈ ನಡುವೆ ಬಿಗ್ ಬಾಸ್ ಮನೆಯಲ್ಲಿದ್ದುಕೊಂಡೇ ದಿವ್ಯಾ ಉರುಡುಗ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ತಮ್ಮ ವಿರುದ್ಧ ಮಾನಹಾನಿ ಸುದ್ದಿ ಪ್ರಸಾರ ಮಾಡದಂತೆ ತಡೆ ನೀಡಬೇಕು ಎಂದು ಮನವಿ ಮಾಡಿರುವ ಅವರು ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದಾರೆ.
ಸಿವಿಲ್ ಸಿಟಿ ಕೋರ್ಟ್ ನಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಸಲಾಗಿದೆ. ದಿವ್ಯಾ ಉರುಡುಗ ಅವರು ಫೈನಲ್ ಗೆ ಬರೋ ಸಾಧ್ಯತೆಗಳಿದೆ ಅನ್ನುವ ಸುದ್ದಿಯ ಬೆನ್ನಲ್ಲೇ ನಡೆದಿರುವ ಈ ಬೆಳವಣಿಗೆ ಹಲವು ಅನುಮಾನಕ್ಕೆ ಕಾರಣವಾಗಿದೆ.
Discussion about this post