ಬಿಗ್ ಬಾಸ್ ಕಾರ್ಯಕ್ರಮ ಇನ್ನೇನು ಫೈನಲ್ ಗೆ ಹತ್ತಿರವಿದೆ ಅನ್ನುವ ಹೊತ್ತಿಗೆ ಸ್ಪರ್ಧಿಗಳು ಸಿಕ್ಕಾಪಟ್ಟೆ ಚುರುಕಾಗಿದ್ದಾರೆ. ಹೇಗಾದರೂ ಸರಿ ಗೆಲ್ಲಲೇಬೇಕು ಎಂದು ಆಟವಾಡುತ್ತಿದ್ದಾರೆ.
ಈ ನಡುವೆ ಸೂರ್ಯ ಸೇನಾ ಮತ್ತು ಕ್ವಾಟ್ಲೆ ಕಿಲಾಡಿಗಳು ತಂಡದ ನಡುವೆ ಟಾಸ್ಕ್ ನಡೆಯುತ್ತಿದ್ದು, ಕಳೆದೆರಡು ದಿನಗಳಿಂದ ಸೋಲಿನತ್ತ ಮುಖ ಮಾಡಿದ್ದ ಕ್ವಾಟ್ಲೆ ಕಿಲಾಡಿಗಳು ತಂಡ ಗೆಲುವಿನತ್ತ ಮುಖ ಮಾಡಲಾರಂಭಿಸಿದೆ. ಇದು ಸೂರ್ಯ ಸೇನಾ ತಂಡ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದ್ದು, ನಾಯಕ ಅರವಿಂದ್ ಎಲ್ಲರೂ ಸಿಡಿಮಿಡಿಯಾಗಿದ್ದಾರೆ.
ಒಂದಿಷ್ಟು ಹೆಚ್ಚು ಅನ್ನುವಂತೆ ದಿವ್ಯಾ ಉರುಡುಗ ಅರವಿಂದ್ ಮೇಲೆ ಕೋಪಗೊಂಡಿದ್ದು, ನಮ್ಮ ತಂಡದಲ್ಲಿ ಸಮನ್ವಯತೆ ಇಲ್ಲದಿರುವ ಕಾರಣದಿಂದಲೇ ನಾವು ಸೋಲುತ್ತಿದ್ದೇವೆ ಅಂದಿದ್ದಾರೆ. ಜೊತೆಗೆ ಹೇಳಿದ್ದನ್ನು ಕೇಳಿಸಿಕೊಳ್ಳುವ ತಾಳ್ಮೆ ಇರಬೇಕು ಎಂದು ಅರವಿಂದ್ ಗೆ ನೇರವಾಗಿ ಹೇಳಿರುವ ದಿವ್ಯಾ ಉರುಡುಗ ಅಸಮಾಧಾನ ಹೊರ ಹಾಕಿದ್ದಾರೆ. ಬಾಲ್ ಕೂರಿಸುವ ಟಾಸ್ಕ್ ನಲ್ಲಿ ದಿವ್ಯಾ ಉರುಡುಗ ಎರಡು ನಿಮಿಷ ಬಾಲ್ ಕೂರಬೇಕು ಎಂದು ರೂಲ್ ಬುಕ್ ನಲ್ಲಿದೆ ಎಂದು ಹೇಳಿದ್ದರು. ಆದರೆ ಅದನ್ನು ಅರವಿಂದ್ ನಿರ್ಲಕ್ಷ್ಯ ಮಾಡಿದ್ದರು. ಇದು ಅವರ ಅಸಮಾಧಾನಕ್ಕೆ ಕಾರಣವಾಗಿದೆ.
ಇನ್ನು ಇದೇ ವಿಚಾರದಲ್ಲಿ ಮುಂದುವರಿದು ಮಾತನಾಡಿದ ದಿವ್ಯಾ, ನೀವು ಅವತ್ತು ಮಂಜನ ಜೊತೆ ಮಾತನಾಡುವಾಗ ಮುಚ್ಚಿಕೊಂಡು ಹೋಗಿ ಅಂದ್ರಿ, ಒಂದು ವೇಳೆ ಇದೇ ಮಾತನ್ನು ಮಂಜ ನನಗೆ ಹೇಳಿದ್ರೆ ನಾನು ಸಹಿಸಿಕೊಳ್ಳುತ್ತಿರಲಿಲ್ಲ ಎಂದು ಅರವಿಂದ್ ನಡೆಯನ್ನು ಎಲ್ಲಾ ಸದಸ್ಯರ ಮುಂದೆಯೇ ಖಂಡಿಸಿದ್ದಾರೆ.
ಇಷ್ಟೆಲ್ಲಾ ನಡೆದರು ಅರವಿಂದ್ ತುಟಿ ಬಿಚ್ಚಲಿಲ್ಲ.
Discussion about this post