ಈ ಬಾರಿಯ ಬಿಗ್ ಬಾಸ್ ( Bigg boss kannada ) ಕಾರ್ಯಕ್ರಮದ ಮೂಲಕ ಪ್ರೇಮಿಗಳಾಗಿದ್ದಾರೆ ಎಂದು ಹೇಳಲಾದ ಅರವಿಂದ್ ( Aravinf KP ) ಹಾಗೂ ದಿವ್ಯಾ ಉರುಡುಗ ( Divya Uruduga ) ಸಂಬಂಧದಲ್ಲಿ ಬಿರುಕು ಮೂಡಿದೆಯೇ ಅನ್ನುವ ಪ್ರಶ್ನೆ ಇದೀಗ ವೀಕ್ಷಕರನ್ನು ಕಾಡುತ್ತಿದೆ. ಇದಕ್ಕೆ ಕಾರಣವಾಗಿರೋದು ಬುಧವಾರ ನಡೆದಿರುವ ಬೆಳವಣಿಗೆ.
ಎರಡನೇ ಇನ್ನಿಂಗ್ಸ್ ನಲ್ಲಿ ಇದೀಗ ನೀನಾ ನಾನಾ ಅನ್ನುವ ಟಾಸ್ಕ್ ನಡೆಯುತ್ತಿದ್ದು, ಅದರಲ್ಲಿ ಕೊಡಲಾದ ಒಂದು ಟಾಸ್ಕ್ ಪ್ರಕಾರ ಮೊದಲು ಯಾರು ಗ್ಲೌಸ್ ಹಾಕಿಕೊಳ್ಳುತ್ತಾರೋ ಅವರು ಸ್ಪರ್ಧಿಸಲು ಅವಕಾಶ ಪಡೆಯುತ್ತಾರೆ. ಹೀಗೆ ವಿವಿಧ ಸ್ಪರ್ಧಿಗಳು ಗ್ಲೌಸ್ ಹತ್ತಿರ ನಿಂತಿದ್ದ ವೇಳೆ ದಿವ್ಯಾ ಉರುಡುಗ ಅದನ್ನು ಅದನ್ನು ಫೌಲ್ ಎಂದು ಹೇಳುತ್ತಿದ್ದರು. ಯಾವಾಗ ಉರುಡುಗ ಅವರೇ ಗ್ಲೌಸ್ ಬಳಿ ಹೋಗಿ ನಿಂತರೋ ಅರವಿಂದ್ ಅದನ್ನು ವಿರೋಧಿಸಿದ್ದರು.
ಈ ನಡುವೆ ಶುಭಾ ಟಾಸ್ಕ್ ತೊರೆಯುವ ಪ್ರಸ್ತಾಪ ಮುಂದಿಡುತ್ತಾರೆ. ಆಗ್ಲೂ ದಿವ್ಯಾ ನಾನು ಬಿಟ್ಟು ಕೊಡುವುದಿಲ್ಲ, ಯಾಕೆ ಬಿಟ್ಟು ಕೊಡಬೇಕು ಅನ್ನುತ್ತಾರೆ. ಇದನ್ನು ಅಸ್ಪಷ್ಟವಾಗಿ ಕೇಳಿಸಿಕೊಂಡ ಅರವಿಂದ್ ಏನು ಇನ್ನೊಂದು ಸಲ ಹೇಳು ಅನ್ನುತ್ತಾರೆ. ಆಗ ಟಾಸ್ಕ್ ತೊರೆಯುವುದಿಲ್ಲ ಅನ್ನುವುದನ್ನು ಸ್ಪಷ್ಟವಾಗಿ ದಿವ್ಯಾ ಹೇಳುತ್ತಾರೆ. ಇದರಿಂದ ಸಿಡಿಮಿಡಿಗೊಂಡ ಅರವಿಂದ್ ತಮ್ಮ ಆಕ್ರೋಶವನ್ನು ಚಂದ್ರಚೂಡ್, ಸಂಬರಗಿ, ದಿವ್ಯಾ ಸುರೇಶ್ ಜೊತೆ ಹಂಚಿಕೊಳ್ಳುತ್ತಾರೆ.
ಇದಾದ ಬಳಿಕ ರಾತ್ರಿ ಒಂಟಿಯಾಗಿ ಕೂತಿದ್ದ ಅರವಿಂದ್ ಸಮಾಧಾನ ಪಡಿಸಲು ಹೋದ ದಿವ್ಯಾ ಅವರನ್ನು ಅರವಿಂದ್ ನಿರ್ಲಕ್ಷ್ಯ ಮಾಡುತ್ತಾರೆ. ಮಾತನಾಡಲು ಇಷ್ಟವಿಲ್ವ ಅಂದ್ರೆ, ಸದ್ಯಕ್ಕಿಲ್ಲ ಎಂದು ಮುಖಕ್ಕೆ ಹೊಡೆದಂತೆ ಉತ್ತರ ಕೊಟ್ಟಿದ್ದಾರೆ ಅರವಿಂದ್.
ಹಾಗಂದ ಇದೇನು ಸುದೀರ್ಘ ಸಮಯ ಎಳೆಯುವ ಮುನಿಸಲ್ಲ. ಟಾಸ್ಕ್ ವಿಚಾರದಲ್ಲಿ ಆಗಿರುವ ಗ್ಯಾಪ್, ಇಂದಿನ ಸಂಚಿಕೆಯಲ್ಲಿ ಇವರ ಮುನಿಸು ಕರಗಿರುತ್ತದೆ.
Discussion about this post