ಅಕ್ರಮ ಹಣ ವರ್ಗಾವಣೆ ಕುರಿತಂತೆ ಇಡಿಯಿಂದ ಬಂಧನಕ್ಕೆ ಒಳಗಾಗಿರುವ ಡಿಕೆಶಿಗೆ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಈ ನಡುವೆ ಡಿಕೆಶಿ ಜಾಮೀನಿಗಾಗಿ ಸಲ್ಲಿಸಿದ ಅರ್ಜಿಯ ವಿಚಾರಣೆ ಇಂದು ನ್ಯಾಯಾಲಯದಲ್ಲಿ ನಡೆಯಿತು. ಈ ವೇಳೆ ಡಿಕೆಶಿ ಪರ ವಾದ ಮಂಡಿಸಿದ ಅಭಿಷೇಕ್ ಮನು ಸಿಂಘ್ವಿ, ತನಿಖೆ ನಡೆಸಬೇಕಾದ ಜಾರಿ ನಿರ್ದೇಶನಾಲಯ ರಿಸರ್ಚ್ ನಡೆಸುತ್ತಿದೆ. ಚುನಾವಣೆ ಆಯೋಗಕ್ಕೆ ಡಿಕೆಶಿಯವರು ಕೊಟ್ಟಿರುವ ಲೆಕ್ಕದ ಮೊತ್ತವನ್ನು ಇಡಿ ಅಕ್ರಮ ಅನ್ನುತ್ತಿದೆ.
ಮಗಳು ಐಶ್ವರ್ಯಾ ಹೆಸರಿನಲ್ಲಿ 108 ಕೋಟಿ ಆಸ್ತಿ ಇದೆ ಎಂದು ಇಡಿ ಹೇಳುತ್ತಿದೆ. ಆದರೆ ಅದರಲ್ಲಿ ದೊಡ್ಡ ಮೊತ್ತದ ಸಾಲ ಕೂಡಾ ಸೇರಿದೆ. ಇನ್ನು ಆಸ್ತಿ ಅವರ ಅಜ್ಜಿಯಿಂದ ಬಂದಿರುವಂತದ್ದು ಹೀಗಿರುವಾಗ ಇದು ಅಕ್ರಮವಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ನವರಾತ್ರಿ ಸಂಭ್ರಮಕ್ಕೆ ಡ್ರೆಸ್ ಖರೀದಿ ಮಾಡೋ ಯೋಜನೆಯಲ್ಲಿದ್ದೀರಾ…?
ಡಿಕೆಶಿ ತಾಯಿ ತಂದೆ ಹೆಸರಿನಲ್ಲೂ ಸಾಕಷ್ಟು ಸಾಲ ಇದೆ. ಆದರೆ ಇಡಿ ಮಾತ್ರ ನಮ್ಮ ಕಕ್ಷಿದಾರರ ಗಳಿಕೆಯನ್ನು ಅಕ್ರಮ ಅನ್ನುತ್ತಿದೆ ಎಂದು ಕಿಡಿ ಕಾರಿದರು.
ಇನ್ನು ಡಿಕೆಶಿಯವರ ಆಸ್ತಿಯ ಒಟ್ಟಾರೆ ಮೊತ್ತ ಹೆಚ್ಚಾಗಿದೆ ಎಂದು ಇಡಿ ಹೇಳುತ್ತಿದೆ. ವರ್ಷದಿಂದ ವರ್ಷಕ್ಕೆ ಆಸ್ತಿಯ ಮೌಲ್ಯ ಸಹಜವಾಗಿಯೇ ಹೆಚ್ಚಾಗುತ್ತದೆ ಹೀಗಾಗಿ ಅವರ ಆದಾಯ ಪ್ರಮಾಣದಲ್ಲೂ ಏರಿಕೆಯಾಗಿದೆ.
ಇನ್ನು ಒಕ್ಕಲಿಗರಿಗೆ ಕೃಷಿಯೇ ಪ್ರಧಾನವಾಗಿದ್ದು, ಡಿಕೆಶಿಯವರು ಕೃಷಿಕರಾಗಿದ್ದಾರೆ. ಕೃಷಿಯಲ್ಲೂ ಕೂಡಾ ಆದಾಯ ಹೆಚ್ಚಾಗಿದೆ ಇದನ್ನು ಅಕ್ರಮ ಎಂದು ಹೇಳುವುದು ಸರಿಯೇ ಎಂದು ಸಿಂಘ್ವಿ ವಾದ ಮಂಡಿಸಿದರು.
Discussion about this post