ಪೊಲೀಸ್ ಇಲಾಖೆಯಲ್ಲಿ ಇನ್ನೂ ಜೀತ ಸೇವೆಯೇ ಜೀವಂತ ಅನ್ನುವ ಪ್ರಶ್ನೆ ಕೇಳಿದರೆ ಖಂಡಿತಾವಾಗಿಯೂ ಇದೆ. ಆದರೆ ಅದು ಜೀತ ಅನ್ನುವ ಶಬ್ಧದ ತೂಕಕ್ಕೆ ಇಲ್ಲದಿರಬಹುದು ಅಷ್ಟೇ.
ಇದಕ್ಕೆ ಸಾಕ್ಷಿಯಾಗಿದ್ದು ಡಿಸಿಎಂ ಪರಮೇಶ್ವರ್ ಅವರ ಇಂದಿನ ವರ್ತನೆ. ಬೆಂಗಳೂರಿನಲ್ಲಿ ಸಿಟಿ ರೌಂಡ್ಸ್ ಮಾಡುತ್ತಿದ್ದ ವೇಳೆ ಬಟ್ಟೆ ಮತ್ತು ಶೂಗಳಿಗೆ ಕೆಸರು ಮೆತ್ತಿಕೊಂಡಿತ್ತು. ತಕ್ಷಣ ಕಾರ್ಯಕರ್ತನೊಬ್ಬ ಇದನ್ನು ಕ್ಲೀನ್ ಮಾಡಲು ಮುಂದಾದ.
ಆದ ಅವನನ್ನು ತಡೆದ ಪರಮೇಶ್ವರ್ ತನ್ನ ಗನ್ ಮ್ಯಾನ್ ಕರೆದು ಬಟ್ಟೆ, ಶೂಗಳಿಗೆ ಅಂಟಿಕೊಂಡಿದ್ದ ಕೆಸರನ್ನು ಕ್ಲೀನ್ ಮಾಡಿಸಿಕೊಂಡಿದ್ದಾರೆ.
ಹಲಸೂರು ಬಳಿಯಿರುವ ಗುರುದ್ವಾರದ ಮಳೆ ನೀರುಗಾಲುವೆಗೆ ಮೊದಲು ಭೇಟಿ ನೀಡಿದ್ದರು. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ರಸ್ತೆ ಮೇಲಿದ್ದ ನೀರು ಸಚಿವರ ಬಟ್ಟೆ ಹಾಗೂ ಶೂಗೆ ಸಿಡಿದಿದೆ. ಕೂಡಲೇ ಅಲ್ಲೇ ಇದ್ದ ತಮ್ಮ ಗನ್‍ಮ್ಯಾನ್ ಹಾಗೂ ಸಹಾಯಕರಿಗೆ ಸ್ವಚ್ಛಮಾಡುವಂತೆ ತಿಳಿಸಿದ್ದಾರೆ.
ಇನ್ನು ಮಾಧ್ಯಮಗಳ ಕ್ಯಾಮಾರ ಈ ಎಲ್ಲವನ್ನೂ ರೆಕಾರ್ಡ್ ಮಾಡುತ್ತಿದ್ದರೆ, ಅಯ್ಯೋ ಇವೆಲ್ಲಾ ಯಾಕೆ ಶೂಟ್ ಮಾಡ್ತೀರಾ ಅಂದಿದ್ದಾರೆ. ಮಾಧ್ಯಮಗಳ ಕ್ಯಾಮಾರ ಮುಂದೆಯೇ ಪರಮೇಶ್ವರ್ ಅಂಧಾ ದರ್ಬಾರ್ ಅನ್ನುವುದಾದರೆ ಅದೆಷ್ಟು ಉಡಾಫೆ ಇರಬೇಕು.
ಭದ್ರತೆಗೆ ಎಂದು ಬಂದ ಅಧಿಕಾರಿಯನ್ನು ತನ್ನ ಬಟ್ಟೆ ಶೂ ಕ್ಲೀನ್ ಮಾಡಲು ಬಳಸುತ್ತಾರೆ ಅಂದರೆ ಇವರಿಗೆ ಅದ್ಯಾವ ಸಮಸ್ಯೆ ಇರಬಹುದು ಅನ್ನುವುದು ನೀವೇ ಊಹಿಸಿಬಹುದು.
ಇನ್ನು ಪೊಲೀಸ್ ಉನ್ನತ ಅಧಿಕಾರಿಗಳ ಮನೆಯಲ್ಲಿ ಕೆಳ ಹಂತದ ಅಧಿಕಾರಿಗಳನ್ನು ಕೆಲಸ ಮಾಡಿಸಬಾರದು ಅನ್ನುವ ನಿಯಮವಿದೆ. ಆದರೆ ಗೃಹ ಸಚಿವರೇ ಗನ್ ಮ್ಯಾನ್ ಕೈಯಿಂದ ಶೂ ಕ್ಲೀನ್ ಮಾಡಿಸುತ್ತಾರೆ ಅಂದ ಮೇಲೆ, ಐಪಿಎಸ್ ಅಧಿಕಾರಿಗಳು ಯಾವ ಯಾವ ಕೆಲಸಗಳಿಗೆ ಪೇದೆಗಳನ್ನು ಬಳಸುತ್ತಿರಬಹುದು ಲೆಕ್ಕ ಹಾಕಿ.
ಈ ಬಗ್ಗೆ ಪ್ರತಿಪಕ್ಷವಂತು ದನಿ ಎತ್ತಲಾರದು. ಅವರು ಕೂಡಾ ಇದೇ ಕೆಲಸ ಮಾಡಿಸುವ ಮಂದಿ. ಇನ್ನು ಈ ಬಗ್ಗೆ ಪ್ರಗತಿಪರರು, ಬುದ್ದಿ ಜೀವಿಗಳು ದನಿ ಎತ್ತುತ್ತಾರೆಯೇ ಖಂಡಿತಾ ಇಲ್ಲ. ದನಿ ಎತ್ತಿದ್ರೆ ಕಾಂಗ್ರೆಸ್ ವಿರೋಧಿಗಳಾಗಬೇಕಾಗುತ್ತದೆ.
ಆದರೆ ಪರಮೇಶ್ವರ್ ಅವರಿಗೆ ಒಂದು ಘಳಿಗೆಯೂ ಸಚಿವರಾಗಿ ಮುಂದುವರಿಯುವ ನೈತಿಕತೆಯಂತು ಇಲ್ಲ.