- Advertisement -
- Advertisement -
ಮೈಸೂರು ದಸರಾ ಜಂಭೂ ಸವಾರಿಯಲ್ಲಿ ಪಾಲ್ಗೊಳ್ಳುತ್ತಿದ್ದ ದಸರಾ ಆನೆ ದ್ರೋಣ ಶುಕ್ರವಾರ ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದೆ.
ಹುಣಸೂರು ತಾಲೂಕಿನ ಮತ್ತಿಗೋಡು ಆನೆ ಶಿಬಿರದಲ್ಲಿದ್ದ 39 ವರ್ಷದ ದ್ರೋಣ ಬೆಳಗ್ಗೆ 11 ಗಂಟೆ ವೇಳೆಗೆ ನೀರು ಕುಡಿಯುವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದೆ.

ದ್ರೋಣ 2017, 2018ರಲ್ಲಿ ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದ.
ದಸರಾ ಆನೆಗಳ ಬಳಗದ ಹಿರಿಯ ‘ದ್ರೋಣ’ ಸತತ 18 ವರ್ಷಗಳ ಕಾಲ (1981-1997) ಚಿನ್ನದ ಅಂಬಾರಿ ಹೊತ್ತು ದಾಖಲೆ ಮಾಡಿದ್ದ. 1998ರಲ್ಲಿ ಮೇಯಲು ಹೋಗಿದ್ದಾಗ ವಿದ್ಯುತ್ ತಗುಲಿ ಸಾವಿಗೀಡಾಗಿದ್ದ.
ಹಿರಿಯ ‘ದ್ರೋಣ’ನ ಅಂತ್ಯದ ಬಳಿಕ ಮತ್ತೊಂದು ಕಿರಿಯ ಆನೆಗೆ ‘ದ್ರೋಣ’ ಎಂದು ನಾಮಕರಣ ಮಾಡಿ ದಸರಾ ಆನೆಗಳ ಬಳಗಕ್ಕೆ ಸೇರಿಸಿಕೊಳ್ಳಲಾಗಿತ್ತು.
- Advertisement -