ದಾಸ ಪುರಂದರ…ಕಿರುತೆರೆಯಲ್ಲೊಂದು ಕ್ರಾಂತಿಯ ಕನಸು ಮೂಡಿಸಿರುವ ಧಾರವಾಹಿ. ಪ್ರೀತಿ ಪ್ರೇಮ, ಅತ್ತೆ ಸೊಸೆ, ಕಚೇರಿ ಗಲಾಟೆ ನೋಡಿ ದಣಿದಿರುವ ಮನಕ್ಕೆ ದಾಸಪುರಂದರ ಹೂಮಳೆ ಸುರಿಸುವ ನಿರೀಕ್ಷೆಯಿದೆ. ಈಗಾಗಲೇ ಬಿಡುಗಡೆಯಾಗಿರುವ ಪ್ರೋಮೋ ಈ ನಿಟ್ಟಿನಲ್ಲಿ ನಿರೀಕ್ಷೆ ಮೂಡಿಸಿದೆ.
ಅಂದ ಹಾಗೇ ದಾಸ ಪುರಂದರ ಧಾರವಾಹಿಗೂ ಹಿಟ್ಲರ್ ಕಲ್ಯಾಣ ಸೀರಿಯಲ್ ಗೂ ಸಂಬಂಧವಿದೆ. ಹಿಟ್ಲರ್ ಕಲ್ಯಾಣದಲ್ಲಿ ದುರ್ಗಾ ಪಾತ್ರಕ್ಕೆ ಬಣ್ಣ ಹಚ್ಚಿರುವ ನಂದಿನಿಮೂರ್ತಿ ದಾಸ ಪುರಂದರನಿಗೆ ಬಂಡವಾಳ ಹಾಕಿದ್ದಾರೆ. ನಂದಿನಿಮೂರ್ತಿ ಹಾಗೂ ಅವರ ಪತಿ ಕಾರ್ತಿಕ್ ಪರ್ಡಕರ್ ನಡೆಸುತ್ತಿರುವ ಜಯದುರ್ಗಾ ಕ್ರಿಯೇಶನ್ ಈ ಧಾರವಾಹಿಯನ್ನು ನಿರ್ಮಿಸಲಿದೆ.
ಈ ಹಿಂದೆ ಸೀತಾ ವಲ್ಲಭ,ಯುಗಳ ಗೀತೆ ಹೀಗೆ ಅನೇಕ ಧಾರವಾಹಿಗಳನ್ನು ಜಯದುರ್ಗಾ ಕ್ರಿಯೇಷನ್ ನಿರ್ಮಿಸಿದೆ. ಜೊತೆಗೆ ಸುವರ್ಣ ವಾಹಿನಿಯಲ್ಲಿ ಈ ಹಿಂದೆ ಫಿಕ್ಷನ್ ಹೆಡ್ ಆಗಿದ್ದ ಕಾರ್ತಿಕ್ , ಬಳಿಕ ಧಾರವಾಹಿ ನಿರ್ದೇಶಕರಾಗಿ ಭಡ್ತಿ ಪಡೆದಿದ್ದರು. ಇದೀಗ ದಾಸ ಪುರಂದರ ಧಾರವಾಹಿಯನ್ನು ಕಾರ್ತಿಕ್ ಅವರೇ ನಿರ್ದೇಶಿಸಲಿದ್ದಾರೆ.
Discussion about this post