ನವದೆಹಲಿ : ಮೇ 1 ರಿಂದ 18 ವರ್ಷ ಮೇಲ್ಪಟ್ಟವರು ಕೂಡಾ ಕೊರೋನಾ ಲಸಿಕೆ ಪಡೆಯಬಹುದಾಗಿದೆ. ಗಮನಾರ್ಹ ಅಂಶ ಅಂದ್ರೆ 18 ರಿಂದ 45 ವರ್ಷದ ಒಳಗಿನ ಮಂದಿ ರಿಜಿಸ್ಟ್ರೇಷನ್ ಮಾಡಿಯೇ ಲಸಿಕೆ ಪಡೆಯಬೇಕು. ಉಳಿದವರು ನೇರವಾಗಿ ಲಸಿಕಾ ಕೇಂದ್ರಗಳಿಗೆ ಹೋಗಿ ಲಸಿಕೆಯನ್ನು ಪಡೆಯಬಹುದಾಗಿದೆ.
ಹೀಗಾಗಿ ಇಂದು ಲಸಿಕೆಗಾಗಿ ನೋಂದಣಿ ಕಾರ್ಯ ಪ್ರಾರಂಭವಾಗಿದ್ದು, ಸಂಜೆ 4 ಗಂಟೆಗೆ ಕೋವಿನ್ ವೆಬ್ ಸೈಟ್ ಮತ್ತು APPನಲ್ಲಿ ನೋಂದಣಿಗೆ ಅವಕಾಶ ಕೊಡಲಾಗಿತ್ತು. ಆದರೆ ಸಿಕ್ಕಾಪಟ್ಟೆ ಜನ ನೋಂದಣಿಗಾಗಿ ಮುಗಿ ಬಿದ್ದ ಕಾರಣ ನೂಕು ನುಗ್ಗಲು ಉಂಟಾಗಿತ್ತು.
ಮೂಲಕಗಳ ಪ್ರಕಾರ ನಿಮಿಷಕ್ಕೆ 27 ಲಕ್ಷ ಮಂದಿ ಹೆಸರು ನೋಂದಾಯಿಸಲು ಪ್ರಯತ್ನಿಸಿದ್ದಾರೆ. ಹೀಗಾಗಿ ಕೆಲ ಹೊತ್ತು ಕೋವಿನ್ ಸರ್ವರ್ ಕೂಡಾ ಕಾರ್ಯ ಸ್ಥಗಿತಗೊಳಿಸಿತ್ತು.
ಇದಾದ ಬಳಿಕ ತಾಂತ್ರಿಕ ಸಮಸ್ಯೆಯನ್ನು ಬಗೆ ಹರಿಸಲಾಗಿದ್ದು, ಲಸಿಕೆ ಪಡೆಯುವ ದಿನವನ್ನು ಶೆಡ್ಯೂಲ್ ಮಾಡಲು ಸಾಧ್ಯವಾಗುತ್ತಿಲ್ಲ. ಆರೋಗ್ಯ ಸೇತು ಮೂಲಗಳ ಪ್ರಕಾರ, ಲಸಿಕೆಗಳ ಲಭ್ಯತೆಯ ಆಧಾರದಲ್ಲಿ ರಾಜ್ಯ ಸರ್ಕಾರ ವಿವಿಧ ಲಸಿಕಾ ಕೇಂದ್ರಗಳಿಗೆ ಹಂಚಿಕೆ ಮಾಡಬೇಕಾಗಿದೆ. ಹೀಗಾಗಿ ಲಸಿಕಾ ವಿತರಣೆಯ ವ್ಯವಸ್ಥೆಯಾದ ತಕ್ಷಣ ಲಸಿಕೆ ಹಾಕಿಸಿಕೊಳ್ಳುವ ದಿನವನ್ನು ಶೆಡ್ಯೂಲ್ ಮಾಡಿಕೊಳ್ಳಬಹುದಾಗಿದೆ ಅಂದಿದೆ.
ಇನ್ನು ಲಸಿಕೆ ನೋಂದಣಿ ಪ್ರಾರಂಭವಾದ ಒಂದು ಗಂಟೆಯಲ್ಲಿ 35 ಲಕ್ಷ ಜನ ಹೆಸರು ನೋಂದಾಯಿಸಿದ್ದು, ಈಗಿನ ಮಾಹಿತಿ ಪ್ರಕಾರ 90 ಲಕ್ಷದಷ್ಟು ಮಂದಿ ಹೆಸರು ನೋಂದಾಯಿಸಿದ್ದಾರೆ. ಮಧ್ಯರಾತ್ರಿಯ ಹೊತ್ತಿಗೆ ಇದು ಕೋಟಿಯ ಗಡಿ ದಾಟುವ ಸಾಧ್ಯತೆಗಳಿದೆ.
Discussion about this post