ಬೆಂಗಳೂರು : ಮೂರಂಕಿಯಲ್ಲಿ ವರದಿಯಾಗುತ್ತಿದ್ದ ಕೊರೋನಾ ಸೋಂಕಿತರ ಸಂಖ್ಯೆ ಇದೀಗ ಏಕಾಏಕಿ ಐದಂಕಿಗೆ ಜಿಗಿದಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಪತ್ತೆಯಾಗುತ್ತಿರುವ ಸೋಂಕಿತರ ಸಂಖ್ಯೆಯನ್ನು ನೋಡಿದರೆ, ಕರ್ನಾಟಕಕ್ಕೆ ಗಂಡಾಂತರ ಕಾದಿದೆ ಅನ್ನುವುದು ಸ್ಪಷ್ಟ.
ಶುಕ್ರವಾರ ಕೂಡಾ ರಾಜ್ಯದಲ್ಲಿ ಕೊರೋನಾ ಅಬ್ಬರ ಮುಂದುವರೆದಿದ್ದು, ಇಂದು 14,859 ಸೋಂಕಿತರು ಪತ್ತೆಯಾಗಿದ್ದಾರೆ.ಈ ಮೂಲಕ ಸೋಂಕಿತರ ಸಂಖ್ಯೆ 11,24,509ಕ್ಕೆ ಏರಿದೆ.
ರಾಜ್ಯದಲ್ಲಿ ಕೊರೋನಾ ಸೋಂಕಿಗೆ 78 ಮಂದಿ ಬಲಿಯಾಗಿದ್ದು ಕೊರೋನಾ ಮಹಾಮಾರಿಗೆ ಬಲಿಯಾದವರ ಸಂಖ್ಯೆ 13,190ಕ್ಕೆ ಏರಿದೆ.
ಇನ್ನು ರಾಜ್ಯ ರಾಜಧಾನಿಗೆ ಸಿಂಹಪಾಲು ಸಂದಿದ್ದು, ಬೆಂಗಳೂರಿನಲ್ಲಿ ಇಂದು 9917 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ.ಬೆಂಗಳೂರಿನಲ್ಲಿ ಸೋಂಕಿಗೆ 57 ಮಂದಿ ಬಲಿಯಾಗಿದ್ದಾರೆ.
ಇದರೊಂದಿಗೆ ಗುಣಮುಖರಾದವರ ಸಂಖ್ಯೆ ತುಂಬಾ ಇಳಿಮುಖವಾಗಿದ್ದು, ಇಂದು 4031 ಸೋಂಕಿತರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ 1,07315 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 577 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Discussion about this post