ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ ತಿಹಾರ್ ಜೈಲು ಸೇರಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಜಾಮೀನು ಮಂಜೂರು ಮಾಡುವುದಕ್ಕೆ ಇಡಿ ಪರ ವಕೀಲ ASG ಕೆಎಂ ನಟರಾಜ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಡಿಕೆಶಿ ಮಾಡಿದ್ದಾರೆ ಎನ್ನಲಾದ ಆರ್ಥಿಕ ಅಪರಾಧಗಳ ಕುರಿತಂತೆ ಇಂಚಿಂಚು ಮಾಹಿತಿಯನ್ನು ನ್ಯಾಯಾಧೀಶರಿಗೆ ಒಪ್ಪಿಸಿದ ಕೆಎಂ ನಟರಾಜ್ ಒಂದು ಹಂತದಲ್ಲಿ, ಕೃಷಿ ಭೂಮಿಯಲ್ಲಿ ಭತ್ತ ಬೆಳೆಯಬಹುದು ಆದರೆ ಚಿನ್ನ ಬೆಳೆಯಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ನಿನ್ನೆ ಡಿಕೆಶಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಮಾಡಿದ ವಾದಕ್ಕೆ ಕೌಂಟರ್ ಕೊಟ್ಟ ನಟರಾಜ್, ಕೃಷಿ ಭೂಮಿಯಲ್ಲಿ ಭತ್ತ, ರಾಗಿ ಹೀಗೆ ಆಹಾರ ಮತ್ತು ವಾಣಿಜ್ಯ ಬೆಳೆ ಬೆಳೆಯುಲು ಸಾಧ್ಯ. ಆದರೆ ಇವರ ಆದಾಯ ನೋಡಿದರೆ ಚಿನ್ನ ಬೆಳದಂತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಡಿಕೆಶಿ ಒಬ್ಬ ಕೃಷಿಕರಂತೆ : ಕೃಷಿಯಿಂದ ಅವರ ಆದಾಯ ಹೆಚ್ಚಾಗಿದೆಯಂತೆ….!
ಆರೋಪಿ ಡಿಕೆಶಿಯವರ ಆಸ್ತಿ ಏರಿಕೆಯಾಗಿದ್ದು, ಬೆಳೆಯಿಂದ ಬಂದ ಹಣದಿಂದಲ್ಲ ಎಂದು ವಾದ ಮಂಡಿಸಿರುವ ನಟರಾಜ್. 800 ಕೋಟಿ ಹಣ ವಾಣಿಜ್ಯ ವ್ಯವಹಾರಗಳಿಂದ ಬಂದಿದೆ ಅನ್ನುತ್ತಿದ್ದಾರೆ. ಆದರೆ ವಾಣಿಜ್ಯ ವ್ಯವಹಾರಕ್ಕೆ ಹೂಡಿಕೆ ಯಾವುದು ಅನ್ನುವುದನ್ನು ಬಹಿರಂಗಪಡಿಸಿಲ್ಲ.
ಇನ್ನು ಕೃಷಿಯಿಂದ ಆದಾಯ ಬಂದಿದೆ ಅನ್ನುವ ವಾದವನ್ನು ನೋಡುವುದಾದರೆ 20 ವರ್ಷದ ಕೃಷಿಯಲ್ಲಿ ಬಂದಿದ್ದು ಕೆಲವೇ ಕೋಟಿ ಆದಾಯ. ಆದರೆ ಹೂಡಿಕೆಯಾಗಿದ್ದು ಹಲವಾರು ಕೋಟಿ ಎಂದರು.
Discussion about this post