Advertisements

ಡಿಕೆಶಿ ಮಗಳ ವ್ಯವಹಾರದ ಮೇಲೆ ಇಡಿ ಕಣ್ಣು ಬಿದ್ದಿರುವುದ್ಯಾಕೆ ಗೊತ್ತಾ…?

2018ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ನಡೆದ ಸಂದರ್ಭದಲ್ಲಿ ಕನಕಪುರದಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದ ಡಿಕೆ ಶಿವಕುಮಾರ್ ತಮ್ಮ ಬಳಿ 548 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದರು.

ಮಾಧ್ಯಮ ವರದಿಯನ್ವಯ ಡಿಕೆಶಿ ಸಲ್ಲಿಕೆ ಮಾಡಿದ್ದ ಆಸ್ತಿ ವಿವರಗಳಲ್ಲಿ ಅವರ ಬಳಿ ಒಟ್ಟು 548,85,20,592 ರೂಪಾಯಿ ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದರು. ಸುಮಾರು 600 ಕೋಟಿ ರೂಪಾಯಿ ಆಸ್ತಿಯ ಒಡೆಯರಾಗಿರುವ ಡಿಕೆಶಿ, 101 ಕೋಟಿ 77 ಲಕ್ಷದ 80 ಸಾವಿರದ 200 ರೂಪಾಯಿ ಸಾಲ ಮಾಡಿದ್ದಾರೆ. ಡಿಕೆಶಿ ಬಳಿ 548 ಕೋಟಿ ರೂ. ಮೌಲ್ಯದ ಆಸ್ತಿ ಇದ್ದರೆ, ಮಗಳು ಐಶ್ವರ್ಯ ಬಳಿ 102 ಕೋಟಿ ಮೌಲ್ಯದ ಆಸ್ತಿ ಇದೆ. ಪತ್ನಿ ಉಷಾ ಹತ್ತಿರ 86.95 ಕೋಟಿ ರೂ. ಮೌಲ್ಯದ ಆಸ್ತಿ ಇದೆ ಎಂದು ಘೋಷಣೆ ಮಾಡಿದ್ದರು.

2013ರ ಚುನಾವಣೆ ವೇಳೆ ಶಿವಕುಮಾರ್ ಅವರು ತಮ್ಮ ಬಳಿ 251 ಕೋಟಿ ರೂಪಾಯಿ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದರು. ಇದಕ್ಕೂ ಮೊದಲು ಅಂದರೆ 2008ರ ಚುನಾವಣೆ ವೇಳೆ 75 ಕೋಟಿ ರೂಪಾಯಿ ಆಸ್ತಿ ಇದ್ದಿರುವುದಾಗಿ ಡಿಕೆಶಿ ಘೋಷಿಸಿಕೊಂಡಿದ್ದರು ಎನ್ನಲಾಗಿದೆ.

ಈ ನಡುವೆ ಪುತ್ರಿ ಐಶ್ವರ್ಯಾ ಬಳಿಯ ಆಸ್ತಿಯ ಮೊತ್ತ ಆ ವೇಳೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ಇಡಿ ಕೂಡಾ ಈ ಬಗ್ಗೆ ವಿವರಣೆ ಬಯಸಿ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದೆ.

ಐಶ್ವರ್ಯ ಅವರ ಹೆಸರಿನಲ್ಲಿ ಸೋಲ್ ಅಂಡ್ ಸೇಲ್ಸ್ ನಲ್ಲಿ 78 ಕೋಟಿ ರೂ. ಹೂಡಿಕೆ ಮಾಡಲಾಗಿದೆ.ಅಷ್ಟೇ ಅಲ್ಲದೇ ನ್ಯಾಷನಲ್ ಗ್ಲೋಬಲ್ ಕಾಲೇಜಿನಲ್ಲಿ ಐಶ್ವರ್ಯಾ ಟ್ರಸ್ಟಿಯಾಗಿದ್ದಾರೆ. ಈಗಾಗಲೇ ಡಿಕೆ ಶಿವಕುಮಾರ್ ವಿಚಾರಣೆ ವೇಳೆ ಪುತ್ರಿಯ ಹೆಸರಿನಲ್ಲಿ ಹೂಡಿಕೆ ಮಾಡಿರುವ ಕುರಿತು ಇಡಿ ಪ್ರಶ್ನೆಗಳಿಗೆ ಉತ್ತರಿಸಿದ್ದು, ಈ ಮೊತ್ತವನ್ನು ನನ್ನ ಹಿತೈಷಿಗಳು, ಕುಟುಂಬದವರು, ಸ್ನೇಹಿತರು ಕೊಟ್ಟಿದ್ದಾರೆ ಎಂದಿದ್ದಾರೆ. ಆದರೆ ಇದರಿಂದ ತೃಪ್ತವಾಗದ ಇಡಿ ಐಶ್ವರ್ಯ ಅವರಿಗೆ ಸಮನ್ಸ್ ನೀಡಿದೆ.

Karnataka’s richest social worker? DK Shivakumar declares assets worth Rs 618 crore

ಈ ಹಿಂದೆ ಇದೇ ವಿಚಾರ ಸಂಬಂಧ ವಿವರಣೆ ಬಯಸಿದ್ದ ಐಟಿ ಇಲಾಖೆ, 2017ರ ನವೆಂಬರ್ ತಿಂಗಳಿನಲ್ಲಿ ಶಿವಕುಮಾರ್ ತಾಯಿ ಗೌರಮ್ಮ, ಪತ್ನಿ ಉಷಾ, ಪುತ್ರಿ ಐಶ್ವರ್ಯ ಅವರನ್ನು ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಆದಾಯ ತೆರಿಗೆ ಕಚೇರಿಯಲ್ಲಿ ಪ್ರತ್ಯೇಕವಾಗಿ ವಿಚಾರಣೆ ನಡೆಸಿತ್ತು.

ಈ ವೇಳೆ ನಿಮ್ಮ ತಂದೆ ನಿಮ್ಮ ಹೆಸರಲ್ಲಿ ಎಷ್ಟು ಆಸ್ತಿ ಮಾಡಿದ್ದಾರೆ ಅನ್ನೋ ಪ್ರಶ್ನೆಗೆ ನನಗೆ ಗೊತ್ತಿಲ್ಲ ಎಂದು ಪುತ್ರಿ ಉತ್ತರಿಸಿದ್ದರು. ಅವರು ಇದುವರೆಗೂ ಆ ಬಗ್ಗೆ ಹೇಳಿಲ್ಲ ನಾನು ಕೇಳಿಲ್ಲ ಎಂದು ಐಶ್ವರ್ಯ ಹೇಳಿದ್ದರು.

ಗ್ಲೋಬಲ್ ಕಾಲೇಜಿನಲ್ಲಿ ನಿಮ್ಮ ಪಾತ್ರ ಏನು, ಕಾಲೇಜಿನಲ್ಲಿ ನೀವು ಪಾಲುದಾರರಾ ಎಂಬ ಪ್ರಶ್ನೆಗೆ ನಾನು ಪಾಲುದಾರಳಾಗಿಲ್ಲ. ಅಪ್ಪ ಮಾಡಿರಬಹುದು ಆ ಬಗ್ಗೆ ಗೊತ್ತಿಲ್ಲ ನಾನು ಅಲ್ಲಿ ಟ್ರಸ್ಟಿಯಾಗಿದ್ದೇನೆ ಎಂದಿದ್ದರು.

Advertisements

Leave a Reply

%d bloggers like this: