ಬೆಂಗಳೂರು : ಮೊದಲ ಅಲೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಕೇರಳ ಇದೀಗ, ಕೊರೋನಾ ಸೋಂಕಿನ ಎರಡನೆ ಅಲೆಯನ್ನು ನಿಭಾಯಿಸುವಲ್ಲಿ ಸಂಪೂರ್ಣವಾಗಿ ಎಡವಿದೆ. ದಿನದಿಂದ ದಿನಕ್ಕೆ ಏರುತ್ತಿರುವ ಸೋಂಕಿತರ ಸಂಖ್ಯೆಯ ಬಗ್ಗೆ ಕೇಳಿದ್ರೆ ನಾವು ಹೆಚ್ಚು ಸಂಖ್ಯೆಯಲ್ಲಿ ಟೆಸ್ಟ್ ಮಾಡುತ್ತಿದ್ದೇವೆ, ಹೀಗಾಗಿ ಸೋಂಕು ಏರಿದೆ ಅನ್ನುತ್ತಾರೆ ಕೇರಳ ಆರೋಗ್ಯ ಸಚಿವೆ. ಈ ಸೋಂಕು ಏರಿದ್ಯಾಕೆ ಅಂದ್ರೆ ಅವರ ಬಳಿ ಉತ್ತರವಿಲ್ಲ.
ಕೇರಳದಲ್ಲಿ ಸೋಂಕು ಏರುತ್ತಿರುವ ಪರಿಣಾಮ ಇದೀಗ ಕರ್ನಾಟದ ಗಡಿಗಳಲ್ಲಿ ಆತಂಕ ಶುರುವಾಗಿದೆ. ಅದರಲ್ಲೂ ದಕ್ಷಿಣ ಕನ್ನಡದಲ್ಲಿ ಇನ್ನೇನು ಸೋಂಕು ನಿಯಂತ್ರಣಕ್ಕೆ ಬಂತು ಅನ್ನುವಷ್ಟರಲ್ಲಿ ಸೋಂಕಿತರ ಸಂಖ್ಯೆ ಏಕಾಏಕಿ ಏರಲಾರಂಭಿಸಿದೆ.
ದಕ್ಷಿಣ ಕನ್ನಡದಲ್ಲಿ 200ರಷ್ಟು ಸೋಂಕಿತರು ಪತ್ತೆಯಾಗುತ್ತಿದ್ರೆ ಇದೀಗ 400ರ ಗಡಿ ದಾಟಿದೆ. ಕೊಡಗಿನಲ್ಲಿ 40,50ರಷ್ಚು ಸೋಂಕಿತರು ಪತ್ತೆಯಾಗುತ್ತಿದ್ರೆ, ಇದೀಗ ನೂರರ ಸನಿಹಕ್ಕೆ ಬಂದು ನಿಂತಿದೆ. ಉಡುಪಿಯಲ್ಲೂ ಇದೇ ಕಥೆ. ಮೈಸೂರಿನಲ್ಲೂ ಸೋಂಕು ನಿಯಂತ್ರಣಕ್ಕೆ ಬಂತು ಅನ್ನುವಷ್ಟರಲ್ಲಿ ಕೇರಳ ಸೂಪರ್ ಸ್ಪ್ರೆಡರ್ ರೀತಿ ಕಾಣಿಸುತ್ತಿದೆ
Discussion about this post