2019ರ ಮಾರ್ಚ್ 14 ರಂದು ಶೃಂಗೇರಿಯಲ್ಲಿ ಗೃಹಸ್ಥಾಶ್ರಮ ಪ್ರವೇಶಿಸಿದ್ದ ಗೋವಿಂದೇ ಗೌಡ ಹಾಗೂ ದಿವ್ಯಶ್ರೀ ಇದೀಗ ಸಿಹಿ ಸುದ್ದಿ ನೀಡಿದ್ದಾರೆ. . ಗೋವಿಂದೇ ಗೌಡ ಹಾಗೂ ದಿವ್ಯಶ್ರೀ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ‘ಕಾಮಿಡಿ ಕಿಲಾಡಿಗಳು ಅನ್ನುವ ರಿಯಾಲಿಟಿ ಶೋ ಮೂಲಕ ಗೋವಿಂದೇ ಗೌಡ ಹಾಗೂ ದಿವ್ಯಶ್ರೀ ಕನ್ನಡಿಗರಿಗೆ ಪರಿಚಿತರಾಗಿದ್ದರು ಮಾತ್ರವಲ್ಲದೆ ಅವರಿಬ್ಬರೂ ಪರಸ್ಪರ ಪ್ರೀತಿಯಲ್ಲಿ ಬೀಳುವಂತೆ ಮಾಡಿದ್ದು ಕೂಡಾ ಇದೇ ಕಾಮಿಡಿ ಕಿಲಾಡಿಗಳು ಶೋ.
ಇದೀಗ ನಟಿ ದಿವ್ಯಶ್ರೀ ಇದೀಗ ತುಂಬು ಗರ್ಭಿಣಿ. ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ದಿವ್ಯಶ್ರೀ ಇತ್ತೀಚೆಗಷ್ಟೇ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದಾರೆ. ನೀಲಿ ಸೀರೆಯುಟ್ಟುಕೊಂಡು ಪ್ರೆಗ್ನೆನ್ಸಿ ಫೋಟೋಶೂಟ್‌ನಲ್ಲಿ ದಿವ್ಯಶ್ರೀ ಭಾಗವಹಿಸಿದ್ದಾರೆ. ಫೋಟೋಗಳನ್ನು ಗೋವಿಂದೇ ಗೌಡ ಅವರು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದ ಮುಖಾಂತರವೇ ಗೋವಿಂದೇ ಗೌಡ ಹಾಗೂ ದಿವ್ಯಶ್ರೀ ಪರಿಚಿತಗೊಂಡಿದ್ದರು. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಗೆ ತಿರುಗಿತು. ಗೋವಿಂದೇ ಗೌಡ ಹಾಗೂ ದಿವ್ಯಶ್ರೀ ಪ್ರೀತಿಗೆ ಕುಟುಂಬಸ್ಥರು ಸಮ್ಮತಿ ನೀಡಿದರು. ಬಳಿಕ ಶಾಸ್ತ್ರೋಕ್ತವಾಗಿ ಗೋವಿಂದೇ ಗೌಡ ಮತ್ತು ದಿವ್ಯಶ್ರೀ ವಿವಾಹ ಬಂಧನಕ್ಕೆ ಒಳಗಾದರು.
ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಬಳಿಕ ಗೋವಿಂದೇ ಗೌಡ ಹಾಗೂ ದಿವ್ಯಶ್ರೀಗೆ ಕನ್ನಡ ಚಿತ್ರರಂಗದಿಂದ ಅವಕಾಶಗಳು ಹುಡುಕಿಕೊಂಡು ಬರಲಾರಂಭಿಸಿದವು. ‘ಕೆಜಿಎಫ್’ ಹಾಗೂ ‘ಭರಾಟೆ’ ಸಿನಿಮಾಗಳಲ್ಲಿ ಗೋವಿಂದೇ ಗೌಡ ನಟಿಸಿದರು. ಇನ್ನೂ ‘ಪುಣ್ಯಾತ್‌ಗಿತ್ತಿಯರು’ ಸಿನಿಮಾದಲ್ಲಿ ದಿವ್ಯಶ್ರೀ ಅಭಿನಯಿಸಿದರು. ‘ಜಂತರ್ ಮಂತರ್’ ಎಂಬ ಚಿತ್ರಕ್ಕೆ ಗೋವಿಂದೇ ಗೌಡ ಆಕ್ಷನ್ ಕಟ್ ಹೇಳಿದ್ದರು.
Discussion about this post