ವಿಶ್ವಸಂಸ್ಥೆಯಲ್ಲಿ ಐತಿಹಾಸಿಕ ಭಾಷಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಕೊರೋನಾ ಸೋಂಕಿನ ವಿಚಾರ ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ ಸಾಂಕ್ರಾಮಿಕ ರೋಗದಿಂದ ಇಡೀ ವಿಶ್ವ ಸಂಕಷ್ಟಕ್ಕೆ ಸಿಲುಕಿದೆ. ಈ ಮಹಾಮಾರಿಗೆ ಬಲಿಯಾದ ಎಲ್ಲರಿಗೂ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಅಂದಿರುವ ಪ್ರಧಾನಿ, ಕೊರೋನಾ ಸೋಲಿಸುವ ನಿಟ್ಟಿನಲ್ಲಿ ಭಾರತ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ್ದಾರೆ.
ಭಾರತ ಸಂಶೋಧಿಸಿರುವ ವಿಶ್ವದ ಮೊದಲ ಡಿಎನ್ಎ ವ್ಯಾಕ್ಸಿನ್ 12 ವರ್ಷ ಮೀರಿದ ಮಕ್ಕಳಿಗೆ ಈ ಲಸಿಕೆ ಸಹಾಯಕವಾಗಲಿದೆ. ಇನ್ನು ಇನ್ನು ಮೂಗಿನ ಮೂಲಕ ನೀಡಬಹುದಾದ RNA ಲಸಿಕೆ ಸಂಶೋಧನೆ ಅಂತಿಮ ಹಂತದಲ್ಲಿದೆ ಎಂದು ವಿವರಿಸಿದರು.
ಇದೇ ವೇದಿಕೆಯಲ್ಲಿ ವಿಶ್ವದ ಲಸಿಕೆ ತಯಾರಕರನ್ನು ಭಾರತಕ್ಕೆ ಬಹಿರಂಗವಾಗಿ ಆಹ್ವಾನಿಸಿದ ನರೇಂದ್ರ ಮೋದಿ Come make vaccine in India, ಬನ್ನಿ ಭಾರತದಲ್ಲಿ ಲಸಿಕೆ ತಯಾರಿಸಿ ತಯಾರಿಸಿ ಅಂದಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಇತರ ದೇಶಗಳು ಭಾರತದಲ್ಲಿ ಲಸಿಕೆ ತಯಾರಿಸಲಿದೆ ಅನ್ನುವುದರ ಸುಳಿವು ನೀಡಿದ್ದಾರೆ.
Discussion about this post