ಬೊಮ್ಮಾಯಿ ಸರ್ಕಾರಕ್ಕೆ ಇದೀಗ ದೊಡ್ಡ ಸಂಕಷ್ಟ ಎದುರಾಗಿದೆ. ಮೋದಿಯವರೇ ಈ ವರದಿಯನ್ನು ಪರಿಶೀಲನೆ ನಡೆಸಲಿದ್ದಾರೆ
ಬೆಂಗಳೂರು : ರಾಜ್ಯ ಸರ್ಕಾರ ವಿರುದ್ಧ ಕರ್ನಾಟಕ ಗುತ್ತಿಗೆದಾರರ ಸಂಘ 40% ಆರೋಪ ಮಾಡಿತ್ತು. ಈ ಬಗ್ಗೆ ನ್ಯಾಯ ಕೇಳಿ ರಾಜ್ಯ. ಸರ್ಕಾರದ ಕದ ತಟ್ಟಿದ್ದ ಗುತ್ತಿಗೆದಾರರಿಗೆ ನಿರಾಶೆಯಾಗಿತ್ತು. ಇದಾದ ಬಳಿಕ ಪ್ರಧಾನಮಂತ್ರಿಗಳಿಗೆ ಮಂತ್ರಿ ಬರೆದಿದ್ದ ಗುತ್ತಿಗೆದಾರರು ಸಂಘ ನ್ಯಾಯಕ್ಕಾಗಿ ಮೊರೆ ಇಟ್ಟಿತ್ತು.
ಇದಾದ ಬಳಿಕ ಸಾಕಷ್ಟು ಬೆಳವಣೆಗೆಗಳು ನಡೆದಿತ್ತು. ಗುತ್ತಿಗೆದಾರನೊಬ್ಬ ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದ. ಸಚಿವರೊಬ್ಬರ ತಲೆದಂಡವೂ ಆಗಿತ್ತು.
ಇದೀಗ ಪ್ರಕರಣ ಕುರಿತಂತೆ ಗಂಭೀರವಾಗಿರುವ ಪ್ರಧಾನಮಂತ್ರಿ ಸಚಿವಾಲಯ ಗುತ್ತಿಗೆದಾರರ ಪತ್ರ ಕುರಿತಂತೆ ತನಿಖೆ ನಡೆಸಲು ಗೃಹ ಸಚಿವಾಲಯಕ್ಕೆ ಸೂಚಿಸಿದೆ. ಈ ಸಂಬಂಧ ಗೃಹಸಚಿವಾಲಯದ ಅಧಿಕಾರಿಗಳು ಬೆಂಗಳೂರಿಗೆ ಭೇಟಿ ನೀಡಿದ್ದು, ಸೂಕ್ತ ದಾಖಲೆಗಳ ಸಂಗ್ರಹಕ್ಕೆ ತೊಡಗಿದ್ದಾರೆ ಅನ್ನಲಾಗಿದೆ.
ಈ ನಡುವೆ ಬೆಳವಣಿಗೆ ಕುರಿತಂತೆ ಪ್ರತಿಕ್ರಿಯಿಸಿರುವ ಡಿಕೆ ಸಹೋದರರು ಇದೊಂದು ನಾಟಕ ಅಂದಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರನ್ನು ಬೆದರಿಸುವ ತಂತ್ರದಂತೆ ಗೋಚರಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
Discussion about this post