ಚಿಕ್ಕಮಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ನಿಧಾನವಾಗಿ ಕಡಿಮೆಯಾಗುತ್ತಿದೆ. ಆದರೆ ಸಾವಿನ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಹೀಗಾಗಿ ಕೊರೋನಾ ಸೋಂಕಿನ ಬಗ್ಗೆ ಆತಂಕ ಪ್ರಾರಂಭವಾಗಿದೆ.
ಸೋಂಕಿನ ಬಗ್ಗೆ ಜನರಲ್ಲಿ ನಿರ್ಲಕ್ಷ್ಯ, ಪಾಸಿಟಿವ್ ಎಂದು ಅಕ್ಕ ಪಕ್ಕದ ಮನೆಯವರಿಗೆ ಗೊತ್ತಾದ್ರೆ ನಮ್ಮನ್ನು ಹೇಗೆ ನೋಡ್ತಾರೋ ಅನ್ನುವ ಆತಂಕದಿಂದ ಬೆಂಗಳೂರು ಸೇರಿದಂತೆ ನಗರ ಪ್ರದೇಶದ ಮಂದಿ ಕೊರೋನಾ ಪರೀಕ್ಷೆ ಹೋಗ್ತಾನೆ ಇರಲಿಲ್ಲ. ಹೀಗಾಗಿಯೇ ಸೋಂಕಿತರ ಆರೋಗ್ಯ ಸ್ಥಿತಿ ಗಂಭೀರವಾದ ನಂತ್ರ ಆಸ್ಪತ್ರೆ ಬಾಗಿಲು ತಟ್ಟುತ್ತಾರೆ ಅಷ್ಟು ಹೊತ್ತಿಗೆ ವೈದ್ಯರು ಕೂಡಾ ಏನು ಮಾಡೋ ಸ್ಥಿತಿಯಲ್ಲಿ ಇರೋದಿಲ್ಲ. ಹೀಗಾಗಿಯೇ ಸಾವಿನ ಸಂಖ್ಯೆಗೆ ಕಡಿವಾಣ ಬಿದ್ದಿಲ್ಲ ಅನ್ನಲಾಗಿದೆ.
ಇದೀಗ ಕೊರೋನಾ ಟೆಸ್ಟಿಂಗ್ ತಪ್ಪಿಕೊಳ್ಳುವ ಚಾಳಿ ಹಳ್ಳಿಗಳಿಗೂ ಕಾಲಿಟ್ಟಿದೆ. ಸೋಂಕು ಬಂದವರನ್ನು ಅಕ್ಕ ಪಕ್ಕದ ಮನೆಯವರು ನೋಡೋ ದೃಷ್ಟಿಯೇ ಹಳ್ಳಿಗಳಲ್ಲಿ ವಿಚಿತ್ರವಾಗಿರುತ್ತದೆ. ಸೋಂಕಿನ ಬಗೆಗಿನ ಜಾಗೃತಿ ಕೊರತೆಯಿಂದ ಹೀಗಾಗಿದೆ. ಈ ಕಾರಣದಿಂದ ಅದ್ಯಾವ ಜ್ವರ ಬಂದರೂ ಡೋಲೋ ಮಾತ್ರೆ ನುಂಗಿ ಜನ ಸುಮ್ಮನಾಗುತ್ತಿದ್ದಾರೆ. ಆದರೆ ಎಲ್ಲರಿಗೂ ಡೋಲೋ ಮಾತ್ರೆಗಳು ಫಲಿತಾಂಶ ಕೊಡೋದಿಲ್ಲ. ಅನೇಕರಿಗೆ ವೈದ್ಯರ ಸಹಾಯ ಮೊದಲೇ ಬೇಕಾಗಿರುತ್ತದೆ. ಈ ಕೆಟ್ಟ ಚಾಳಿಯ ಕಾರಣದಿಂದಲೇ ಚಿಕ್ಕಮಗಳೂರಿನ ಹಿರೇ ಮಗಳೂರಿನಲ್ಲಿ ಸರಣಿ ಸಾವುಗಳು ಪ್ರಾರಂಭವಾಗಿದೆ.
ಕಳೆದ 15 ದಿನಗಳಲ್ಲಿ 10 ಮಂದಿ ಮೃತಪಟ್ಟಿದ್ದು ಊರಿಗೆ ಊರೇ ಆತಂಕದಲ್ಲಿದೆ. ಆದರೆ ಮೃತಪಟ್ಟವರ ಪೈಕಿ ಕೇವಲ ಮೂವರಿಗೆ ಮಾತ್ರ ಕೊರೋನಾ ಬಂದಿತ್ತು, ಉಳಿದವರು ಕಾರಣವಿಲ್ಲದೆ ಮೃತಪಟ್ಟರು ಅನ್ನೋದು ಊರವರ ವಾದ. ಜೊತೆಗೆ ಗಟ್ಟಿ ಮುಟ್ಟಾಗಿದ್ದ ಯುವಕರು, ಆರೋಗ್ಯವಂತರಾಗಿದ್ದ ಮಧ್ಯ ವಯಸ್ಕರು ಮೃತರಲ್ಲಿ ಸೇರಿದ್ದಾರೆ, ಅವರಿಗೆಲ್ಲಾ ಎಂತಾ ಕೊರೋವಾ ಅನ್ನೋದು ಗ್ರಾಮಸ್ಥರ ಮಾತು.
ಆದರೆ 10 ಜನರ ಪೈಕಿ ಮೂವರಿಗೆ ಪಾಸಿಟಿವ್, ಉಳಿದ 7 ಮಂದಿಯ ಕೊರೋನಾ ಪರೀಕ್ಷೆಯನ್ನೇ ನಡೆಸಿಲ್ಲ. ಒಂದು ವೇಳೆ ಪರೀಕ್ಷೆ ನಡೆಸಿದ್ರೆ ಸತ್ಯ ಬಯಲಾಗಿರೋದು. ಹೀಗಾಗಿಯೇ ಸಣ್ಣ ಜ್ವರ ಬಂದರೂ ಆಸ್ಪತ್ರೆಗೆ ಹೋಗುವುದನ್ನು ಜನ ರೂಢಿಸಕೊಳ್ಳದ ಹೊರತು ಕೊರೋನಾ ಸಾವಿನ ಸಂಖ್ಯೆ ಬ್ರೇಕ್ ಹಾಕಲು ಸಾಧ್ಯವಿಲ್ಲ.
Discussion about this post