ಬೆಂಗಳೂರು : ನಾಯಿ ಬಾಲದ ಡೊಂಕನ್ನಾದರೂ ಸರಿ ಮಾಡಬಹುದು, ಆದರೆ ಬಿಗ್ ಬಾಸ್ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್ ನಡವಳಿಕೆಯನ್ನು ಸರಿ ಮಾಡಲು ಸಾಧ್ಯವೇ ಇಲ್ಲ. ಬೀಪ್ ಚಕ್ರವರ್ತಿ, ಪತ್ರವಳ್ಳಿ ಚಕ್ರವರ್ತಿ, ಬಾಡಿಗಾರ್ಡ್ ಚಕ್ರವರ್ತಿ, 11 ವಿದ್ಯೆಗಳ ಪ್ರತಿಭಾವಂತ ಹೀಗೆ ವೀಕ್ಷಕರಿಂದ ನೆಗೆಟಿವ್ ಬಿರುದುಗಳನ್ನೇ ಪಡೆದಿರುವ ಚಕ್ರವರ್ತಿ ಚಂದ್ರಚೂಡ್ ಎಡವಟ್ಟುಗಳ ಮೇಲೆ ಎಡವಟ್ಟು ಮಾಡುತ್ತಿದ್ದಾರೆ. ಚಂದ್ರಚೂಡ್ ಕಾರಣದಿಂದ ಬಿಗ್ ಬಾಸ್ ಮನೆಯ ಆಟದಲ್ಲಿ ಸಂಪೂರ್ಣವಾಗಿ ದಾರಿ ತಪ್ಪಿದ್ದ ಪ್ರಶಾಂತ್ ಸಂಬರಗಿ ಇದೀಗ ಈ ಯಪ್ಪನ ಸಹವಾಸ ಯಾಕೆ ಬೇಕಿತ್ತು ಎಂದು ಪರಿತಪಿಸುತ್ತಿದ್ದಾರೆ.
ಕಳೆದ ವಾರವಷ್ಟೇ ಚಕ್ರವರ್ತಿ ನಡವಳಿಕೆಯಿಂದ ಕಿರಿಕಿರಿ ಅನುಭವಿಸಿದ್ದ ಸುದೀಪ್ ಅವರೇ ಹಿಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಇದಾದ ಬಳಿಕ ಚೂಡ್ ಅವರ ನಡವಳಿಕೆಯಲ್ಲಿ ಒಂದಿಷ್ಟು ಬದಲಾವಣೆ ಕಾಣಿಸಿತ್ತು. ಸುದೀಪ್ ಮದ್ದು ಕೆಲಸ ಮಾಡುತ್ತಿದೆ ಅನ್ನುವಷ್ಟರಲ್ಲಿ, ಮತ್ತೆ ತನ್ನ ಹಳೆಯ ಚಾಳಿ ಮುಂದುವರಿಸಿದ್ದರು. ಫ್ಯಾಶನ್ ಶೋ ಟಾಸ್ಕ್ ಬಳಿಕ ಡೈನಿಂಗ್ ಟೇಬಲ್ ನಲ್ಲಿ , ಬ್ರೋಗೌಡ ಖ್ಯಾತಿಯ ಶಮಂತ್ ಎರಡು ದೋಣಿಯಲ್ಲಿ ಕಾಲಿಡಲು ಹೋಗುತ್ತಿದ್ದಾನೆ ಅಂದಿದ್ದರು. ಈ ಮೂಲಕ ಪ್ರಿಯಾಂಕ ತಿಮ್ಮೇಶ್ ಹಾಗೂ ದಿವ್ಯಾ ಸುರೇಶ್ ಅವರಿಗೆ ಹರ್ಟ್ ಮಾಡಿದ್ದರು. ಅದು ಕಳೆದ ಶನಿವಾರ ಸುದೀಪ್ ಮುಂದೆ ಚರ್ಚೆ ಬಂದಿತ್ತು. ಎಚ್ಚೆತ್ತುಕೊಂಡ ಚಂದ್ರಚೂಡ್ ಅದ್ಯಾವುದೇ ಕಥೆ ಕಟ್ಟಿ ಪಾರಾಗಿದ್ದರು.
ಆದರೆ ಇದೀಗ ಬಿಗ್ ಬಾಸ್ ಮನೆಯ ಚಂದ್ರಚೂಡ್ ಅದೆಂತಾ ಅಸಹ್ಯ ವ್ಯಕ್ತಿ ಅನ್ನುವುದು ಗೊತ್ತಾಗಿದೆ. ಭಾನುವಾರ ಬಿಗ್ ಬಾಸ್ ಮಹಾಮನೆಯ ಪಯಣ ಪ್ರಿಯಾಂಕ ತಿಮ್ಮೇಶ್ ಪಾಲಿಗೆ ಅಂತ್ಯವಾಗಿದೆ. ಮನೆಯಿಂದ ಹೊರ ಬರುವ ವೇಳೆ ಬಿಗ್ ಬಾಸ್ ಟಾಸ್ಕ್ ಪ್ರಕಾರ ಚಕ್ರವರ್ತಿಯವರನ್ನು ನೇರ ನಾಮಿನೇಟ್ ಮಾಡಿದ್ದರು. ಈ ಮೂಲಕ ಚಕ್ರವರ್ತಿಗೆ ಶಾಕ್ ಕೊಟ್ಟಿದ್ದರು ಪ್ರಿಯಾಂಕ.
ಈ ಸಂದರ್ಭದಲ್ಲಿ ಮನೆಯ ಎಲ್ಲಾ ಸದಸ್ಯರು ಪ್ರಿಯಾಂಕ ಅವರನ್ನು ಕಳುಹಿಸಿಕೊಡಲು ಬಾಗಿಲ ಬಳಿ ನಿಂತಿದ್ರೆ ಚಂದ್ರಚೂಡ್ ಮಾತ್ರ ಸೋಫಾದಲ್ಲಿ ಕೂತಿದ್ದರು. ಯಾವಾಗ ಪ್ರಿಯಾಂಕ ನೇರವಾಗಿ ನಾಮಿನೇಟ್ ಮಾಡುತ್ತಿರುವುದು ಕಿವಿಗೆ ಬಿತ್ತೋ, ಚಂದ್ರಚೂಡ್ ಮಿಡಲ್ ಫಿಂಗರ್ ತೋರಿಸಿದ್ದಾರೆ. ಈ ಮೂಲಕ ತಾನೇನು, ತನ್ನ ವ್ಯಕ್ತಿತ್ವವೇನು ತನ್ನ ಮನಸ್ಥಿತಿ ಎಂತಹುದು ಅನ್ನುವುದನ್ನು ಕರ್ನಾಟಕದ ಮುಂದೆ ತೆರೆದಿಟ್ಟಿದ್ದಾರೆ ಚಂದ್ರಚೂಡ್.
ಇದನ್ನು ಗಮನಿಸಿದ ಪ್ರಶಾಂತ್ ಪಬ್ಲಿಕ್ ಡೋಮೇನ್ ನಲ್ಲಿ ಹಾಗೆಲ್ಲಾ ಮಾಡಬಾರದು ಅಂದಿದ್ದಾರೆ. ಅಲ್ಲಿಗೆ ಈ ಶನಿವಾರ ಚಂದ್ರಚೂಡ್ ಅವರ ಗ್ರಹಚಾರವನ್ನು ಸುದೀಪ್ ಬಿಡಿಸಲಿದ್ದಾರೆ ಅನ್ನುವುದು ಪಕ್ಕಾ
Discussion about this post