ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ತಿರುವಿನ ಮೇಲೆ ತಿರುವು ಪಡೆದುಕೊಳ್ಳುತ್ತಿದೆ.
ಈ ಹಿಂದೆ ಕೆಲ ನ್ಯೂಸ್ ಚಾನೆಲ್ ಗಳು ಸೂಚ್ಯವಾಗಿ ಹೇಳಿದಂತೆ, ಇದು ಡಿಕೆ ಶಿವಕುಮಾರ್ ಹಾಗೂ ರಮೇಶ್ ಕುಮಾರ್ ನಡುವೆ ವೈಯುಕ್ತಿಕ ಜಗಳ. ಆದರೆ ಈ ವೈಯುಕ್ತಿಕ ಜಗಳದಲ್ಲಿ ಅಮಾಯಕರು ಬಲಿಪಶುಗಳಾದ್ರು. ಹನಿ ಮತ್ತು ಹಣದ ಆಸೆಗೆ ಬಿದ್ದವರು ಸಂಕಷ್ಟಕ್ಕೆ ಸಿಲುಕಿರುವುದು ಸ್ಪಷ್ಟವಾಗಿದೆ.
ಕಾಮಲೀಲೆಯ ಸಿಡಿ ಪ್ರಕರಣದ ಕಾರಣದಿಂದ ರಾಜ್ಯದ ಜ್ವಲಂತ ಸಮಸ್ಯೆಗಳು ಸತ್ತು ಹೋಯ್ತಲ್ಲ ಅನ್ನುವುದೇ ವಿಪರ್ಯಾಸ. ಅಮಾಯಕ ಹುಡುಗಿಯೊಬ್ಬಳ ಮೇಲೆ ಅತ್ಯಾಚಾರವಾದ ಸಂದರ್ಭದಲ್ಲಿ ಅಪರಾಧಿಯನ್ನು ಹಿಡಿಯಲು ಎಸ್ಐಟಿಗಳೂ ರಚನೆಯಾಗಲಿಲ್ಲ, ವಿಶೇಷ ತನಿಖಾ ತಂಡಗಳು ರಚನೆಯಾಗಲಿಲ್ಲ. ಹೋಗ್ಲಿ ಆರೋಪಿಗೆ ಶೀಘ್ರ ಶಿಕ್ಷೆಯಾಗಬೇಕೆಂದು ಯಾವ ಸರ್ಕಾರಗಳೂ ಮನಸ್ಸು ಮಾಡಲಿಲ್ಲ. ಇಂದಿಗೂ ದೇಶದಲ್ಲಿ ಅದೆಷ್ಟು ಪೋಷಕರು ಮಗಳ ಸಾವಿಗೊಂದು ನ್ಯಾಯ ಸಿಗಲಿ ಎಂದು ಕಾಯುತ್ತಿಲ್ಲ.
ಆದರೆ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಗೆ ಸಿಕ್ಕ ವೇಗವನ್ನು ನೋಡಿದರೆ, ಉಳ್ಳವರಿಗೊಂದು ನ್ಯಾಯ, ಇಲ್ಲದವರಿಗೊಂದು ನ್ಯಾಯ ಅನ್ನುವುದು ಸ್ಪಷ್ಟವಾಗುತ್ತದೆ.
ಈ ನಡುವೆ ಇಷ್ಟುಗಳ ದಿನಗಳ ಮಾಧ್ಯಮಗಳ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಸಂತ್ರಸ್ಥ ಯುವತಿಯ ಪೋಷಕರು ಏಕಾಏಕಿ ಮಾಧ್ಯಮಗಳ ಮುಂದೆ ಪ್ರತ್ಯಕ್ಷರಾಗಿದ್ದಾರೆ. ಅವರು ಹೇಗೆ ಮಾಧ್ಯಮಗಳ ಮುಂದೆ ಬಂದಿರಬಹುದು ಅನ್ನುವುದು ಪ್ರಜ್ಞಾವಂತರಿಗೆ ಖಂಡಿತಾ ಗೊತ್ತಿರುತ್ತದೆ.
ಯಾವಾಗ ಸಿಡಿ ಲೇಡಿಯ ಪೋಷಕರು ನೇರವಾಗಿ ಡಿಕೆ ಶಿವಕುಮಾರ್ ಮೇಲೆ ಆರೋಪ ಮಾಡಿದರೋ, ರೆಕೆಪುಕ್ಕಗಳಿಲ್ಲದೆ ಹಾರಾಡುತ್ತಿದ್ದ ಗಾಳಿ ಸುದ್ದಿಗೊಂದು ಬಲ ಬಂದು ಬಿಟ್ಟಿದೆ.
ಜೊತೆಗೆ ಇನ್ನು ನನ್ನ ಆಟ ಶುರು ಎಂದು ನಿನ್ನೆಯೇ ಹೇಳಿದ್ದ ರಮೇಶ್ ಜಾರಕಿಹೊಳಿ ಕೂಡಾ ಸಿಡಿ ಲೇಡಿಯ ಪೋಷಕರ ಹೇಳಿಕೆ ಬೆನ್ನಲ್ಲೇ ಮಾಧ್ಯಮಗಳಿಗೆ ಮಾತನಾಡಿದ್ದಾರೆ. ಪೋಷಕರಿಗೆ ವಿಶೇಷ ಧನ್ಯವಾದ ಹೇಳಿರುವ ಅವರು, ಡಿಕೆ ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಾತ್ರವಲ್ಲದೆ ‘ಗಾಂಡು‘ ಅನ್ನುವ ಪದವನ್ನು ಪ್ರಯೋಗ ಮಾಡಿದ್ದಾರೆ.
ಜಾರಕಿಹೊಳಿಯವರಿಗೆ ಟೀಕೆ ಮಾಡುವ, ಕೆಂಡ ಕಾರುವ ಎಲ್ಲಾ ಅಧಿಕಾರಗಳಿದೆ. ಆದರೆ ಈ ರೀತಿ ಶಬ್ಧ ಪ್ರಯೋಗ ಮಾಡುವುದು ಪ್ರಜ್ಞಾವಂತರ ನಾಗರಿಕ ಅನ್ನಿಸಿಕೊಂಡವರಿಗೆ ಶೋಭೆಯಲ್ಲ. ಅದರಲ್ಲೂ ಜನಪ್ರತಿನಿಧಿ ಅನ್ನಿಸಿಕೊಂಡವರು ಹೀಗಾಡಿದ್ರೆ ಅದು ಅವರ ಚರಿತ್ರೆಗೆ ಹಿಡಿದ ಕೈಗನ್ನಡಿಯಾಗಿರುತ್ತದೆ.
ಅದರಲ್ಲೂ ಬಿಜೆಪಿ ಪಕ್ಷಕ್ಕೆ ಸೇರಿದ ಮೇಲೆ ಇಂತ ಮಾತುಗಳನ್ನು ಖಂಡಿತಾ ಆಡ್ಲೇ ಬಾರದು.
ದುರಂತ ಅಂದ್ರೆ ಆಡಬಾರದ ಮಾತನ್ನು ಆಡುತ್ತಿರುವ ಜಾರಕಿಹೊಳಿ ಬೆಂಬಲಕ್ಕೆ ಬಿಜೆಪಿ ನಿಂತಿರುವುದು ದುರಂತವೇ ಸರಿ. ರಮೇಶ್ ಜಾರಕಿಹೊಳಿಯವರನ್ನು ಸಮರ್ಥಿಸಿಕೊಳ್ಳುವ ಮುನ್ನ ಸಿದ್ದರಾಮಯ್ಯ ಸರ್ಕಾರದಲ್ಲಿ ರಮೇಶ್ ಜಾರಕಿಹೊಳಿ ಏನು ಮಾಡಿದ್ದರು ಅನ್ನುವುದನ್ನು ಬಿಜೆಪಿ ನಾಯಕರು ತಿಳಿದುಕೊಳ್ಳುವುದು ಮುಖ್ಯ.
Discussion about this post