ಮೂವರು ಕ್ಯಾನ್ಸರ್ ತಜ್ಞ ವೈದ್ಯರು ಬರೆದಿರುವ “ಕ್ಯಾನ್ಸರ್ ಪ್ರಿವೆನ್ಷನ್ ಎ ಗೈಡ್” (Cancer Prevention: A Guide)
ಬೆಂಗಳೂರು: ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಇಂದು ನಗರದಲ್ಲಿ ಸೊಸೈಟಿ ಫಾರ್ ಪ್ರಿವೆನ್ಷನ್ ಆಫ್ ಕ್ಯಾನ್ಸರ್ (ಎಸ್ಪಿಒಸಿ) ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮೂವರು ಕ್ಯಾನ್ಸರ್ ತಜ್ಞ ವೈದ್ಯರು ರಚಿಸಿರುವ “ಕ್ಯಾನ್ಸರ್ ಪ್ರಿವೆನ್ಷನ್ ಎ ಗೈಡ್” (Cancer Prevention: A Guide) ಎಂಬ ವಿಶೇಷ ಪುಸ್ತಕವನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಎಂ.ಕೆ.ರಮೇಶ್ ಅವರು ಬಿಡುಗಡೆ ಮಾಡಿದರು.
ಪುಸ್ತಕ ಬಿಡುಗಡೆಗೊಳಿಸಿದ ಬಳಿಕ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ಯಾನ್ಸರ್ ತಡೆಗಟ್ಟುವಿಕೆ ಹಿನ್ನೆಲೆ ಪುಸ್ತಕ ರಚಿಸಿದರ ಕುರಿತು ಸಂತಸ ವ್ಯಕ್ತಪಡಿಸಿದರು. ಪ್ರಸ್ತುತ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಅಳವಡಿಸಿಕೊಂಡಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಲು ಸಾಧ್ಯ ಮತ್ತು ಆರೋಗ್ಯಕರ ಸಮಾಜವನ್ನು ಬೆಳೆಸಲು ಈ ಪುಸ್ತಕ ಕೊಡುಗೆ ನೀಡುತ್ತದೆ ಎಂದು ಲೇಖಕರನ್ನು ಶ್ಲಾಘಿಸಿದರು.
ಇದನ್ನೂ ಓದಿ : ಕ್ಷಮಿಸು ಬಿಡು ಪ್ರತಾಪ್ : ಡ್ರೋನ್ ಕ್ಷಮೆಯಾಚಿಸಿದ ಈಶಾನಿ
ಪುಸ್ತಕದ ಸಹ ಸಂಪಾದಕರಾದ ಡಾ. ನಂದಾ ರಜನೀಶ್ (ಸೊಸೈಟಿ ಫಾರ್ ಪ್ರಿವೆನ್ಷನ್ ಆಫ್ ಕ್ಯಾನ್ಸರ್ – ಸಂಸ್ಥಾಪಕ-ನಿರ್ದೇಶಕರು ಮತ್ತು ಅಧ್ಯಕ್ಷರು) ಮಾತನಾಡಿ, ಕ್ಯಾನ್ಸರ್ ತಡೆಗಟ್ಟುವಿಕೆಗೆ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲು ಸಲಹೆ ನೀಡಿದರು. ಪ್ರಸ್ತುತ ಪುಸ್ತಕವು ಕ್ಯಾನ್ಸರ್ ತಡೆಗಟ್ಟುವ ಕ್ರಮಗಳಿಗೆ ಮಾತ್ರವಲ್ಲದೆ ಕ್ಯಾನ್ಸರ್ ರೋಗಿಗಳಿಗೂ ಕೂಡ ಕ್ಯಾನ್ಸರ್ ವಿರುದ್ಧ ಹೋರಾಡಲು ಮಾರ್ಗದರ್ಶನ ನೀಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಹ ಸಂಪಾದಕರಾದ ಹಾಗೂ ಯೆನೆಪೊಯ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಂ. ವಿಜಯ್ ಕುಮಾರ್ ಮಾತನಾಡಿ, ಪುಸ್ತಕದಲ್ಲಿ ಎಲ್ಲಾ ರೀತಿಯ ಕ್ಯಾನ್ಸರ್ ತಡೆಗಟ್ಟುವಿಕೆಗೆ ಮಾರ್ಗದರ್ಶನ ನೀಡಲಾಗಿದೆ. ಕ್ಯಾನ್ಸರ್ ತಡೆಗಟ್ಟುವಿಕೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯ ಎಂದು ಒತ್ತಿ ಹೇಳಿದರು. ಅಲ್ಲದೆ ಇನ್ನಷ್ಟು ವಿಷಯಗಳ ಅಳವಡಿಕೆಯೊಂದಿಗೆ ಪುಸ್ತಕದ ಎರಡನೇ ಆವೃತ್ತಿಯನ್ನು ಬಿಡುಗಡೆ ಮಾಡಲು ಯೋಜಿಸಿರುವುದಾಗಿ ತಿಳಿಸಿದರು.
ಮತ್ತೋರ್ವ ಸಹ ಸಂಪಾದಕರಾದ ಡಾ. ರೋಹನ್ ಥಾಮಸ್ ಮ್ಯಾಥ್ಯೂ ಅವರು, ಪುಸ್ತಕದಲ್ಲಿ ನೀಡಲಾಗಿರುವ ಪ್ರಾಯೋಗಿಕ ಸಲಹೆಗಳ ಕುರಿತು ವಿವರಿಸಿದರು. ತಂಬಾಕು ಹಾಗೂ ಮದ್ಯಪಾನವನ್ನು ತ್ಯಜಿಸುವುದರಿಂದ ಹಿಡಿದು ಸಮಗ್ರ ಚಿಕಿತ್ಸೆಗಳ ಕುರಿತಾಗಿ ಮಾಹಿತಿ ನೀಡಿದರು. ಎರಡು ವರ್ಷಗಳ ನಿರಂತರ ಶ್ರಮದಿಂದ ರಚಿಸಲಾದ ಈ ಕೃತಿಯು ಶೈಕ್ಷಣಿಕ ಮಾಹಿತಿಗೆ ಸೀಮಿತವಾಗಿರದೆ ಪ್ರತಿಯೊಬ್ಬರಿಗೂ ಮಾರ್ಗದರ್ಶಿಯಾಗಿದೆ ಎಂದರು. ಪುಸ್ತಕದ ಪ್ರತಿ ಅಧ್ಯಾಯವು ಕ್ಯಾನ್ಸರ್ ತಡೆಗಟ್ಟುವಿಕೆಯ ಬಗ್ಗೆ ಒತ್ತಿ ಹೇಳುತ್ತದೆ ಎಂದು ನುಡಿದರು.
Discussion about this post