ಬೃಂದಾವನ ಧಾರಾವಾಹಿಯಲ್ಲಿ ವಿಶ್ವನಾಥ್ Child ರೀತಿ ಕಾಣಿಸುತ್ತಿದ್ದಾನೆ ಅಂದ್ರು
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಹೊಸ ಧಾರಾವಾಹಿ ಬೃಂದಾವನಕ್ಕೆ ವೀಕ್ಷಕರಿಂದ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿದೆ. ಈ ಧಾರಾವಾಹಿಯಲ್ಲಿ ನಾಯಕ ನಟನಾಗಿ ನಟಿಸುತ್ತಿರುವ ಆಕಾಶ್, ಬಿಗ್ ಬಾಸ್ ಸ್ಪರ್ಧಿಯಾಗಿ ಬಂದಿದ್ದ, ಗಾಯಕ ವಿಶ್ವನಾಥ್ ಹಾವೇರಿ. ತಮ್ಮ ಪಾತ್ರಕ್ಕೆ ತಕ್ಕ ಹಾಗೆ ನಟನೆಯನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ.
ಧಾರಾವಾಹಿ ಈಗಾಗಲೇ 25 ಸಂಚಿಕೆಯನ್ನು ದಾಟಿದ್ದು, ಕಥೆಯೂ ಚೆನ್ನಾಗಿದೆ, ನಟನಾ ಬಳಗವೂ ಸಖತ್ ಆಗಿದೆ. ಆದರೆ ನಾಯಕ ನಟ ಬಹಳ ಚಿಕ್ಕವನಂತೆ ಕಾಣಿಸುತ್ತಿದ್ದಾನೆ ಅನ್ನೋದು ವೀಕ್ಷಕರ ಕ್ಯಾತೆ. ಅದರಲ್ಲೂ ನಾಯಕಿಗೆ ಹೋಲಿಸಿದ್ರೆ ಇದೊಂದು ಬಾಲ್ಯ ವಿವಾಹದಂತೆ ಗೋಚರಿಸುತ್ತಿದೆ. ನಾಯಕಿಯ ಮುಂದೆ ನಾಯಕ ಚಿಕ್ಕ ತಮ್ಮನಂತೆ ಕಾಣಿಸುತ್ತಿದ್ದಾನೆ ಅನ್ನೋದು ವೀಕ್ಷಕರ ಅಳಲು.
ಇದನ್ನೂ ಓದಿ : ನಾನ್ಯಾಕೆ ರಾಜ್ ಶೆಟ್ಟಿಗೆ ಕೈ ಕೊಟ್ಟೆ : ಅದ್ಭುತ ಅವಕಾಶವನ್ನ ಕಳೆದುಕೊಂಡ್ರ ರಮ್ಯಾ
ಈ ಕಮೆಂಟ್ ಬೆನ್ನಲ್ಲೇ ಇದೀಗ ನಾಯಕನನ್ನು ಬದಲಾಯಿಸಲಾಗಿದೆ. ಸೀರಿಯಲ್ನಲ್ಲಿ ಹೀರೋ ಮದುವೆ ಸಿದ್ಧತೆ ಜೋರಾಗಿದೆ. ಹೀರೋ ಮದುವೆ ನಿರೀಕ್ಷೆಯಲ್ಲಿ ಜನರಿದ್ದಾರೆ, ಮದುವೆ ಬಳಿಕ ನಾಯಕ ನಟನೆ ಬದಲಾವಣೆಯಾಗಲಿದೆ ಅನ್ನುವ ಸುದ್ದಿಯ ನಡುವೆಯೇ ಅರಶಿನ ಶಾಸ್ತ್ರದ ಮಣೆಯಲ್ಲಿ ಹೊಸ ನಾಯಕ ಬಂದು ಕೂತಿದ್ದಾನೆ. ವಿಶ್ವನಾಥ್ ಬದಲಿಗೆ ಸೋಷಿಯಲ್ ಮೀಡಿಯಾ ಸ್ಟಾರ್ ವರುಣ್ ಆರಾಧ್ಯ ಬಂದು ಕೂತಿದ್ದಾರೆ.
ಪುಷ್ಪ ಜೊತೆ ಮದುವೆ ಆದ ಬಳಿಕ ನಾಯಕ ನಟನನ್ನು ಬದಲಾವಣೆ ಮಾಡಲಾಗುತ್ತದೆ ಅಂದುಕೊಂಡ್ರೆ ಪುಷ್ಫನ ಮದುವೆಗೆ ಹೊಸ ನಾಯಕ ಬಂದಿದ್ದಾನೆ.
ಇದನ್ನೂ ಓದಿ : ಮಾಜಿ ಶಾಸಕರಿಗೆ ವಿಷದ ಹಾವು ಕಡಿತ : ಸಂಜೀವ ಮಠಂದೂರು ಆಸ್ಪತ್ರೆಗೆ
ಇದೀಗ ವೀಕ್ಷಕರು ಹೊಸ ವರಸೆ, ಹಳೆ ನಾಯಕನೇ ಚೆನ್ನಾಗಿದ್ದ, ಹೊಸ ನಾಯಕ ಅದ್ಯಾಕೋ ಕಥೆ ಸೆಟ್ಟಾಗುತ್ತಿಲ್ಲ ಅಂತಾ. ಇದನ್ನು ನೋಡಿದ ಮತ್ತೆ ಕೆಲವರು ಅವನು ಇದ್ರೆ child ಅಂತೀರಾ. ಅವನು ಇಲ್ಲ ಅಂದ್ರೆ ನೀವೇ ಬನ್ನಿ ಅಂತೀರಾ. ಇದೇ ನಮ್ಮ ಪ್ರಪಂಚ ಅಂತಾ ಬರೆದುಕೊಂಡಿದ್ದಾರೆ.
Discussion about this post