ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ಗೋವಿಂದರಾದು ಜೌಟ್ ಅಟಿಕಾ ಗೋಲ್ಡ್ ಕಂಪನಿಯ ಆಟಿಕಾ ಬಾಬು ಇನ್
ಬೆಂಗಳೂರು : ಮುಂದಿನ ಬಾರಿ ಅಧಿಕಾರ ಹಿಡಿಯಲು ಹೊರಟಿರುವ ಕುಮಾರಸ್ವಾಮಿ ನಡೆಯನ್ನು ಗಮನಿಸಿದರೆ ಕಾಂಗ್ರೆಸ್ ಸಮೀಕ್ಷೆಯಂತೆ 25 ಸೀಟುಗಳಿಗೆ ತೃಪ್ತಿ ಪಟ್ಟುಕೊಳ್ಳುವ ಪರಿಸ್ಥಿತಿ ಬರಬಹುದು. ಈಗಾಗಲೇ ಜೆಡಿಎಸ್ ಪಕ್ಷಕ್ಕೊಂದು ಗೌರವ ತಂದುಕೊಟ್ಟಿದ್ದ ವೈಎಸ್ವಿ ದತ್ತಾ, ಶಿವಲಿಂಗೇಗೌಡ, ರಮೇಶ್ ಬಾಬು, ಜಿಟಿ ದೇವೇಗೌಡ, ಬಸವರಾಜ ಹೊರಟ್ಟಿ ಹೀಗೆ ಸಾಲು ಸಾಲು ನಾಯಕರು ಪಕ್ಷ ತೊರೆಯುತ್ತಿದ್ದಾರೆ.
ಅವೆಲ್ಲದರ ನಡುವೆ ಪಕ್ಷಕ್ಕೆ ಬರುವವರನ್ನು ಗಮನಿಸಿದರೆ ಕುಬೇರ ಕುಳಗಳಿಗೆ ಕುಮಾರಸ್ವಾಮಿ ಮಣೆ ಹಾಕುತ್ತಿದ್ದಾರೆ. ಹೋಗ್ಲಿ ಅವರ ಇಮೇಜ್ ಆದ್ರೂ ಚೆನ್ನಾಗಿದೆಯೇ ಅದೂ ಇಲ್ಲ.
ಗುರುವಾರ ಪಕ್ಷ ಸೇರಿರುವ ಅಟಿಕಾ ಗೋಲ್ಡ್ ಕಂಪನಿಯ ಅಟಿಕಾ ಬಾಬು ಅವರ ಮೇಲೂ ಸಾಕಷ್ಟು ಆರೋಪಗಳಿದೆ. ಕದ್ದ ಚಿನ್ನವನ್ನು ಅಡವಿಟ್ಟ ಆರೋಪ ಹೊತ್ತಿರುವ ಬಾಬು ನಿವಾಸಕ್ಕೆ ಸಿಸಿಬಿ ಕೂಡಾ ದಾಳಿ ನಡೆಸಿತ್ತು. ಅಷ್ಟು ಮಾತ್ರವಲ್ಲ ಅಟಿಕಾ ಗೋಲ್ಡ್ ಕಂಪನಿ ಮಾಡುವ ಕೆಲಸಗಳು ಕೂಡಾ ನಾಡಿಗೆ ಗೊತ್ತಿದೆ. ಹಾಗಿದ್ದ ಮೇಲೆ ಅದ್ಯಾಕೆ ಕುಮಾರಸ್ವಾಮಿ ಇವರನ್ನು ಪಕ್ಷಕ್ಕೆ ಸೇರಿಸಿಕೊಂಡರು ಅನ್ನುವ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಮಾತು.
ಇನ್ನು ಬಾಬು ಅವರನ್ನು ತುಮಕೂರು ನಗರದಲ್ಲಿ ಕಣಕ್ಕಿಳಿಸಲು ನಿರ್ಧರಿಸಲಾಗಿದೆ ಅನ್ನುವ ಮಾತುಗಳು ಕೂಡಾ ಕೇಳಿ ಬರುತ್ತಿದೆ. ಒಂದು ವೇಳೆ ಅದು ಹೌದಾದರೆ ಈ ಹಿಂದೆ ಬಿಜೆಪಿಗೆ ಪೈಪೋಟಿ ಕೊಟ್ಟಿದ್ದ ಗೋವಿಂದರಾಜು ಅವರಿಗೆ ಟಿಕೆಟ್ ತಪ್ಪೋದು ಗ್ಯಾರಂಟಿ.
ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ವಿರುದ್ಧ ಕೇವಲ 5 ಸಾವಿರ ಮತಗಳ ಅಂತರದಿಂದ ಗೋವಿಂದ ರಾಜು ಸೋಲು ಕಂಡಿದ್ದರು. ಈ ಬಾರಿ ಈಗಾಗಲೇ ಬಿಜೆಪಿ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ. ಹೀಗಿರುವ ಸಂದರ್ಭದಲ್ಲಿ ದಳಪತಿಗಳು ಒಂದಿಷ್ಟು ಪ್ರಯತ್ನ ಪಟ್ರೆ ತುಮಕೂರು ನಗರ ಕ್ಷೇತ್ರವನ್ನು ಜೆಡಿಎಸ್ ಗೆಲ್ಲಬಹುದಿತ್ತು. ಆದರೆ ಆಟಿಕಾ ಬಾಬು ಪ್ರವೇಶದಿಂದ ಜೆಡಿಎಸ್ ನಲ್ಲಿ ಕರಪತ್ರ ಹಂಚಲು ಕಾರ್ಯಕರ್ತರು ಸಿಗೋದು ಕೂಡಾ ಅನುಮಾನ
Discussion about this post