ಬೆಂಗಳೂರು : ನಮ್ಮ ವ್ಯವಸ್ಥೆಯ ಲೋಪವೇ ಬೊಕ್ಕಸಕ್ಕೆ ಸಾಕಷ್ಟು ಹೊರೆಯಾಗುತ್ತದೆ. ಮಾತ್ರವಲ್ಲದೆ ವ್ಯವಸ್ಥೆಯ ಅವ್ಯವಸ್ಥೆಗೂ ಕಾರಣವಾಗುತ್ತದೆ. ಏರ್ ಪೋರ್ಟ್ ಕಟ್ಟಿದ ಬಳಿಕ ಏರ್ ಪೋರ್ಟ್ ಸಂಪರ್ಕಿಸುವ ರಸ್ತೆ ನಿರ್ಮಿಸುವ ನಮ್ಮ ರಾಜಕಾರಣಿಗಳಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ.
ಈ ಬಿಎಂಟಿಸಿ ಇಲೆಕ್ಟ್ರಿಕ್ ಬಸ್ ಖರೀದಿಯಲ್ಲೂ ಹೀಗೆ ಆಗಿದೆ. ಇಲೆಕ್ಟ್ರಿಕ್ ಬಸ್ ಹಾದು ಹೋಗುವ ಡಿಪೋಗಳಲ್ಲಿ ಜಾರ್ಜಿಂಗ್ ಘಟಕ ಸ್ಥಾಪಿಸದ ಕರ್ಮಕ್ಕೆ ಇದೀಗ ಇಲೆಕ್ಟ್ರಿಕ್ ಬಸ್ ಗಳು ನಡು ಜಾರಿಯಲ್ಲೇ ನಿಲ್ಲುವಂತಾಗಿದೆ. ನಿಲ್ಲುವಂತಾಗಿದ್ದರೂ ಪರವಾಗಿಲ್ಲ, ಗುತ್ತಿಗೆ ಕೊಟ್ಟ ಕಂಪನಿಗಳಿಗೆ ಬಿಎಂಟಿಸಿ ಜನರ ತೆರಿಗೆ ದುಡ್ಡನ್ನು ಅನ್ಯಾಯವಾಗಿ ನೀಡುವಂತಾಗಿದೆ.
ಕೊರೋನಾ ಲಾಕ್ ಡೌನ್ ಕಾರಣದಿಂದ ಮೊದಲೇ ಬಿಎಂಟಿಸಿ ನೌಕರರ ಸಂಬಳಕ್ಕೆ ಪರದಾಡುತ್ತಿದೆ. ಹೀಗಿರುವ ಸಂದರ್ಭದಲ್ಲಿ ಈ ಎಲೆಕ್ಟ್ರಿಕ್ ಬಸ್ ಗಳ ಅಗತ್ಯವೇನಿತ್ತು. ಪರಿಸರ ಮಾಲಿನ್ಯ ತಡೆಯ ನೆಪದಲ್ಲಿ ಸಮ್ ಥಿಂಗ್ ರಾಂಗ್ ಅನ್ನುವುದು ಸ್ಪಷ್ಟ.
ನಗರದ ಪರಿಸರ ಮಾಲಿನ್ಯ ನಿಯಂತ್ರಣದ ಹೆಸರಿನಲ್ಲಿ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ ನಿಂದ 90 ಬಸ್ ಗಳನ್ನು ಗುತ್ತಿಗೆಗೆ ಪಡೆಯಲಾಗಿದೆ. ಒಪ್ಪಂದದ ಪ್ರಕಾರ 1.5 ಕೋಟಿ ಬೆಲೆಯ ಈ ಬಸ್ ಗಳಿಗೆ ಸ್ಮಾರ್ಟ್ ಸಿಟಿ ಯೋಜನೆಯಿಂದ 50 ಲಕ್ಷ ರೂ ನೀಡಲಾಗಿದೆ. ಇನ್ನುಳಿದಂತೆ ಪ್ರತೀ ಕಿಮೀ 51.67 ರೂಪಾಯಿ ನೀಡಬೇಕಾಗಿದೆ. ದಿನವೊಂದಕ್ಕೆ 180 ಕಿಮೀ ಈ ಬಸ್ ಗಳು ಓಡಾಡಬೇಕಿದ್ದು, ಪ್ರತೀ ನಿತ್ಯ 9,300 ರೂಪಾಯಿ ಒಂದು ಬಸ್ ಗೆ ನೀಡಬೇಕು ಅನ್ನುವುದು ಒಪ್ಪಂದ.
ದಿನಕ್ಕೆ ಒಂದು ಕಿಮೀ ಓಡಿದರೂ, 180 ಕಿಮೀ ಓಡಿದಷ್ಟೇ ಹಣವನ್ನು ಪಾವತಿಸಬೇಕಾಗಿದೆ. ಆದರೆ ಬೆಂಗಳೂರು ರಸ್ತೆಯ ಗುಣಮಟ್ಟ. ಅವೈಜ್ಞಾನಿಕ ಹಂಪ್ಸ್ ಗಳು ಹಾಗೂ ಅನುಭವಿ ಚಾಲಕರ ಕೊರತೆಯ ಕಾರಣದಿಂದ 80 ಕಿಮೀ ಓಡುವಷ್ಟರಲ್ಲಿ ಬಸ್ ಗಳು ನಿಂತು ಹೋಗುತ್ತಿದೆ. ಹೀಗಾಗಿ ನಿಗದಿತ ಪ್ರಮಾಣದ ಕಿಲೋ ಮೀಟರ್ ಸಂಚರಿಸದಿದ್ದರೂ ಒಪ್ಪಂದದ ಪ್ರಕಾರ ಹೆಚ್ಚುವರಿ ಹಣ ನೀಡೋದು ಅನಿವಾರ್ಯ.
ಇನ್ನು 80 ಕಿಮೀ ಓಡಿದ ಬಳಿಕ ನಿಂತ ಬಸ್ ಗಳನ್ನು ಜಾರ್ಜ್ ಮಾಡೋಣ ಅಂದ್ರೆ, ಬೆಂಗಳೂರು ನಗರದ ಬಿಎಂಟಿಸಿ ಘಟಕಗಳಲ್ಲಿ ಜಾರ್ಜಿಂಗ್ ಘಟಕಗಳಿಲ್ಲ. ಹಾಗಾದ್ರೆ ಪ್ರಾಯೋಗಿಕವಾಗಿ ಬಸ್ ಗಳು ಓಡಾಟ ನಡೆಸಿದ ಸಂದರ್ಭದಲ್ಲಿ ಈ ಸಮಸ್ಯೆಗಳನ್ನು ಕಾಣಿಸಿಕೊಳ್ಳಲಿಲ್ವ ಅನ್ನುವುದು ಈಗಿರುವ ಪ್ರಶ್ನೆ.
ಈ ನಡುವೆ ಈಗಾಗಲೇ NPCL ನಿಂದ BMTCಗೆ 90 ಬಸ್ ಗಳು ಬಂದಿದ್ದು, 28 ಬಸ್ ಗಳು ಮಾತ್ರ ರಸ್ತೆಯಲ್ಲಿ ಓಡಾಡುತ್ತಿದೆ. ಜಾರ್ಜಿಂಗ್ ಪಾಯಿಂಟ್ ಕೊರತೆಯ ಕಾರಣದಿಂದ ಉಳಿದ ಬಸ್ ಗಳನ್ನು ಕಾರ್ಯಾಗಾರದಲ್ಲೇ ನಿಲ್ಲಿಸಲಾಗಿದೆ.
Discussion about this post