ನವದೆಹಲಿ : ಅಡಿಕೆ ಬೆಳೆಗಾರರ ಹಿತಕಾಯಲು ನಾವು ಬದ್ಧ. ಅಡಿಕೆ ಬೆಳೆಗಾರರಿಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ ಅನ್ನುವುದು ಬಿಜೆಪಿ ಸಂಸದರ, ಶಾಸಕರ, ನಾಯಕರ ಹೇಳಿಕೆ. ಆದರೆ ಇದೀಗ ಇದೇ ಬಿಜೆಪಿ ಸಂಸದರೊಬ್ಬರು ಅಡಿಕೆಯನ್ನು ನಿಷೇಧಿಸಿ ಎಂದು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ಜಾರ್ಖಂಡ್ ನ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಪ್ರಧಾನಿಗೆ ಪತ್ರವನ್ನು ಬರೆದಿದ್ದು, ಅಡಿಕೆ ಸೇವನೆಯಿಂದ ಕ್ಯಾನ್ಸರ್ ಬರುತ್ತದೆ, ಅಡಿಕೆ ಸೇವನೆಯಿಂದ ಅಸ್ತಮಾ ರೋಗ ಅತೀಯಾಗುತ್ತದೆ, ಹೃದಯದ ರಕ್ತನಾಳಗಳಲ್ಲಿ ಮೇಲೆ ಪರಿಣಾಮ ಬೀರುತ್ತದೆ, ಅಡಿಕೆ ಸೇವಿಸಿದವರಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ದೂರಿರುವ ಅವರು ಹೀಗಾಗಿ ಮಾನವ ಬಳಕೆಗೆ ಅಡಿಕೆಯನ್ನು ನಿಷೇಧಿಸಿ, ಧಾರ್ಮಿಕ ವಿಧಿವಿಧಾನಗಳಿಗೆ ಮಾತ್ರ ಬಳಸಲು ಅನುಮತಿ ನೀಡಿ ಎಂದು ಆಗ್ರಹಿಸಿದ್ದಾರೆ.
ಆದರೆ ದುಬೆಯವರಿಗೆ ಮಾಹಿತಿ ಕೊರತೆ ಇರುವಂತಿದೆ. ಅಡಿಕೆ ಸೇವನೆಯಿಂದ ಕ್ಯಾನ್ಸರ್ ಬರುತ್ತದೆ ಅನ್ನುವುದು ಸುಳ್ಳು. ಬದಲಾಗಿ ಗುಟ್ಕಾ, ಇತ್ತೀಚೆಗೆ ಗುಟ್ಕಾ ಜೊತೆಗೆ ಹೊಗೆಸೊಪ್ಪು ಜಗಿಯುವುದರಿಂದ ಕ್ಯಾನ್ಸರ್ ಸೇರಿದಂತೆ ಇನ್ನಿತರ ರೋಗಗಳು ಬರುತ್ತದೆ ಅನ್ನುವುದು ಸತ್ಯ. ಹೀಗಾಗಿ ಅಡಿಕೆಯ ನಿಜವಾದ ಮೌಲ್ಯವನ್ನು ಅಡಿಕೆ ಬೆಳೆಗಾರರ ಹಿತ ಕಾಯಲು ಗುತ್ತಿಗೆ ಪಡೆದಿರುವ ಮಂದಿ ನಿಶಿಕಾಂತ್ ದುಬೆಯವರಿಗೆ ಅರಿವು ಮೂಡಿಸುವುದು ಉತ್ತಮ.
Prohibit Use Of Betel Nuts For Human Consumption: BJP MP To PM Modi – In a letter to the prime minister some time ago, Godda MP Nishikant Dubey listed out a number of harmful effects on human health resulting from consumption of betel nuts.
Discussion about this post