ಬೆಂಗಳೂರು : ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಬಿಟ್ ಕಾಯಿನ್ ದಂಧೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಜನರ ಹಾದಿ ತಪ್ಪಿಸುತ್ತಿದ್ದಾರೆ. ಎರಡೂ ಪಕ್ಷದ ಮುಖಂಡರು ಪರಸ್ಪರ ಆರೋಪ ಪ್ರತ್ಯಾರೋಪ ನಡೆಸುತ್ತಿದ್ದು ಕನ್ನಡಿಗರನ್ನು ಬಕ್ರ ಮಾಡುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿಯವರು ಇದ್ದಾರೆ ಅಂದಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ ಬಿಟ್ ಕಾಯಿನ್ ದಂಧೆಯಲ್ಲಿ ಕಾಂಗ್ರೆಸ್ನವರು ಇದ್ದಾರೆ ಅಂದಿದ್ದಾರೆ.
ಹಾಗಾದ್ರೆ ನಿಜವಾಗಿಯೂ ದಂಧೆಯಲ್ಲಿ ಇರುವ ಮಂದಿ ಯಾರು ಅನ್ನುವುದನ್ನು ಬಾಯಿ ಬಿಡಲು ಅದ್ಯಾವ ರಾಜಕಾರಣಿಯೂ ಸಿದ್ದವಿಲ್ಲ. ಹೋಗ್ಲಿ ಬಹಿರಂಗವಾಗಿ ಹೇಳಲು ಸಾಧ್ಯವಾಗಿಲ್ಲ ಅನ್ನುವುದಾದ್ರೆ ತನಿಖಾಧಿಕಾರಿ ಮುಂದೆಯೋ, ಕೋರ್ಟ್ ಮುಂದೆಯೋ ಸಾಕ್ಷಿಗಳನ್ನು ಅದ್ಯಾವುದನ್ನೂ ಮಾಡಲು ಇವರು ಸಿದ್ದವಿಲ್ಲ. ಆದರೆ ಬಿಟ್ ಕಾಯಿನ್ ದಂಧೆಯ ಪ್ರಮುಖ ಆರೋಪಿ ಶ್ರೀಕಿ ಯಾನೆ ಶ್ರೀಕೃಷ್ಣ ಜೈಲಿನಿಂದ ಬಿಡುಗಡೆಯಾಗಿರುವುದನ್ನು ನೋಡಿದರೆ ಬಿಟ್ ಕಾಯಿನ್ ತನಿಖೆ ಹಾದಿ ತಪ್ಪಿದೆಯೇ, ಆರೋಪಿಗಳನ್ನು ರಕ್ಷಿಸುವ ಕೆಲಸ ನಡೆಯುತ್ತದೆಯೇ ಅನ್ನುವ ಅನುಮಾನ ಶುರುವಾಗಿದೆ.
Discussion about this post