ಶನಿವಾರದ ಮಾತುಕತೆಯಲ್ಲಿ ಕಿಚ್ಚ ಸುದೀಪ್ ಬಹುತೇಕ ಎಲ್ಲಾ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅದರಲ್ಲೂ ದಿವ್ಯಾ ಉರುಡುಗ ಹಾಗೂ ಚಕ್ರವರ್ತಿ ಚಂದ್ರಚೂಡ್ ಅವರ ಬೆವರಿಳಿಸಿದ್ದ ಕಿಚ್ಚ ಸುದೀಪ್ ಮುಟ್ಟಿನೋಡಿಕೊಳ್ಳುವಂತೆ ಮಾತಿನ ಚಾಟಿ ಬೀಸಿದ್ದರು.
ಅದರಲ್ಲೂ ದಿವ್ಯಾ ಉರುಡುಗ ಅರವಿಂದನಿಗೆ ಸಹಾಯವಾಗ್ಲಿ ಎಂದು ಆಟ ಆಡಿರುವುದನ್ನು ಖಂಡಿಸಿದ್ದ ಸುದೀಪ್, ಅದು ಸರಿಯಲ್ಲ ಎಂದು ಹೇಳಿದ್ದರು. ಸುದೀಪ್ ಮಾತಿನಿಂದ ಇದೀಗ ಚಂದ್ರಚೂಡ್ ಹಾಗೂ ಉರುಡುಗ ಎಚ್ಚೆತ್ತುಕೊಂಡಿರುವುದು ಸೋಮವಾರದ ಟಾಸ್ಕ್ ನಲ್ಲಿ ಎದ್ದು ಕಾಣಿಸಿದೆ.
ಸೋಮವಾರ ಬಿಗ್ ಬಾಸ್ ನೀಡಿದ್ದ ಟಾಸ್ಕ್ ನಲ್ಲಿ ಅರವಿಂದ್ ಹಾಗೂ ಉರುಡುಗ ಪರಸ್ಪರ ಎದುರಾಳಿ ಟೀಂ ಸೇರಿದ್ದರು. ಇದನ್ನು ಸಮರ್ಥವಾಗಿ ಬಳಸಿಕೊಂಡ ಮಂಜು ಪಾವಗಡ ಅರವಿಂದನನ್ನು ಸೋಲಿಸಲು ದಿವ್ಯಾ ಉರುಡುಗ ಅವರನ್ನೇ ಗುರಾಣಿ ಮಾಡಿಕೊಂಡಿದ್ದರು.
ಆದರೆ ಸ್ಟಾರ್ ಅಂಟಿಸುವ ಭರದಲ್ಲಿ ಅರವಿಂದ ಅಬ್ಬರಿಸಿದ ರೀತಿಯಿಂದ ದಿವ್ಯಾ ಉರುಡುಗ ಗಂಭೀರವಾಗಿ ಗಾಯಮಾಡಿಕೊಂಡಿದ್ದಾರೆ. ಉರುಡುಗ ಅವರನ್ನು ಅಟ್ಟಿಸಿಕೊಂಡ ಬಂದ ಅರವಿಂದ್ ಕಡೆಯಿಂದ ರಕ್ಷಿಸಿಕೊಳ್ಳಲು ಚಂದ್ರಚೂಡ್ ಪ್ರಯತ್ನಿಸುವ ವೇಳೆ, ಅರವಿಂದ ಬಲಪ್ರಯೋಗಕ್ಕೆ ಮುಂದಾಗಿದ್ದಾರೆ. ಈ ವೇಳೆ ಅರವಿಂದ್ ಬಲ ಹೆಚ್ಚಾದ ಕಾರಣ ಉರುಡುಗ ಗ್ಲಾಸ್ ಗೋಡೆಗೆ ತಲೆ ಬಡಿದುಕೊಂಡಿದ್ದಾರೆ. ಈ ವೇಳೆ ದಿವ್ಯಾ ಕೈಗೆ ಗಂಭೀರ ಗಾಯವಾಗಿದ್ದು, ರಕ್ತವೂ ಹರಿದಿದೆ. ತಕ್ಷಣ ವೈದ್ಯರು ಚಿಕಿತ್ಸೆಯನ್ನು ನೀಡಿದ್ದು ಇದೀಗ ಸುಧಾರಿಸಿಕೊಳ್ಳುತ್ತಿದ್ದಾರೆ.
ಈ ಘಟನೆಯನ್ನು ಸೂಕ್ಷ್ಮವಾಗಿ ನೋಡಿದರೆ ಅರವಿಂದ್ ಅವರ ಆಗ್ರೆಸಿವ್ ಆಟವೇ ಈ ದುರಂತಕ್ಕೆ ಕಾರಣ ಅನ್ನುವುದು ಸ್ಪಷ್ಟ. ಇನ್ನು ಈ ಘಟನೆಯ ಬಳಿಕ ಅರವಿಂದ ಹಾಗೂ ದಿವ್ಯಾ ಅವರ ಮುದ್ದಾಟ ನೋಡಿದರೆ ಇದೊಂದು ಫ್ಯಾಮಿಲಿ ಶೋನ ಅನ್ನುವ ಪ್ರಶ್ನೆ ಮೂಡಿದ್ದು ಸುಳ್ಳಲ್ಲ. ಇವರಿಬ್ಬರು ಪರಸ್ಪರ ಪ್ರೀತಿಸುವ ಶೈಲಿ ನೋಡಿದರೆ ಮನೆ ಮಂದಿಯೆಲ್ಲಾ ಜೊತೆಗೆ ಕೂತು ಶೋ ನೋಡಲು ಸಾಧ್ಯವೇ ಇಲ್ಲ.
Discussion about this post