ಬಿಗ್ ಬಾಸ್ ಮನೆಯ ಅಟ ಇದೀಗ ರೊಚ್ಚಿಗೆದ್ದಿದೆ. ಅದರಲ್ಲೂ ಚಂದ್ರಚೂಡ ಬಂದ ಮೇಲೆ ಪ್ರಶಾಂತ್ ಸಂಬರಗಿ ಆಟದ ಶೈಲಿಯೇ ಬದಲಾಗಿದೆ. ಇಷ್ಟು ದಿನಗಳ ಕಾಲ ಹಿಂದುಗಡೆಯಿಂದ ಕೆಣಕುತ್ತಿದ್ದವರು ಸಹ ಸ್ಪರ್ಧಿಗಳ ಮುಂದೆಯೇ ನಾಲಗೆ ಹರಿ ಬಿಡುತ್ತಿದ್ದಾರೆ.
ಮೊನ್ನೆ ಮೊನ್ನೆ ಅರವಿಂದ ಹಾಗೂ ದಿವ್ಯಾ ಉರುಡುಗ ಕಡೆಯಿಂದ ಉಗಿಸಿಕೊಂಡಿದ್ದ ಸಂಬರಗಿ ಇಂದು ದಿವ್ಯಾ ಸುರೇಶ್ ಮತ್ತು ಮಂಜು ಕಡೆಯಿಂದ ಉಗಿಸಿಕೊಂಡಿದ್ದಾರೆ. ಅರವಿಂದನ ಗರ್ಲ್ ಫ್ರೆಂಡ್ ದಿವ್ಯಾ ಉರುಡುಗ ಎಂದು ಹೇಳಿದ್ದ ಕಾರಣಕ್ಕೆ ಸಂಬರಗಿ ಪೆಟ್ಟು ತಿನ್ನುವುದೊಂದು ಬಾಕಿ ಇತ್ತು.
ಇಂದು ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ, ಮಂಜು ಹಾಗೂ ಸಂಬರಗಿಯ ನಡುವಿನ ಕಿತ್ತಾಟವನ್ನು ತೋರಿಸಲಾಗಿದೆ. ಸ್ವಿಮ್ಮಿಂಗ್ ಪೂಲ್ನಲ್ಲಿ ಚಕ್ರವರ್ತಿ ಚಂದ್ರಚೂಡ ಹಾಗೂ ಪ್ರಶಾಂತ್ ಸಂಬರಗಿ ಇರುತ್ತಾರೆ. ಈ ವೇಳೆ ಅವರಿಬ್ಬರು ಹಾಡು ಹಾಡುತ್ತಿದ್ರೆ ಗಾರ್ಡನ್ ಏರಿಯಾದಲ್ಲಿ ಕುಳಿತಿದ್ದ ದಿವ್ಯಾ ಸುರೇಶ್ ಸ್ವಲ್ಪ ಸೌಂಡ್ ಕಡಿಮೆ ಇದ್ದರೆ ಚೆಂದ ಅನ್ನುತ್ತಾರೆ.
ಇದಕ್ಕೆ ತಿರುಗೇಟು ಕೊಟ್ಟ ಚಂದ್ರಚೂಡ ಕ್ಯಾಪ್ಟನ್ ಬೆಡ್ರೂಮ್ನಲ್ಲಿ ಗಲಾಟೆ ಮಾಡಿದರೆ ಹೇಳಬೇಕು ಎಂದು ಹಳೆಯ ಘಟನೆಯೊಂದನ್ನು ಉಲ್ಲೇಖಿಸಿದ್ದಾರೆ. ಅಷ್ಟೇ ಆಗಿದ್ರೆ ಮುಗಿದಿರೋದು, ಈ ವೇಳೆ ಈಗ ನಾನು ಏನಾದರೂ ಮಾತನಾಡಿದ್ನಾ ಎಂದು ಮಂಜು ಪಾವಗಡ ಹೇಳಿದ್ದಾರೆ.
ಇದೇ ವೇಳೆ ಮೂಗು ತೂರಿಸಲು ಬಂದ ಪ್ರಶಾಂತ್ ಸಂಬರಗಿ ನಿನ್ನ ಡವ್ಗೆ ಹೇಳಬೇಕಿತ್ತು ಎಂದು ನಾಲಗೆ ಹರಿ ಬಿಡುತ್ತಾರೆ. ಇದರಿಂದ ರೊಚ್ಚಿಗೆದ್ದ ದಿವ್ಯಾ ಸುರೇಶ್ ಡವ್ವು-ಗಿವ್ವು ಅಂತ ಹೇಳೋದಕ್ಕೆ ನಿಮಗೆ ಯಾವ ರೈಟ್ಸ್ ಇಲ್ಲ ಅನ್ನುತ್ತಾರೆ. ಇದಕ್ಕೆ ಪ್ರತಿಯಾಗಿ ಡವ್ ಅಂತಾದರೂ ಹೇಳುತ್ತೇನೆ. ಲವ್ವರ್ ಅಂತನೂ ಅಂತಿನಿ ಅನ್ನುತ್ತಾರೆ.
ಈ ವೇಳೆ ಮಂಜು ಮುಂಚೆನೇ ಹೇಳಿದ್ದೀನಿ ಮಾವ, ಏನಿದ್ರೂ ಡೈರೆಕ್ಟ್ ಆಗಿ ನನಗೆ ಹೇಳು ಅಂತಾ, ಇದರಿಂದ ಕೆರಳಿದ ಸಂಬರಗಿ, ನನ್ನ ಮಾವ ಅಂತಾ ಕರೀಬೇಡ, ನಾನೇನು ಬರೆದುಕೊಟ್ಟಿದ್ದೀನಾ, ಎಂದು ನಿನ್ನ ಅಪ್ಪ ಅನ್ನುವ ಪದ ಪ್ರಯೋಗಿಸುತ್ತಾರೆ.
ಈ ಮಧ್ಯೆ ಅಪ್ಪನ ವಿಷಯ ಬಂದಾಗ, ಅಪ್ಪನ ಬಗ್ಗೆ ಮಾತನಾಡಬೇಡ.. ಸರಿ ಇರಲ್ಲ. ನೀನ್ಯಾವನೋ ನನ್ನ ಅಪ್ಪನ ಬಗ್ಗೆ ಮಾತನಾಡೋಕೆ ಎಂದು ಮಂಜು ಗುಡುಗಿದ್ದಾರೆ.
ಇನ್ನು ಈ ಪ್ರೋಮೋ ನೋಡಿದ ಬಿಗ್ ಬಾಸ್ ಅಭಿಮಾನಿಯೊಬ್ಬರು ಈ ಲವ್ ಬರ್ಡ್ ಗಳ ಹುಚ್ಚಾಟ ನೋಡಿ ನೋಡಿ ಸಂಬರಗಿ ಅರೆ ಹುಚ್ಚ ಆಗಿದ್ದಾನೆ ಎಂದು ಕಮೆಂಟ್ ಬೇರೆ ಮಾಡಿದ್ದಾರೆ.
ಒಟ್ಟಿನಲ್ಲಿ ಪ್ರಶಾಂತ್ ಸಂಬರಗಿ ಮನೆಯೊಳಗಡೆ ಸಿಕ್ಕಾಪಟ್ಟೆ ಯಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಸಂಬಂಧಗಳ ನಡುವೆ ಬೆಲೆಯೇ ಗೊತ್ತಿಲ್ಲ ಅನ್ನುವಂತಿದೆ ಅವರ ವರ್ತನೆ.
Discussion about this post