ಬಿಗ್ ಬಾಸ್ ಸೀಸನ್ 8 ರಲ್ಲಿ ಅತೀ ಹೆಚ್ಚು ಕೇಳಿ ಬಂದ ಶಬ್ಧ ಅಂದ್ರೆ ಅದು ಗುಂಪುಗಾರಿಕೆ. ಅದರಲ್ಲೂ ಈ ಶಬ್ಧವನ್ನು ಅತ್ಯಂತ ಹೆಚ್ಚು ಸಲ ಪ್ರಯೋಗಿಸಿದ್ದು ಪ್ರಶಾಂತ್ ಸಂಬರಗಿ. ಮನೆಯಲ್ಲಿ ನಡೆಯೋ ಪ್ರತಿಯೊಂದು ಬೆಳವಣಿಗೆಗಳಿಗೂ ಸಂಬರಗಿ ಗುಂಪುಗಾರಿಕೆಯ ಬಣ್ಣ ಕಟ್ಟುತ್ತಿದ್ದರು. ಅವರಿಗೆ ವಿರೋಧ ಅನ್ನಿಸುವ ಯಾವುದೇ ನಡೆದರೂ ಅದಕ್ಕೆ ಅವರು ಗುಂಪುಗಾರಿಕೆ ಎಂದೇ ಕರೆಯುತ್ತಿದ್ದರು.
ಇದೀಗ ಬಿಗ್ ಬಾಸ್ ಕಾರ್ಯಕ್ರಮ ಮುಗಿದು ಸ್ಪರ್ಧಿಗಳು ಮನೆಗೆ ಬಂದರೂ ಗುಂಪುಗಾರಿಕೆ ಮುಂದುವರಿದಿದೆಯಂತೆ. ಇದನ್ನು ಪ್ರಶಾಂತ್ ಅವರೇ ಬಹಿರಂಗಪಡಿಸಿದ್ದು, ಅದಕ್ಕೆ ಸಾಕ್ಷಿಗಳನ್ನು ಬೇರೆ ಕೊಟ್ಟಿದ್ದಾರೆ.
ಬಿಗ್ ಬಾಸ್ ಮುಗಿದ ಬಳಿ ಕಲರ್ಸ್ ಕನ್ನಡ ವಾಹಿನಿಯ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಸ್ಪರ್ಧಿಗಳ ನೇರ ಪ್ರಸಾರ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಹಾಗೇ ಶನಿವಾರ ಪ್ರಿಯಾಂಕ ತಿಮ್ಮೇಶ್, ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಚಂದಚೂಡ್ ಇನ್ಸ್ಟಾದಲ್ಲಿ ಲೈವ್ ಬಂದಿದ್ದರು.
ಈ ವೇಳೆ ಸಂಬರಗಿ, ನಮ್ಮನ್ನು ಇಲ್ಲಿ ಒಂದು ಗ್ಯಾಂಗ್ ಮಾಡಿ ಹಾಕಿದ್ದಾರೆ ಅಂದಿದ್ದಾರೆ. ಅದಕ್ಕೆ ಚಂದ್ರಚೂಡ್ ಯಾವ ಗ್ಯಾಂಗ್ ಎಂದು ಪ್ರಶ್ನಿಸಿದ್ದರು, ಅದಕ್ಕೆ ಉತ್ತರಿಸಿದ್ದ ಪ್ರಶಾಂತ್ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಲಾಗಿದೆ. ಅದರಲ್ಲಿ ನಾನು ಹಾಗೂ ನೀನು ಇಲ್ಲ ಇದೇ ಗುಂಪುಗಾರಿಕೆ ಅಂದಿದ್ದಾರೆ. ಆಗ ಮಧ್ಯಪ್ರವೇಶಿಸಿದ ಪ್ರಿಯಾಂಕ ತಿಮ್ಮೇಶ್ ಆ ಗ್ರೂಪ್ ನಲ್ಲಿ ನಾನೂ ಇಲ್ಲ, ನಾನು ಎಂದಿಗೂ ಸಿಂಗಲ್ ಅಂದಿದ್ದಾರೆ.
ಅಲ್ಲಿಗೆ ಒಗ್ಗರಣೆ ಹಾಕಿದ ಚಂದ್ರಚೂಡ್ ಎರಡೆರಡು ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಆಗಿದ್ದು, ಎರಡೂ ಗ್ರೂಪ್ ನಲ್ಲೂ ನಮ್ಮನ್ನು ಸೇರಿಸಬಾರದು ಎಂದು ಚರ್ಚೆ ನಡೆದಿದೆಯಂತೆ ಅಂದಿದ್ದಾರೆ.
Discussion about this post