ಬಿಗ್ ಬಾಸ್ ಸೀಸನ್ 8 ರ ಸೆಕೆಂಡ್ ಇನ್ನಿಂಗ್ 30 ರಿಂದ 40 ದಿನಗಳ ಕಾಲ ಪ್ರಸಾರವಾಗಲಿದೆ ಅನ್ನಲಾಗಿತ್ತು. ಮುಂದಿನ ವಾರಕ್ಕೆ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭವಾಗಿ ಭರ್ತಿ ಒಂದು ತಿಂಗಳಾಗುತ್ತದೆ. ಮಹಾಮನೆಯ ಪರಿಸ್ಥಿತಿ ನೋಡಿದರೆ ಮುಂದಿನ ವಾರ ಬಿಗ್ ಬಾಸ್ ಫೈನಲ್ ನಡೆಯೋದು ಅನುಮಾನ.
ಬಿಗ್ ಬಾಸ್ ಮನೆಯಲ್ಲಿ ಇನ್ನೂ 8 ಸ್ಪರ್ಧಿಗಳಿದ್ದು, ಮುಂದಿನ ವಾರವೇ ಫೈನಲ್ ಆಗಬೇಕಾದರೆ ಇಷ್ಟು ಹೊತ್ತಿಗೆ 8 ಜನರ ಪೈಕಿ ಮೂರು ಜನರ ಎಲಿಮಿನೇಷನ್ ಆಗಬೇಕಿತ್ತು. ಹೀಗಾಗಿಯೇ ಮತ್ತೆ ಒಂದು ತಿಂಗಳ ಕಾಲ ಬಿಗ್ ಬಾಸ್ ಪ್ರಸಾರವಾಗುವ ಸಾಧ್ಯತೆಗಳಿದೆ ಎನ್ನಲಾಗಿದೆ.
ಫೈನಲ್ ಗೆ ಟಾಪ್ 5 ಸ್ಪರ್ಧಿಗಳು ಪ್ರವೇಶ ಪಡೆಯಲಿದ್ದು, ಅದರಲ್ಲಿ ಮತ್ತೆ ಇಬ್ಬರನ್ನು ಎಲಿಮಿನೇಷನ್ ಮಾಡಲಾಗುತ್ತದೆ. ಕೊನೆಯದಾಗಿ ಮೂರು ಜನ ಉಳಿದುಕೊಂಡು, ಆ ಪೈಕಿ ಇಬ್ಬರು ಸುದೀಪ್ ಜೊತೆ ಬಿಗ್ ಬಾಸ್ ಫೈನಲ್ ವೇದಿಕೆ ಪ್ರವೇಶಿಸುತ್ತಾರೆ. ಹೀಗಾಗಿ ಇನ್ನೊಂದು ವಾರದಲ್ಲಿ 5 ಜನರನ್ನು ಎಲಿಮಿನೇಷನ್ ಮಾಡೋದು ಕನಸಿನ ಮಾತು. ಹಾಗಂತ ಡಬಲ್ ಎಲಿಮಿನೇಷನ್ ನಡೆಯುವ ಸಾಧ್ಯತೆಗಳು ಕೂಡಾ ಇಲ್ಲ.
ಇನ್ನು ಈ ಬಗ್ಗೆ ಪತ್ರಿಕೆಯೊಂದಕ್ಕೆ ಕಲರ್ಸ್ ಕನ್ನಡದ ಮುಖ್ಯಸ್ಥ ಪರಮೇಶ್ವರ ಗುಡ್ಕಲ್ ಪ್ರತಿಕ್ರಿಯಿಸಿದ್ದು, ಶೀಘ್ರದಲ್ಲೇ ವಿವರ ನೀಡಲಾಗುವುದು ಅಂದಿದ್ದಾರೆ.
Discussion about this post