ಬಿಗ್ ಬಾಸ್ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್ ಅದ್ಭುತವಾಗಿ ಮೂಡಿ ಬರುತ್ತಿದೆ. ಬರೀ ಜಗಳಗಳೇ ನಡೆಯುತ್ತಿರುವುದರಿಂದ ಟಿ.ಆರ್.ಪಿಗಂತು ತೊಂದರೆಯಿಲ್ಲ.
ಅದರಲ್ಲೂ ಚಂದ್ರಚೂಡ್ ಮತ್ತು ಮಂಜು ನಡುವಿನ ಕಿತ್ತಾಟದ ಬಳಿಕ, ಮನೆಯಲ್ಲಿ ಇರುವ ಸದಸ್ಯರೆಲ್ಲರೂ ಕಿತ್ತಾಟಕ್ಕೆ ಕಾಯುತ್ತಿರುತ್ತಾರೆ. ಇನ್ನು ಬಾಡಿಗಾರ್ಡ್ಸ್ ಗೆಳೆಯರಂತು ಬೆಳಗಾದ್ರೆ ಸಾಕು ಯಾರೊಂದಿಗೆ ಜಗಳ ಕಾಯೋಣ ಎಂದೇ ನೋಡುತ್ತಿರುತ್ತಾರೆ. ಈ ಮೂಲಕ ಕ್ಯಾಮಾರದಲ್ಲಿ ಕಾಣಿಸಿಕೊಳ್ಳುವ ಹುಚ್ಚು ಅವರಿಗೆ
ಈ ನಡುವೆ ಮಂಗಳವಾರ ಪ್ರಸಾರವಾದ ಸಂಚಿಕೆಯಲ್ಲಿ ಅರವಿಂದ್ ಹಾಗೂ ನಿಧಿ ಸುಬ್ಬಯ್ಯ ಕಿತ್ತಾಡಿಕೊಂಡಿದ್ದಾರೆ. ಹಾಗೇ ನೋಡಿದರೆ ಇವರಿಬ್ಬರ ಕಿತ್ತಾಟ ಇದು ಮೊದಲಲ್ಲ, ಮೊದಲ ಇನ್ನಿಂಗ್ಸ್ ನ ಎರಡನೇ ವಾರ ಟಾಸ್ಕ್ ಸಂದರ್ಭದಲ್ಲಿ ಹೊಲಸು ನಿಧಿ ಅನ್ನುವ ಶಬ್ಧ ದೊಡ್ಡರಂಪಾಟ ಸೃಷ್ಟಿಸಿತ್ತು. ಆದರೆ ಅರವಿಂದ್ ಅವತ್ತು ಹೇಳಿದ್ದು ಹೊಲಸು ನಿದ್ದೆ ಅಂತಾ, ಅದನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದ ನಿಧಿ ಸುಬ್ಬಯ್ಯ ರಾಡಿ ರಂಪಾಟ ಮಾಡಿದ್ದರು.
ಮಂಗಳವಾರ ಮನೆಯಲ್ಲಿ ಟಿಶ್ಯೂ ರೋಲ್ ನಡೆಯೋ ಸಂದರ್ಭದಲ್ಲಿ ಅರವಿಂದ್ ಹಾಗೂ ಮಂಜು ನಡುವೆ ಮಾತಿಗೆ ಮಾತು ಬೆಳೆದಿತ್ತು. ಇದು ಆಟ ಮುಗಿದ ಮೇಲೂ ಮುಂದುವರಿದಿತ್ತು.
ಈ ವೇಳೆ ಅರವಿಂದ್, ನಿಧಿ ಸುಬ್ಬಯ್ಯ ಅವರ ಬಗ್ಗೆ ಬಳಸಿದ ಒಂದು ಪದ ನಿಧಿ ಅವರಿಗೆ ಸಿಟ್ಟು ತರಿಸಿದೆ.ಇದಾದ ಬಳಿಕ ಅರವಿಂದ್ ಅವರು ಮಾತು ಜಾರಿದ ಕಾರಣಕ್ಕೆ ನಿಧಿ ಬಳಿ ಬಂದು ಕ್ಷಮೆ ಕೇಳಿದ್ದಾರೆ.
ಆದರೆ ನಿಧಿ ಕ್ಷಮೆ ಸ್ವೀಕರಿಸು ಸ್ಥಿತಿಯಲ್ಲಿ ಇರಲಿಲ್ಲ, ಹೀಗಾಗಿ ಕಿಡಿ ಕಾರಿದ ನಿಧಿ ಪ್ರತೀ ಸಲ ಮಾತು ಜಾರಿ ನಂತರ ಬಂದು ಕ್ಷಮೆ ಕೇಳುತ್ತೀಯಾ. ನೀನು ನಿಜವಾದ ಕ್ರೀಡಾಪಟುವಲ್ಲ. ನೀನು ಒಬ್ಬ ಲೂಸರ್. ನಿನಗೆ ಕ್ರೀಡಾ ಸ್ಪೂತಿ ಇಲ್ಲ ಅಂದಿದ್ದಾರೆ.
ಇದಾದ ಬಳಿಕ ಪರಿಸ್ಥಿತಿ ಸರಿ ಮಾಡಲು ಶುಭಾ ಪೂಂಜಾ ಮುಂದಾಗಿದ್ದಾರೆ, ಈ ಘಟನೆಯ ಬಗ್ಗೆ ಅರವಿಂದ್ ಬಳಿ ಹೋಗಿದ್ದಾರೆ.ಆಗ ಅರವಿಂದ್, ಅವಳು ದೊಡ್ಡ ಫಿಗರ್ ಆದರೆ ನಾನು ಅಷ್ಟೆ ಎಂದು ನಿಧಿ ಬಗ್ಗೆ ಖಾರವಾಗಿ ಹೇಳಿದ್ದಾರೆ.
Discussion about this post