ಬಿಗ್ ಬಾಸ್ ಸೀಸನ್ 8ರ ಫೈನಲ್ ಗೆ ಇನ್ನು ಕೆಲವೇ ದಿನಗಳು ಬಾಕಿ. ಇಂದು ಸುದೀಪ್ ಕೊನೆಯ ವಾರಾಂತ್ಯದ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಮುಂದಿನ ಶನಿವಾರ ಸುದೀಪ್ ಫಿನಾಲೆ ವೇದಿಕೆಯಲ್ಲಿರುತ್ತಾರೆ.
ಪ್ರಸ್ತುತ ಮನೆಯಲ್ಲಿ 8 ಸ್ಪರ್ಧಿಗಳಿದ್ದು, ಟಾಪ್ 5 ಸ್ಪರ್ಧಿಗಳು ಮುಂದಿನ ವಾರ ಫೈನಲ್ ಗೆ ಸೆಣಸಾಡಲಿದ್ದಾರೆ. ಹೀಗಾಗಿ ಈ ವಾರ ಒಟ್ಟು ಮೂರು ಸ್ಪರ್ಧಿಗಳು ಮನೆಯಿಂದ ಹೊರಗೆ ಹೋಗಲಿದ್ದಾರೆ. ವೀಕ್ಷಕರ ಅಭಿಪ್ರಾಯದ ಪ್ರಕಾರ ಅರವಿಂದ್, ಮಂಜು, ವೈಷ್ಣವಿ, ದಿವ್ಯಾ ಉರುಡುಗ ಮತ್ತು ಪ್ರಶಾಂತ್ ಸಂಬರಗಿ ಟಾಪ್ 5 ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿದೆ.
ಟಾಪ್ 3ಯಲ್ಲಿ ಮಂಜು, ಅರವಿಂದ್ ಹಾಗೂ ವೈಷ್ಣವಿ ಉಳಿದುಕೊಳ್ಳುವುದು ಪಕ್ಕಾ ಆಗಿದ್ದು, ಮಂಜು ಮತ್ತು ಅರವಿಂದ್ ಬಿಗ್ ಬಾಸ್ ಫೈನಲ್ ವೇದಿಕೆ ಹತ್ತಲಿದ್ದಾರೆ. ಕಳೆದ ಬಾರಿ ಪ್ರಶಾಂತ್ ಸಂಬರಗಿ ವಿರುದ್ಧ ವೈಷ್ಣವಿ ಕೈ ಎತ್ತಿದ ಕಾರಣ ಫೈನಲ್ ವೇದಿಕೆ ಹತ್ತುವ ಅವಕಾಶ ಕಳೆದುಕೊಳ್ಳುತ್ತಾರೆ ಅನ್ನಲಾಗಿದೆ.
ಇನ್ನು ಬಿಗ್ ಬಾಸ್ ಸೀಸನ್ 8ರ ಕಪ್ ಎತ್ತುವವರು ಯಾರು ಅಂದ್ರೆ ಅರವಿಂದ್ ಮತ್ತು ಮಂಜು ಅಭಿಮಾನಿಗಳು ತಮ್ಮದೇ ವಾದ ಮಾಡುತ್ತಿದ್ದಾರೆ. ಆದರೆ ಮಂಜು ಗೆಲುವಿನ ಸಾಧ್ಯತೆಗಳು ಹೆಚ್ಚಿದೆ. ಅರವಿಂದ್ ಉರುಡುಗ ಜೊತೆಗೆ ತುಂಬಾ ಸುತ್ತಾಡುತ್ತಿದ್ದಾರೆ. ಜೊತೆಗೆ ಟಾಸ್ಕ್ ಬಿಟ್ರೆ ಅವರು ವೀಕ್ಷಕರನ್ನು ರಂಜಿಸಿಲ್ಲ. ಆದರೆ ಮಂಜು ಹಾಗಲ್ಲ, ವೀಕ್ಷಕರನ್ನು ಅದ್ಭುತವಾಗಿ ರಂಜಿಸಿರುವ ಅವರು ಟಾಸ್ಕ್ ಗಳಲ್ಲೂ ಅಬ್ಬರಿಸಿದ್ದಾರೆ. ಜೊತೆಗೆ ಮಂಜು ಅವರಿಗೆ ಗೆಲುವಿನ ಅವಶ್ಯಕತೆಯೂ ತುಂಬಾ ಇದೆ. ಭವಿಷ್ಯದ ದೃಷ್ಟಿಯಲ್ಲಿ ಈ ಗೆಲವು ಅವರಿಗೆ ಹೊಸ ದಾರಿಯನ್ನು ತೋರಿಸಲಿದೆ. ಸಿಗುವ 50 ಲಕ್ಷ ಅವರ ಸಂಕಷ್ಟಕ್ಕೂ ಪರಿಹಾರ ನೀಡಲಿದೆ.
Discussion about this post