ಬಿಗ್ ಬಾಸ್ ಸೀಸನ್ 8 ರ ಸೆಕೆಂಡ್ ಇನ್ನಿಂಗ್ಸ್ ಮುಕ್ತಾಯಕ್ಕೆ ಇನ್ನು ಕೆಲವೇ ವಾರಗಳು ಬಾಕಿ. ಈ ನಡುವೆ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ನಿಧಿ ಸುಬ್ಬಯ್ಯ, ರಘು ಹೊರ ಹೋಗಿದ್ದಾರೆ.
ಈ ವಾರ ಪ್ರಿಯಾಂಕ ತಿಮ್ಮೇಶ್ ಮನೆಯಿಂದ ಹೊರ ಬಂದಿದ್ದಾರೆ ಅನ್ನುವ ಸುದ್ದಿ ಲಭಿಸಿದೆ. ಈ ಮೂಲಕ ಮನೆಯಿಂದ ಹೊರ ಬರ್ತಾರೆ ಅಂದುಕೊಂಡಿದ್ದ ವೈಷ್ಣವಿ ಗೌಡ ಸೇಫ್ ಆಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಕಿತ್ತಾಟಗಳು ನಡೆಯುತ್ತಿದೆ, ಆ ಎಲ್ಲಾ ಕಿತ್ತಾಟಗಳಿಂದ ದೂರವಿರುವ ವೈಷ್ಣವಿ ಎಲ್ಲರ ಜೊತೆಗೂ ಹೊಂದಿಕೊಂಡು ಹೋಗುತ್ತಿದ್ದಾರೆ. ಮಾತ್ರವಲ್ಲದೆ ಬಿಗ್ ಬಾಸ್ ವೀಕ್ಷಕರಿಗೂ ವೈಷ್ಣವಿ ಆಟದ ವೈಖರಿ ಇಷ್ಟವಾಗಿದ್ದು ಪ್ರತೀ ಸಲ ನಾಮಿನೇಷನ್ ಆದಾಗ್ಲೂ ಸೇವ್ ಮಾಡುತ್ತಿದ್ದಾರೆ.
ಜೊತೆಗೆ ಅಗ್ನಿ ಸಾಕ್ಷಿ ಸೀರಿಯಲ್ ಮೂಲಕ ವೈಷ್ಣವಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಹೀಗಾಗಿ ನಾಮಿನೇಷನ್ ನಿಂದ ಪಾರಾಗುವುದು ಸುಲಭವಾಗುತ್ತಿದೆ.
Discussion about this post