ಬಿಗ್ ಬಾಸ್ ( Bigg Boss Kannada Ott) ಮನೆಯಲ್ಲಿ ಸೋನು ಗೌಡ ಮತ್ತು ಆರ್ಯವರ್ಧನ್ ವಿರುದ್ಧ ಅಸಹನೆ ಪ್ರಾರಂಭವಾಗಿದೆ
Bigg Boss Kannada Ottಯ ಮೊದಲ ಆವೃತ್ತಿ ಸಕ್ಸಸ್ ಕಾಣುವ ಮುನ್ಸೂಚನೆ ಸಿಕ್ಕಿದೆ. ಸಮಾಜಕ್ಕೆ ಆದರ್ಶ ಅನ್ನಿಸುವ ಕೆಲಸ ಮಾಡಿದ ಕಮ್ಮಿ ಮಂದಿ ಮನೆಯೊಳಗೆ ತುಂಬಿರುವ ಕಾರಣ ವೀಕ್ಷಕರಿಗೂ ಮನೆ ಬಗ್ಗೆ ಆಸಕ್ತಿ ಮೂಡಿದೆ. ಎರಡೆರಡು ಸಂಬಂಧ, ಮದುವೆಯಾದವರೊಂದಿಗೆ ಸಂಬಂಧ, ಬೆಡ್ ರೂಮ್ ವಿಡಿಯೋ ವಿಚಾರಗಳೇ ಪ್ರಸ್ತಾಪವಾಗುತ್ತಿರುವ ಕಾರಣ ಗೋಡೆಗಳಿಗೂ ಕಿವಿ ಕೇಳಿಸಲಾರಂಭಿಸಿದೆ.
ಈ ನಡುವೆ ಸೋನು ಗೌಡ ಬಗ್ಗೆ ಮೊದಲ ದಿನ ಕಾಳಜಿ ತೋರಿದ್ದ ಉಳಿದ ಸ್ಪರ್ಧಿಗಳು ಕಿರಿಕ್ ರಾಣಿ ಪಟ್ಟ ಕಟ್ಟಿದ್ದಾರೆ. ಇರೋ ಬರೋ ಕಡೆ ಮೂಗು ತೂರಿಸುವ ಸೋನು ಬಗ್ಗೆ ಆಕ್ಷೇಪಗಳು ಕೇಳಲಾರಂಭಿಸಿದೆ. ಇನ್ನು ಸಂಖ್ಯೆ ಖ್ಯಾತಿಯ ಆರ್ಯವರ್ಧನ್ ಹುಡುಗಿಯರಿಗೆ ಗೌರವ ಕೊಡುತ್ತಿಲ್ಲ ಎಂದು ಮಹಿಳಾ ಸ್ಪರ್ಧಿಗಳೇ ಹೇಳಲಾರಂಭಿಸಿದ್ದಾರೆ. ಹೀಗಾಗಿ ಬಿಗ್ ಬಾಸ್ ಮನೆಯಲ್ಲಿ ನಾನೇನು ಅಂತಾ ತೋರಿಸ್ತೀನಿ ಎಂದು ಹೊರಟವರ ಮುಖವಾಡ ಕಳಚಿ ಬಿದ್ದಿದೆ.
ಇದನ್ನೂ ಓದಿ : Bantwal : ನೀನು ಸಾಯಿ….. ನನಗೆ ಸಾಯಲು ಹೇಳ್ತಿಯಾ… ಪುರಸಭೆಯಲ್ಲಿ ಕಿತ್ತಾಟ
ಇದೇ ವೇಳೆ ಪತ್ರಕರ್ತ ಸೋಮಣ್ಣ ಆರ್ಯವರ್ಧನ್ ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ಬಗ್ಗೆ ಗೊತ್ತಿಲ್ಲದ ನೀವು, ನನ್ನ ವಿಚಾರಗಳನ್ನು ಹೇಗೆ ಪ್ರಸ್ತಾಪಿಸಿದ್ರೆ, ವಿಚಾರಗಳು ಗೊತ್ತಿಲ್ಲದೆ ನೀವು ಮಾತನಾಡಬಾರದು ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ.
ವೀಕ್ಷಕರಿಂದ ತುಂಬಾ Impress ಪಡೆದ ಸ್ಪರ್ಧಿಯಾಗಿ ಆಯ್ಕೆಯಾದ ಸೋಮಣ್ಣ ನಾಮಿನೇಷನ್ ಪ್ರಕ್ರಿಯೆಯಿಂದ ಪಾರಾಗಿದ್ದಾರೆ. ಸೋಮಣ್ಣ ಅವರಿಗೆ ವಿಶೇಷ ಅಧಿಕಾರವೊಂದನ್ನು ಬಿಗ್ ಬಾಸ್ ಮಾಡಿದ್ದು ಇಬ್ಬರನ್ನೂ ನೇರವಾಗಿ ನಾಮಿನೇಟ್ ಮಾಡುವ ಅಧಿಕಾರ ಕೊಟ್ಟಿದ್ದಾರೆ.ನಾಮಿನೇಷನ್ ನಿಂದ ಪಾರಾದ ಪಾರಾದ ಸೋಮಣ್ಣ ಆರ್ಯವರ್ಧನ್ ಹಾಗೂ ಸೋನು ಗೌಡ ಅವರನ್ನು ನಾಮಿನೇಟ್ ಮಾಡಿದ್ದಾರೆ.
ಇದಾದ ಬಳಿಕ ಆರ್ಯವರ್ಧನ್ ನನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿರುವ ಸೋಮಣ್ಣ ಮಾಚಿಮಾಡ, ಮೊದಲ ದಿನ ಮನೆಗೆ ಬಂದಾಗ ಸಣ್ಣಗೆ ಇದ್ದೀರಾ ನೀವುಸ ಮಾತ್ರೆ ತೆಗೆದುಕೊಳ್ತೀರಾ ಅಂತಾ ಪ್ರಶ್ನಿಸಿದ್ರೆ ಮಾತ್ರೆ ತೆಗೆದುಕೊಳ್ತೀರಾ ಅಂದ್ರೆ ಸಣ್ಣಗಿರುವವರು ಮಾತ್ರೆ ತೆಗೆದುಕೊಳ್ತಾರೆ ಎಂದು ಅರ್ಥವೇ ಎಂದು ಪ್ರಶ್ನಿಸಿದ್ದಾರೆ. ಆರ್ಯವರ್ಧನ್ ತಮ್ಮನ್ನು ಮಾದಕ ವ್ಯಸನಿ ಎಂದು ಬಿಂಬಿಸಲು ಹೊರಟಿದ್ದಾರೆ ಅನ್ನುವ ಕಾರಣಕ್ಕಾಗಿ ಸೋಮಣ್ಣ ಆಕ್ರೋಶಗೊಂಡಿದ್ದರು.
ಮತ್ತೆ ಮುಂದುವರಿದು ವಾಗ್ದಾಳಿ ನಡೆಸಿದ ಸೋಮಣ್ಣ ಮದುವೆಯಾಗಿದೆಯೇ ಮಕ್ಕಳಾಗಿದೆಯೇ ಎಂದು ನನ್ನ ಪ್ರಶ್ನೆ ಮಾಡಿದ್ರೆ ಏನೋ ಕಾಳಜಿ ಕೇಳಿದ್ರಿ ಅಂತಾ ಇಟ್ಟುಕೊಳ್ಳೋಣ ಆದರೆ ಮಾತ್ರೆ ತೆಗೆದುಕೊಂಡಿದ್ದೀರಾ ಅಂದ್ರೆ ಅರ್ಥವೇನು ನನ್ನ ನೋವು ನನಗೆ ಗೊತ್ತು, ಊಟ ತಿಂಡಿ ಬಗ್ಗೆ ಏನಾಗಿದೆ ಅನ್ನುವುದು ನನಗೆ ಗೊತ್ತು ಎಂದು ತಿರುಗೇಟು ಕೊಟ್ಟಿದ್ದಾರೆ.
ಈ ವೇಳೆ ಇಂಗು ತಿಂದ ಮಂಗನಂತೆ ಪೆಚ್ಚು ಮೋರೆ ಹಾಕಿದ ಆರ್ಯವರ್ಧನ್, ನೀವು ಫೀಲಿಂಗ್ ನಲ್ಲಿ ಇದ್ದ ಹಾಗೇ ಅನ್ನಿಸಿತು. ಸಿಗರೇಟು, ಎಣ್ಣೆ ಸಿಗರೇಟು ದಾಸರಾಗಿರುವುದು ನಿಜ ತಾನೇ ಎಂದು ಬಿದ್ದರೂ ಮೀಸೆ ಆಗಿಲ್ಲ ಅನ್ನುವಂತೆ ವರ್ತಿಸಿದರು. ತಮ್ಮ ಪ್ರಶ್ನೆಗೆ ಈ ವ್ಯಕ್ತಿಯನ್ನು ಪ್ರಶ್ನಿಸುವುದು ವ್ಯರ್ಥ ಎಂದು ಅರಿತ ಸೋಮಣ್ಣ, ನಿಮ್ಮ ವರ್ತನೆ ನನಗೆ ಬೇಸರ ತರಿಸಿತು ಎಂದು ಎದ್ದು ಹೋಗಿದ್ದಾರೆ.
Discussion about this post