ಬೆಂಗಳೂರು : ಅರ್ಧದಲ್ಲೇ ನಿಂತಿದ್ದ ಬಿಗ್ ಬಾಸ್ ಶೋಗೆ ಮರು ಜೀವ ಬಂದಿದ್ದು, ಕೊರೋನಾ ಸೋಂಕಿನ ಎರಡನೇ ಅಲೆಯ ಅಬ್ಬರ ಕಡಿಮೆಯಾಗುತ್ತಿದ್ದಂತೆ ಬಿಗ್ ಬಾಸ್ 8ರ ಆವೃತ್ತಿ ಮತ್ತೆ ಪ್ರಸಾರ ಕಾಣಲಿದೆ.
ಜೂನ್ 21 ರಿಂದ ಕಲರ್ಸ್ ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದ್ದು, ಹಾಗೇ ನೋಡಿದರೆ ಇದು ಸೀಸನ್ ‘8A’. ಸೀಸನ್ 8 72 ದಿನಗಳ ಕಾಲ ನಡೆದಿದ್ದು, ಕೊರೋನಾ ಕಾರಣದಿಂದ ಕಾರ್ಯಕ್ರಮದಲ್ಲಿ ರದ್ದುಗೊಂಡಿತ್ತು.
ಇದೀಗ ಮತ್ತೆ ಆರಂಭವಾಗಲಿರುವ ಬಿಗ್ ಬಾಸ್ ಕಾರ್ಯಕ್ರಮವನ್ನು 40 ರಿಂದ 50 ದಿನಗಳ ಕಾಲ ನಡೆಸಲು ತೀರ್ಮಾನಿಸಲಾಗಿದೆ. ಈಗಾಗಲೇ ಜಾಹೀರಾತುದಾರರೊಂದಿಗೆ ಒಪ್ಪಂದಗಳು ನಡೆದಿದ್ದು, ಕಾರ್ಯಕ್ರಮ ಪೂರ್ತಿ ರದ್ದುಗೊಂಡರೆ ನಷ್ಟವನ್ನು ವಾಹಿನಿಯೇ ಭರಿಸಬೇಕಾಗುತ್ತದೆ.
ಇನ್ನು 12 ಹಳೆಯ ಸ್ಪರ್ಧಿಗಳ ಜೊತೆಗೆ ಹೊಸ ಎರಡು ಮುಖಗಳನ್ನು ಬಿಗ್ ಬಾಸ್ ಮನೆಗೆ ಕರೆಸಲು ಯೋಚಿಸಲಾಗಿದೆ. ಹಳೆ 12 ಸ್ಪರ್ಧಿಗಳು ಒಟ್ಟಿಗೆ ಮನೆಗೆ ಪ್ರವೇಶ ಮಾಡುವುದಿಲ್ಲ ಬದಲಾಗಿ ವಾರದ ಅಂತರದಲ್ಲಿ ಮಹಾಮನೆಗೆ ಎಂಟ್ರಿ ಕೊಡಲಿದ್ದಾರೆ.
Discussion about this post