ಮಹಾಮನೆಯ ಈ ಭಾನುವಾರದ ಎಲಿಮಿನೇಷನ್ ನಲ್ಲಿ ನಿರೀಕ್ಷೆಯಂತೆ ಶಮಂತ್ ಗೌಡ ಹೊರ ಬಂದಿದ್ದಾರೆ. ಎಲಿಮಿನೇಷನ್ ಪ್ರಕ್ರಿಯೆ ಪ್ರಾರಂಭಿಸಿದ ಸುದೀಪ್ ಮೊದಲಿಗೆ ವೈಷ್ಣವಿ ಅವರನ್ನು ಸೇವ್ ಮಾಡಿದರು. ಬಳಿಕ ಕ್ರಮವಾಗಿ ಮಂಜು, ಅರವಿಂದ್, ಪ್ರಶಾಂತ್ ಸಂಬರಗಿ ಫೈನಲ್ ವಾರಕ್ಕೆ ಪ್ರವೇಶ ಮಾಡಿದ್ದಾರೆ.
ದಿವ್ಯಾ ಸುರೇಶ್ ಹಾಗೂ ಶಮಂತ್ ನಡುವೆ ಯಾರು ಹೋಗ್ತಾರೆ ಅನ್ನುವ ಕುತೂಹಲವಿತ್ತು. ಕೊನೆಗೆ ಶಮಂತ್ ಅವರನ್ನು ಸುದೀಪ್ ಮನೆಯಿಂದ ಹೊರ ಬರುವಂತೆ ಸೂಚಿಸಿದ್ದಾರೆ. ಅಲ್ಲಿಗೆ ಮಂಗಳವಾರ ನಡೆಯಲಿರುವ ಮಧ್ಯರಾತ್ರಿ ಎಲಿಮಿನೇಷನ್ ನಲ್ಲಿ ದಿವ್ಯಾ ಉರುಡುಗ ಅಥವಾ ದಿವ್ಯಾ ಸುರೇಶ್ ಹೋಗುವುದು ಪಕ್ಕಾ ಆಗಿದೆ.
ಹಾಗೇ ನೋಡಿದರೆ ಮೊದಲ ಸೀಸನ್ ನಲ್ಲಿ ಶಮಂತ್ ಆಟ ಚೆನ್ನಾಗಿರಲಿಲ್ಲ. ಅದೃಷ್ಟವೇ ಅವರನ್ನು ಮನೆಯೊಳಗೆ ಇರುವಂತೆ ಮಾಡಿತ್ತು. ಆದರೆ ಎರಡನೇ ಇನ್ನಿಂಗ್ಸ್ ನಲ್ಲಿ ಶಮಂತ್ ಪಾಠ ಕಲಿತಿದ್ದರು. ಹೀಗಾಗಿ ಹೇಗಾದರೂ ಸರಿ ಕ್ಯಾಮಾರ ಮುಂದೆ ಕಾಣಿಸಿಕೊಳ್ಳಬೇಕು ಎಂದೇ ನಿರ್ಧರಿಸಿದ್ದ ಅವರು ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದರು. ಹಾಡುಗಳನ್ನು ಬರೆಯುವ ಮೂಲಕ ವೀಕ್ಷಕರ ಮೆಚ್ಚುಗೆ ಪಡೆದಿದ್ದರು.
ಇನ್ನು ಇವತ್ತು ಸೇವ್ ಆಗಿರುವ ಸ್ಪರ್ಧಿಗಳನ್ನು ನೋಡಿದರೆ, ವೈಷ್ಣವಿ ಗೆಲ್ಲುವ ಸಾಧ್ಯತೆಗಳಿದೆ. ಆದರೆ ಕೊನೆಯ ಕ್ಷಣದಲ್ಲಿ ವೀಕ್ಷಕರ ಮನಸ್ಸು ಬದಲಿಸಿ ಮಂಜು ಕೈಗೆ ಕಪ್ ಕೊಟ್ಟರೂ ಅಚ್ಚರಿ ಇಲ್ಲ. ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ಒಂದು ವಾರವೂ ಕ್ಯಾಪ್ಟನ್ ಆಗದೆ ಫೈನಲ್ ವಾರಕ್ಕೆ ಪ್ರವೇಶಿಸುತ್ತಿರುವುದು ವೈಷ್ಣವಿ ಸಾಧನೆಯೇ ಸರಿ.
Discussion about this post