ಕನ್ನಡ ಬಿಗ್ ಬಾಸ್ ಸೀಸನ್ 8ರ ಎರಡನೇ ಇನ್ನಿಂಗ್ಸ್ನ ಮೊದಲ ಎಲಿಮಿನೇಷನ್ ಪ್ರಕ್ರಿಯೆ ಭಾನುವಾರ ನಡೆದಿದೆ. ನಿರೀಕ್ಷೆಯಂತೆ ನಿಧಿ ಸುಬ್ಬಯ್ಯ ಮಹಾಮನೆಯಿಂದ ಹೊರ ಬಂದಿದ್ದಾರೆ.
ಈ ಬಾರಿ ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್, ರಘು ಗೌಡ, ನಿಧಿ ಸುಬ್ಬಯ್ಯ, ಮಂಜು ಪಾವಗಡ, ದಿವ್ಯಾ ಸುರೇಶ್ ಮತ್ತು ಪ್ರಿಯಾಂಕಾ ತಿಮ್ಮೇಶ್ ನಾಮಿನೇಷನ್ ಆಗಿದ್ದರು.
ಇನ್ನು ನಿಧಿ ಸುಬ್ಬಯ್ಯ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ವೀಕ್ಷಕರ ಮನಸ್ಸು ಗೆಲ್ಲುವಲ್ಲಿ ವಿಫಲರಾಗಿದ್ದರು. ಅದರಲ್ಲೂ ಪ್ರಶಾಂತ್ ಸಂಬರಗಿ ಅವರನ್ನೇ ಟಾರ್ಗೇಟ್ ಮಾಡಿದ್ದು ವೀಕ್ಷಕರಿಗೆ ಹಿಡಿಸಿರಲಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ನಿಧಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿತ್ತು.
ಇನ್ನು ಅರವಿಂದ್ ಬಗ್ಗೆ ಆಡಿದ ಮಾತು ಕೂಡಾ ನಿಧಿಗೆ ಮುಳುವಾಯ್ತು ಎನ್ನಲಾಗಿದೆ. ಹಿಂದಿನ ವಾರದಲ್ಲಿ ಅರವಿಂದ್ ಆಡಿದ ಮಾತಿನಲ್ಲಿ ತಪ್ಪಿತ್ತು. ಆದರೆ ಸಾಮಾಜಿಕ ಜಾಲತಾಣದಲ್ಲಿ ನಿಧಿಗಿಂತ ಅರವಿಂದ್ ಗೆ ಹೆಚ್ಚು ಅಭಿಮಾನಿಗಳಿದ್ದ ಕಾರಣ, ತಪ್ಪು ಮಾಡಿದ್ದ ಅರವಿಂದ್ ಪರ ಭರ್ಜರಿ ಬ್ಯಾಟ್ ಬೀಸಲಾಗಿತ್ತು.
Discussion about this post