ಬಿಗ್ ಬಾಸ್ ಕನ್ನಡದ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿ. ಈಗಾಗಲೇ 12 ಸ್ಪರ್ಧಿಗಳು ಮನೆಯೊಳಗಡೆ ಹೋಗುವುದು ಖಚಿತವಾಗಿದೆ. ಜೊತೆಗೆ 2 ಹೊಸ ಮುಖಗಳು ಕೂಡಾ ಮನೆಗೆ ಪ್ರವೇಶಿಸಲಿದೆ.
ಈ ನಡುವೆ ಬಿಗ್ ಬಾಸ್ ಪ್ರೇಕ್ಷಕರು ರಾಜೀವ್ ಅವರನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಫೈನಲ್ ತಲುಪುತ್ತಾರೆ ಅಂದುಕೊಂಡಿದ್ದ ರಾಜೀವ್ ಕನಿಷ್ಟ ಟಾಪ್ 5 ತನಕವಾದರೂ ಬರುತ್ತಿದ್ದರು. ಆದರೆ ಅನ್ಯಾಯವಾಗಿ ಅವರು ಮನೆಯಿಂದ ಹೊರ ಬರುವಂತಾಯ್ತು. ಇದು ವೀಕ್ಷಕರ ಮತಗಳಿಂದ ಆಗಿರುವ ಎಲಿಮಿನೇಷನ್ ಅಲ್ಲ. ಬಿಗ್ ಬಾಸ್ ತಾರತಮ್ಯದಿಂದ ಆಗಿರುವ ಎಲಿಮಿನೇಷನ್ ಅನ್ನುವುದು ರಾಜೀವ್ ಅಭಿಮಾನಿಗಳ ಆಕ್ರೋಶ.
ಹೀಗಾಗಿ ಇದೀಗ ಬಿಗ್ ಬಾಸ್ ಮತ್ತೆ ಪ್ರಾರಂಭವಾಗುತ್ತಿದೆ ಅನ್ನುವ ಸುದ್ದಿ ತಿಳಿದ ರಾಜೀವ್ ಅಭಿಮಾನಿಗಳು #WewantkingRajeevback ಅನ್ನುವ ಆಂದೋಲನ ಶುರುಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹೋರಾಟ ಶುರುಮಾಡಿರುವ ಅಭಿಮಾನಿಗಳು ಸುದೀಪ್ ಅವರನ್ನೂ ಟ್ಯಾಗ್ ಮಾಡುತ್ತಿದ್ದಾರೆ.
ಹಾಗಾದ್ರೆ ರಾಜೀವ್ ಮತ್ತೆ ಬಿಗ್ ಬಾಸ್ ಮನೆಗೆ ಬರಬೇಕಾ ನಿಮ್ಮ ಅಭಿಪ್ರಾಯವೇನು ಕಮೆಂಟ್ ಮಾಡಿ.
Discussion about this post