ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಮೇಲೆ ಮುಗಿ ಬಿದ್ದವರಿಗೆ ಬಿಸಿ ಮುಟ್ಟಿಸಿದ್ದಾರೆ ಸುದೀಪ್
ಬಿಗ್ಬಾಸ್ ಕನ್ನಡ ಸೀಸನ್- 10ರ ವಾರದ ಕತೆ ಕಿಚ್ಚನ ಜೊತೆ ಪ್ರಸಾರವಾಗಲು ಇನ್ನೇನು ಕೆಲವೇ ಗಂಟೆಗಳು ಬಾಕಿ. ಈ ನಡುವೆ ಮಹಾಮನೆಯಲ್ಲಿ ಸ್ಪರ್ಧಿಗಳ ನಡುವೆ ತಿಕ್ಕಾಟ ತಾರಕಕ್ಕೇರುತ್ತಿದೆ.ಅದರಲ್ಲೂ ಮನೆಯೊಳಗಿನ ಕೆಲ ಸ್ಪರ್ಧಿಗಳು ಡ್ರೋನ್ ಪ್ರತಾಪ್ ಮೇಲೆ ಮುಗಿ ಬಿದ್ದಿರುವುದನ್ನು ನೋಡಿ ವೀಕ್ಷಕರಿಗೆ ಉಗಿಯಲಾರಂಭಿಸಿದ್ದಾರೆ. ಅದೆಷ್ಟರ ಮಟ್ಟಿಗೆ ಅಂದ್ರೆ ಪ್ರತಾಪ್ ಹೊರಗಡೆ ಇದ್ದಷ್ಟು ದಿನ ಟೀಕಿಸುತ್ತಿದ್ದವರೂ ಕೂಡಾ ಡ್ರೋನ್ ಅಭಿಮಾನಿಯಾಗಿದ್ದಾರೆ.
ಡ್ರೋನ್ ಪ್ರತಾಪ್ ತಪ್ಪು ಮಾಡಿದ್ದಾನೋ, ಸರಿ ಮಾಡಿದ್ದಾನೋ ಅನ್ನೋದನ್ನ ಮನೆ ಹೊರಗಡೆ ಡಿಸೈಡ್ ಮಾಡಬೇಕು. ಬದಲಾಗಿ ಮನೆ ಒಳಗಡೆ ಇದ್ದಾಗ ಹೊರ ಪ್ರಪಂಚದ ಟಾಪಿಕ್ ಗಳನ್ನು ಎತ್ತಿರುವುದರ ಬಗ್ಗೆ ವೀಕ್ಷಕರು ಅಸಹನೆ ಹೊರ ಹಾಕಿದ್ದಾರೆ. ಅದರಲ್ಲೂ ವಿನಯ್ ಗೌಡ ವರ್ತನೆ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ವಿನಯ್ ಗೌಡ ಅವರ ಅಸಲಿ ಮುಖ ಈಗ ಹೊರ ಬಂದಿದೆ ಅಂದಿದ್ದಾರೆ ಪ್ರೇಕ್ಷಕರು.
ಇವತ್ತು ನಿನ್ನ ಡ್ರೋನ್ ರೆಕ್ಕೆಪುಕ್ಕ ಕಿತ್ತುಹಾಕ್ತೀನಿ, ಅಂಗಡಿಯಿಂದ ತಂದು ಡ್ರೋನ್ ಹಾರಿಸ್ತಾನೆ, ಡ್ರೋನ್ ತಂದು ಡೋಂಗಿ ಮಾಡಿದ್ದಾನೆ, ಮೀಡಿಯಾ ಕಣ್ಣುಗಳಿಗೆ ಮಣ್ಣು ಎರಚಿದ್ದಾನೆ ಅನ್ನುವ ಮಾತುಗಳು ಬಿಗಿ ಬಾಸ್ ಮನೆಯಲ್ಲಿ ಪ್ರತಾಪ್ ವಿರುದ್ಧ ಕೇಳಿ ಬಂದಿದೆ.
ಡೆಂಗ್ಯೂ ಜ್ವರಕ್ಕೆ ಸೆಡ್ಡು ಹೊಡೆದ ಶುಭಮನ್ ಗಿಲ್ : ಪಾಕಿಸ್ತಾನ ವಿರುದ್ಧ ಪಂದ್ಯಕ್ಕೆ ಹಾಜರು
BIGG BOSS ಮನೆಯಲ್ಲಿ ಡ್ರೋನ್ ವಿಚಾರ ಸಿಕ್ಕಾಪಟ್ಟೆ ಚರ್ಚೆಯಾಗಿದ್ದು. ತುಕಾಲಿ ಸಂತೋಷ್ ಹಾಗೂ ವರ್ತೂರ್ ಸಂತೋಷ್ ಡ್ರೋನ್ ವಿಚಾರ ಇಟ್ಟುಕೊಂಡು ಟೀಕೆ ಮೇಲೆ ಟೀಕೆ ಮಾಡಿದ್ದಾರೆ. ಸ್ನೇಹಿತ್ ಕೂಡಾಪ್ರತಾಪ್ ಅವರನ್ನು ಡೋಂಗಿ ಎಂದು ಕರೆದಿದ್ದಾರೆ. ಈ ಎಲ್ಲಾ ವಿಚಾರಗಳ ಬಗ್ಗೆ ಸುದೀಪ್ ಸಿಕ್ಕಾಪಟ್ಟೆ ಗರಂ ಆಗಿದ್ದು, ಎಸಿ ಮನೆಯಲ್ಲಿ ಸ್ಪರ್ಧಿಗಳ ಬೆವರು ಇಳಿಸಿದ್ದಾರಂತೆ.
Discussion about this post