ಬಿಗ್ ಬಾಸ್ ಮನೆಯಲ್ಲಿ ದೆವ್ವದ ಕಾಟವಿದೆ ಅನ್ನುವುದು ಹೊಸ ಸುದ್ದಿಯಲ್ಲ. ಅಲ್ಲಿ ಕೆಲಸ ಮಾಡಿ ಬಂದ ಮಂದಿ ಅಲ್ಲೊಂದು ವಿಚಿತ್ರ ಅನುಭವವಾಗುತ್ತದೆ ಎಂದು ಆತ್ಮೀಯರಲ್ಲಿ ಹೇಳಿಕೊಂಡಿದ್ದರು. ತುಂಬಾ ಜನ ಜೊತೆಗೆ ಇರ್ತೀವಿ ಹಾಗಾಗಿ ಭಯವಿಲ್ಲ, ಆದರೂ ಅಪರೂಪಕ್ಕೊಮ್ಮೆ ಒಬ್ಬರೇ ಇರುವಾಗ ಭಯವಾಗುತ್ತದೆ ಅನ್ನುವುದು ಅವರ ಮಾತಾಗಿತ್ತು. ಆದರೆ ತುಂಬಾ ಜನ ಆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.
ಆದರೆ ಇದೀಗ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಸ್ಪರ್ಧಿಯೊಬ್ಬರಿಗೆ ದೆವ್ವದ ಅನುಭವಾಗಿದೆ ಅಂದಿದ್ದಾರೆ. ನನಗೇನೋ ಕೆಟ್ಟ ಅನುಭವವಾಗಿದೆ ಎಂದು ಬ್ರೋಗೌಡ ಪ್ರಿಯಾಂಕ ಬಳಿ ಹೇಳಿಕೊಂಡಿದ್ದು, ಮನೆಯ ಕ್ಯಾಪ್ಟನ್ ಕೋಣೆಯಲ್ಲಿ ಕೂತಿದ್ದ ವೇಳೆ ನಾನು ಏನೋ ನೋಡಿದೆ, ಕಪ್ಪಗಿನ ಆಕೃತಿಯೊಂದು ಬಾತ್ ರೂಮ್ ಕಡೆ ಹೋಯ್ತು. ಅದೇ ಹೊತ್ತಿಗೆ ಸರಿಯಾಗಿ ರಘು ಅವರೆಲ್ಲಾ ಭೂತ, ಕೋಲ ಅಂತಾ ಮಾತನಾಡುತ್ತಿದ್ದರು ಎಂದು ಭಯ ಹೊರ ಹಾಕಿದ್ದಾರೆ.
ಆದರೆ ಇದು ಶಮಂತ್ ಸೃಷ್ಟಿಯೋ, ನಿಜಕ್ಕೂ ಬಿಗ್ ಬಾಸ್ ಮನಯಲ್ಲಿ ದೆವ್ವವಿದೆಯೇ ಗೊತ್ತಿಲ್ಲ. ಈ ಹಿಂದಿನ ಸೀಸನ್ ಒಂದರಲ್ಲೂ ಸ್ಪರ್ಧಿಗಳಿಗೆ ದೆವ್ವದ ಅನುಭವವಾಗಿತ್ತು.
ಒಂದು ವೇಳೆ ಇದು ಟಿ.ಆರ್.ಪಿಗಾಗಿ ಮಾಡಿದ ಕೆಲಸವಾದರೆ ಜನ ಉಗಿಯೋದು ಗ್ಯಾರಂಟಿ.
Discussion about this post