ಮೈಸೂರು : ಅಕ್ರಮವಾಗಿ BPL Card ಕಾರ್ಡ್ ದಾರರ ವಿರುದ್ಧ ಸರ್ಕಾರ ಸಮರ ಮುಂದುವರಿಸಿದೆ. ಈಗಾಗಲೇ ನಿಯಮ ಮೀರಿ BPL Card ಹೊಂದಿರುವವರ ಕಾರ್ಡ್ ರದ್ದುಗೊಳಿಸಲಾಗುತ್ತಿದೆ. ಈ ನಡುವೆ BPL Card ಹೊಂದಿರುವ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಶಾಕ್ ಕೊಟ್ಟಿದೆ.
ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿದ್ದ 19,105 ಸರ್ಕಾರಿ ನೌಕರರಿಗೆ ಈಗಾಗಲೇ ಶಾಕ್ ನೀಡಲಾಗಿದ್ದು, ಅವರ ಕಾರ್ಡ್ ಗಳನ್ನು ರದ್ದುಗೊಳಿಸಿ APL ಗೆ ವರ್ಗಾಯಿಸಲಾಗಿದೆ.
ರಾಜ್ಯದಲ್ಲಿ ಒಟ್ಟು 2,354 ಸರ್ಕಾರಿ ನೌಕರರು ಅಂತ್ಯೋದಯ, 16,751 ಮಂದಿ ಆದ್ಯತಾ ಪಡಿತರ ಚೀಟಿ ಹೊಂದಿದ್ದರು. ಇವುಗಳಲ್ಲಿ ಮೈಸೂರು ಜಿಲ್ಲೆಯಲ್ಲೇ ಅತಿ ಹೆಚ್ಚು ಅಂದ್ರೆ 1,240 ಸರ್ಕಾರಿ ನೌಕರರು ಅಕ್ರಮ ಕಾರ್ಡ್ ಗಳನ್ನು ಹೊಂದಿರುವುದು ಪತ್ತೆಯಾಗಿದೆ.
ಇನ್ನುಳಿದಂತೆ ಕಲಬುರಗಿ ಜಿಲ್ಲೆಯಲ್ಲಿ 1,068, ರಾಯಚೂರು ಜಿಲ್ಲೆಯಲ್ಲಿ 1,019, ತುಮಕೂರು ಜಿಲ್ಲೆಯಲ್ಲಿ 1,054 ಅಕ್ರಮ ಕಾರ್ಡ್ ಗಳು ಪತ್ತೆಯಾಗಿವೆ
ಇನ್ನೂ ಹಲವು ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ ಅನ್ನಲಾಗಿದ್ದು, ಇದಕ್ಕಾಗಿ ಆಹಾರ ಇಲಾಖೆ ಬಿಪಿಎಲ್, ಅಂತ್ಯೋದಯ ಕಾರ್ಡ್ ಗಳ ಪತ್ತೆಗಾಗಿ ಕಂದಾಯ ಇಲಾಖೆಯ ಇ-ಜನ್ಮ ತಂತ್ರಾಂಶದ ಮೊರೆ ಹೋಗಿದೆ.
ಗ್ರಾಮೀಣ ಪ್ರದೇಶದಲ್ಲಿ ಮೂರು ಹೆಕ್ಟೇರ್ ಕೃಷಿಭೂಮಿ, ನಗರ ಪ್ರದೇಶದಲ್ಲಿ 1 ಸಾವಿರ ಚ. ಅಡಿಗೂ ಹೆಚ್ಚು ವಿಸ್ತೀರ್ಣ ಹೊಂದಿರುವ ಕುಟುಂಬದವರು ಬಿಪಿಎಲ್ ಕಾರ್ಡ್ ಗಳನ್ನು ಪಡೆದುಕೊಳ್ಳುವಂತಿಲ್ಲ. ಹೀಗಿದ್ದರೂ, ಕೂಡ ಕೆಲವರು ಅಕ್ರಮವಾಗಿ ಅಂತ್ಯೋದಯ, ಬಿಪಿಲ್ ಕಾರ್ಡ್ ಗಳನ್ನು ಪಡೆದುಕೊಂಡಿದ್ದು, ಆಹಾರ ಇಲಾಖೆ ಕ್ರಮ ಕೈಗೊಂಡಿದೆ.
Discussion about this post