ಬೆಂಗಳೂರು : ಖಾಸಗಿ ಹೋಟೆಲ್ ಸಿಬ್ಬಂದಿ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಭೀಮಾ ಜ್ಯುವೆಲ್ಲರಿ ನಿರ್ದೇಶಕ ವಿಷ್ಣು ಭಟ್ಟ ಹಾಗೂ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ. ಜೊತೆಗೆ ವಿಷ್ಣು ಭಟ್ಟ ವಿದೇಶ್ ಡ್ರಗ್ಸ್ ಪೆಡ್ಲರ್ ಜೊತೆ ಸಂಪರ್ಕ ಹೊಂದಿದ್ದಾನೆ ಅನ್ನುವ ಅನುಮಾನ ವ್ಯಕ್ತವಾಗಿದೆ.
ಇಬ್ಬರ ಬಂಧಿಸಿದ ಬಳಿಕ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಇಂದಿರಾನಗರದಲ್ಲಿರುವ ವಿಷ್ಣು ಭಟ್ ಮನೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಗಾಂಜಾ ತುಂಬಿದ ಸಿಗರೇಟು ಹಾಗೂ ಗಾಂಜಾ ಪುಡಿ ಪತ್ತೆಯಾಗಿದೆ.
ಇದೀಗ ವಿಷ್ಣು ಭಟ್ ವಿದೇಶಿ ಡ್ರಗ್ಸ್ ಪೆಡ್ಲರ್ ಜೊತೆ ಸಂಪರ್ಕದಲ್ಲಿರುವುದಕ್ಕೆ ಸಾಕ್ಷಿಗಳು ಕೂಡಾ ಲಭಿಸಿದೆ. ಹೀಗಾಗಿ NDPS ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ನಡುವೆ ವಿಷ್ಣು ಭಟ್ ಬಿಟ್ ಕಾಯಿನ್ ದಂಧೆಯಲ್ಲಿರುವ ಬಗ್ಗೆಯೂ ಪೊಲೀಸರಿಗೆ ಮಾಹಿತಿಗಳು ಸಿಕ್ಕಿದ್ದು, ಕರಾವಳಿ ಕೆಲ ರಾಜಕಾರಣಿಗಳ ನೆರಳು ಕೂಡಾ ಈ ದಂಧೆಯಲ್ಲಿ ಕಾಣಿಸಿಕೊಂಡಿದೆ.
Discussion about this post