ಜಗತ್ತಿನ ಒಂದೇ ಒಂದು ಕಂಪನಿಯಿಂದ ಕಾಲರಾ ಲಸಿಕೆ ತಯಾರಿಕೆ
ಕೋವಿಡ್ ನಿಯಂತ್ರಣದ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹೈದರಬಾದ್ ನ ಭಾರತ್ ಬಯೋಟೆಕ್ ಸಂಸ್ಥೆ ಇದೀಗ ಕಲರಾ ರೋಗಕ್ಕೂ ಲಸಿಕೆ ಬಿಡುಗಡೆ ಮಾಡಿದೆ.
ಇದೊಂದು ಓರಲ್ ಲಸಿಕೆಯಾಗಿದ್ದು, 1 ವರ್ಷ ಮೇಲ್ಪಟ್ಟ ಮಕ್ಕಳಿಗೆ ಎರಡು ಡೋಸ್ ನೀಡಬೇಕಾಗಿದೆ. ಈಗ ಜಗತ್ತಿನ ಒಂದೇ ಒಂದು ಕಂಪನಿ ಮಾತ್ರ ಈ ಕಾಲರಾ ಲಸಿಕೆಯನ್ನು ತಯಾರಿಸುತ್ತಿದೆ.
2021 ರಿಂದ ಕಾಲರಾ ಪ್ರಕರಣಗಳು ಹಾಗೂ ಸಾವುಗಳ ಸಂಖ್ಯೆ ಏರಲಾರಂಭಿಸಿದೆ. 2023ರ ಆರಂಭದಿಂದ ಈ ವರ್ಷದ ಮಾರ್ಚ್ ಅಂತ್ಯದ ತನಕ 31 ದೇಶಗಳಲ್ಲಿ 8,24,479 ಕಾಲರಾ ಪ್ರಕರಣಗಳು ವರದಿಯಾಗಿದ್ದು, 5900 ಮಂದಿಯನ್ನು ಈ ಕಾಲರಾ ಬಲಿ ಪಡೆದಿದೆ.
ಹೀಗಾಗಿ ಸಹಜವಾಗಿಯೇ ಕಾಲರಾ ನಿಯಂತ್ರಣದ ತುರ್ತು ಅಗತ್ಯವಿದೆ. ಪ್ರತೀ ವರ್ಷ ಇಡೀ ವಿಶ್ವಕ್ಕೆ 100 ದಶ ಲಕ್ಷ ಡೋಸ್ ಲಸಿಕೆಗಳಿಗೆ ಬೇಡಿಕೆ ಇದ್ದು, ಒಂದೇ ಒಂದು ಕಂಪನಿ ಲಸಿಕೆ ತಯಾರಿಸುತ್ತಿರುವ ಕಾರಣ ಬೇಡಿಕೆ ಮತ್ತು ಉತ್ಪಾದನೆಯ ನಡುವಿನ ಅಂತರ ದೊಡ್ಡದಾಗಿತ್ತು.
ಇದೀಗ ಅಮೆರಿಕಾ ಪ್ರಾಯೋಜಿತ ಹಿಲ್ಲೆಮನ್ ಲ್ಯಾಬೊರೇಟರಿಯಿಂದ ಪರವಾನಿಗೆ ಪಡೆದು ಹಿಲ್ಚೋಲ್ ಲಸಿಕೆ ಅಭಿವೃದ್ಧಿ ಪಡಿಸಿರೋದಾಗಿ ಭಾರತ್ ಬಯೋಟೆಕ್ ಹೇಳಿದೆ. ಲಸಿಕೆ ವಿತರಣೆಗೆ ಈಗಾಗಲೇ ಭಾರತದಲ್ಲಿ ಅಗತ್ಯ ಅನುಮತಿಯನ್ನು ಪಡೆಯಲಾಗಿದ್ದು, ಇತರ ಕಡೆಗಳಲ್ಲಿ ಅನುಮತಿ ಪಡೆಯೋ ಪಕ್ರಿಯೆ ಚಾಲನೆಯಲ್ಲಿದೆ ಎಂದು ಭಾರತ್ ಬಯೋಟೆಕ್ ಹೇಳಿದೆ.
Hyderabad based Bio Tech giant, Bharat Biotech International Limited (BBIL) had announced the launch of Oral Cholera Vaccine (OCV)- HILLCHOL here on Tuesday. Bharat Biotech, known for developing vaccine for Covid – Covaxin has developed this cholera vaccine under licence from Singapore-based vaccine research organisation Hilleman Laboratories.