Peenya Flyover ಮೇಲೆ ಭಾರ ತಡೆಯೋ ಪರೀಕ್ಷೆ ನಡೆಯಲಿದೆ
18 ಜಿಲ್ಲೆಗಳನ್ನು ಸಂಪರ್ಕಿಸೋ ತುಮಕೂರು ರಸ್ತೆಯ Peenya Flyoverನಲ್ಲಿ ಭಾರ ತಡೆಯೋ ಪರೀಕ್ಷೆ ನಡೆಯಲಿದ್ದು, ಈ ಸಲುವಾಗಿ 4 ದಿನಗಳ ಕಾಲ Flyover ಬಂದ್ ಮಾಡಲು ನಿರ್ಧರಿಸಲಾಗಿದೆ.
ಜನವರಿ 16 ರಿಂದ ಜನವರಿ 19ರ ತನಕ ಈ ಪರೀಕ್ಷೆ ನಡೆಯಲಿದ್ದು, ಹೀಗಾಗಿ 16ರ ರಾತ್ರಿಯಿಂದ 19ರ ಬೆಳಗ್ಗೆ ತನಕ ವಾಹನ ಸಂಚಾರ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಜನವರಿ 16ರ ಮಂಗಳವಾರ ರಾತ್ರಿ 11 ಗಂಟೆಯಿಂದ ಭಾರ ತಡೆಯೋ ಪರೀಕ್ಷೆಗಳು ಪ್ರಾರಂಭವಾಗಲಿದೆ.
ಇದನ್ನೂ ಓದಿ : ಬಾಯ್ಕಾಟ್ ಮಾಲ್ದೀವ್ಸ್ : ದೇಶ ಟೀಕಿಸಿದವರ ಬಗ್ಗೆ ಕನ್ನಡದ ಸೆಲೆಬ್ರೆಟಿಗಳ ದಿವ್ಯ ಮೌನ
ಎರಡು ವರ್ಷಗಳ ಹಿಂದೆ ಪೀಣ್ಯ ಮೇಲ್ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡ ಕಾರಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ( NAAI ) ದುರಸ್ಥಿ ಕಾರ್ಯ ಕೈಗೊಂಡಿತ್ತು. ಈ ಹಿನ್ನಲೆಯಲ್ಲಿ ಮೇಲ್ಸೇತುವೆಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಭಾರಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು.
ಇದೀಗ ದುರಸ್ಥಿ ಕಾರ್ಯ ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಭಾರ ತಡೆಯೋ ಪರೀಕ್ಷೆ ನಡೆಸಲಿದೆ.
ಇನ್ನು 4 ದಿನಗಳ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿರೋ ಕಾರಣ, ಪ್ರಯಾಣಿಕರು ಬದಲಿ ಮಾರ್ಗಗಳನ್ನು ಬಳಸಬೇಕಾಗಿದೆ.
ನೆಲಮಂಗಲ ಕಡೆಯಿಂದ ಬೆಂಗಳೂರು ನಗರಕ್ಕೆ ಮೇಲ್ಸೇತುವೆ ಮೂಲಕ ಸಾಗೋ ವಾಹನಗಳು ಕೆನ್ನಮೆಟಲ್ ಮೀಡಿಯಾ ಸಮೀಪ ರಾಷ್ಟ್ರೀಯ ಹೆದ್ದಾರಿ ಮತ್ತು ಸರ್ವಿಸ್ ರಸ್ತೆ ಮೂಲಕ 8ನೇ ಮೈಲಿ, ದಾಸರಹಳ್ಳಿ, ದಾಲಹಳ್ಳಿ ಕ್ರಾಸ್, ಪೀಮ್ಯ, ಎಸ್ ಆರ್ ಎಸ್ ಜಂಕ್ಷನ್ ಮೂಲಕ ಗೊರಗುಂಟೆ ಪಾಳ್ಯ ತಲುಪಬಹುದಾಗಿದೆ. CMTI ಜಂಕ್ಷನ್ ನಿಂದ ನೆಲಮಂಗಲ ಕಡೆಗೆ ಮೇಲ್ಸೇತುವೆ ಮೂಲಕ ಸಾಗೋ ವಾಹನಗಳು ಪಾರ್ಲೆಜಿ ಟೋಲ್ ಕಂಪನಿ ಹತ್ತಿರದ ರಾಷ್ಟ್ರೀಯ ಹೆದ್ದಾರಿ ಮತ್ತು ಸರ್ವೀಸ್ ರಸ್ತೆಗಳಲ್ಲಿ SRS ಜಂಕ್ಷನ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ, 8ನೇ ಮೈಲಿ ಮೂಲಕ ಸಾಗಬಹುದಾಗಿದೆ.
Discussion about this post