ಬೆಂಗಳೂರು : ಭೂಮಿ ವ್ಯಾಜ್ಯ ಸಂಬಂಧ ಸುದ್ದಿ ಪ್ರಸಾರ ತಡೆಗೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಖಾಸಗಿ ವಾಹಿನಿಯ ಪತ್ರಕರ್ತನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದೆ.
ರಾಜ್ಯದ ಖಾಸಗಿ ವಾಹಿನಿಯೊಂದು ಭೂ ವ್ಯಾಜ್ಯದ ಸಂಬಂಧ ಸುದ್ದಿ ಪ್ರಸಾರ ಮಾಡುವ ವಿಚಾರದಲ್ಲಿ ಡೀಲ್ ಗೆ ಮುಂದಾಗಿತ್ತು. ಹೆಣ್ಣೂರಿನ ಅನಿಲ್ ಮತ್ತು ಸುನಿಲ್ ಅವರನ್ನು ಹಣಕ್ಕಾಗಿ ಚಾನೆಲ್ ಸಿಬ್ಬಂದಿ ಪೀಡಿಸಿದ್ದರು. ಚಾನೆಲ್ ಮಾಲೀಕರ ಕುಮ್ಮಕ್ಕಿನಿಂದಲೇ ಇವೆಲ್ಲಾ ನಡೆದಿತ್ತು ಅನ್ನುವ ಅನುಮಾನವಿದೆ.
ಚಾನೆಲ್ ಸಿಬ್ಬಂದಿಯ ಕಾಟ ಹೆಚ್ಚಾದ ಹಿನ್ನಲೆಯಲ್ಲಿ ತೀರ್ಥಪ್ರಸಾದ್ ಅನ್ನುವವರನ್ನು ಹೆಣ್ಣೂರಿಗೆ ಕರೆಸಿಕೊಂಡ ಅನಿಲ್ ಮತ್ತು ಸುನಿಲ್ ಲಕ್ಷ ಲಕ್ಷ ಹಣ ನೀಡಿದ್ದಾರೆ. ಜೊತೆಗೆ ಹಣ ಪಡೆಯುವ, ಎಣಿಸುವ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಇದಾದ ಬಳಿಕ ಆರೋಪಿ ತೀರ್ಥಪ್ರಸಾದ್ ನನ್ನು ಹೆಣ್ಣೂರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ವೇಳೆ ಹೆಣ್ಣೂರು ಪೊಲೀಸರು ಆರೋಪಿ ವಿರುದ್ಧ FIR ದಾಖಲಿಸಲು ವಿಳಂಭ ಮಾಡಿದ್ದಾರೆ ಎಂದು ಆರೋಪಿಸಿ ದೂರುದಾರರು ಠಾಣೆ ಮುಂದೆ ಪ್ರತಿಭಟನೆ ಮಾಡಿದ ಘಟನೆಯೂ ನಡೆದಿದೆ.
Discussion about this post