ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಮೂರನೇ ಅಲೆ ಪ್ರಾರಂಭವಾಗಿದ್ದು, ಇನ್ನೊಂದಿಷ್ಟು ದಿನ ಕಳೆದರೆ ರಾಜ್ಯ ರಾಜಧಾನಿಯಲ್ಲಿ ಸೋಂಕು ತೀವ್ರವಾಗಲಿದೆ. ಈ ನಡುವೆ ಜನವರಿ ಮೊದಲ ದಿನದಿಂದ ಮಕ್ಕಳೇ ದೊಡ್ಡ ಸಂಖ್ಯೆಯಲ್ಲಿ ಕೊರೋನಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಸರಾಸರಿ ಪ್ರತೀ ನಿತ್ಯ 375 ಮಕ್ಕಳು ಸೋಂಕಿಗೆ ತುತ್ತಾಗುತ್ತಿರುವುದು ಹೊಸ ಆತಂಕಕ್ಕೆ ಕಾರಣವಾಗಿದೆ.
ಜನವರಿ 1 ರಿಂದ 7 ದಿನಗಳ ಅವಧಿಯಲ್ಲಿ 19 ವರ್ಷದ ಒಳಗಿನ 2628 ಮಕ್ಕಳು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಈ ಪ್ರಮಾಣ 100ರ ಒಳಗಿತ್ತು. ಆದರೆ ಹೊಸ ವರ್ಷದ ಬೆನ್ನಲ್ಲೇ ಸಂಖ್ಯೆ ಏರತೊಡಗಿದೆ. ಗಮನಾರ್ಹ ಅಂಶ ಅಂದ್ರೆ ಸೋಂಕಿಗೆ ಒಳಗಾಗುತ್ತಿರುವ ಬಹುತೇಕ ಮಕ್ಕಳು ರೆಗ್ಯೂಲರ್ ತರಗತಿಗಳೆ ಹಾಜರಾಗುತ್ತಿದ್ದರು.
ಆತಂಕದ ನಡುವೆ ಗುಡ್ ನ್ಯೂಸ್ ಅಂದ್ರೆ ಸೋಂಕಿತ ಬಹುತೇಕ ಮಕ್ಕಳಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲ. ಇನ್ನ ರೋಗ ಲಕ್ಷಣ ಹೊಂದಿರುವ ಮಕ್ಕಳು ಆಸ್ಪತ್ರೆಗೆ ದಾಖಲಾಗುವ ಪ್ರಮೇಯವೂ ಉದ್ಭವಿಸಿಲ್ಲ. ಎಲ್ಲಾ ಮಕ್ಕಳು ಬೋಮ್ ಐಸೋಲೇಷನ್ ಮೂಲಕವೇ ಗುಣಮುಖರಾಗುತ್ತಿದ್ದಾರೆ. ಹೀಗಾಗಿ ಆತಂಕ ಪಡೋ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಹೇಳಿದ್ದಾರೆ.
Discussion about this post