ಬೆಂಗಳೂರು : ಕೊರೋನಾ ಸಂಕಷ್ಟ ಕಾಲದಲ್ಲಿ ನಮ್ಮ ಮೆಟ್ರೋ ನಿಗಮ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿತ್ತು. ಪ್ರಯಾಣಿಕರ ಕೊರತೆಯ ಕಾರಣದಿಂದ ನಿಗಮಕ್ಕೆ ಆರ್ಥಿಕ ಹೊರೆಯಾಗಿತ್ತು. ಆದರೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕೊರೋನಾ ನಿಯಮಗಳು ನಮ್ಮ ಮೆಟ್ರೋಗೆ ಆರ್ಥಿಕ ಮೂಲ ಒದಗಿಸಿದೆ.
ಮಾಸ್ಕ್ ಧರಿಸದವರಿಗೆ, ಸಾಮಾಜಿಕ ಅಂತರ ಕಾಪಾಡದವರಿಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಒದಗಿಸಲಾಗಿದೆ. ಈ ಕಾನೂನುನನ್ನು ಕಟ್ಟು ನಿಟ್ಟಾಗಿ ಜಾರಿಗೆ ತಂದಿರುವ ನಮ್ಮ ಮೆಟ್ರೋ, ತನ್ನ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದವರಿಗೆ, ಸಾಮಾಜಿಕ ಅಂತರ ಕಾಪಾಡದವರಿಗೆ 250 ರೂಪಾಯಿ ದಂಡ ವಿಧಿಸುತ್ತಿದೆ.
ಅನ್ ಲಾಕ್ ಪ್ರಕ್ರಿಯೆ ಪ್ರಾರಂಭವಾದ ಬಳಿಕ ಮೆಟ್ರೋ ಸಂಚಾರಕ್ಕೆ ಅವಕಾಶ ಸಿಕ್ಕಿದೆ. ಈ ವೇಳೆ ಮೆಟ್ರೋ ತನ್ನ ಪ್ರಯಾಣಿಕರಲ್ಲಿ ಕೊರೋನಾ ನಿಯಮ ಪಾಲನೆಗೆ ಒತ್ತು ನೀಡುತ್ತಿದೆ. ಹೀಗಾಗಿ ನಿಯಮ ಪಾಲಿಸದ ಪ್ರಯಾಣಿಕರಿಂದ ಈ ತನಕ ಕೋಟಿ ರೂಪಾಯಿ ದಂಡ ಸಂಗ್ರಹಿಸಿದೆ. ಕೇವಲ 14 ತಿಂಗಳಲ್ಲಿ ಸಂಗ್ರಹಿಸಿದ ದಂಡ ಮೊತ್ತ 1 ಕೋಟಿ ರೂಪಾಯಿ ದಾಟಿದೆ.
Discussion about this post